ಜಿಲ್ಲಾ ಕಾರ್ಮಿಕ ಅಧಿಕಾರಿಗಳನ್ನು ಸನ್ಮಾನಿಸಿದ : ಕರ್ನಾಟಕ ರಾಜ್ಯ ಪಿಂಜಾರ ನದಾಫ್ ಸಂಘ

ತುಮಕೂರು : ಇತ್ತೀಚೆಗೆ ತುಮಕೂರು ಜಿಲ್ಲಾ ಕಾರ್ಮಿಕ ಇಲಾಖೆಗೆ ನೂತನ ಕಾರ್ಮಿಕ ಅಧಿಕಾರಿಗಳಾಗಿ ವರ್ಗಾವಣೆಯಾಗಿ ಬಂದ ಇಬ್ರಾಹಿಂ ಸಾಬ್ ರವರನ್ನು ಕರ್ನಾಟಕ ಪಿಂಜಾರ ನದಾಫ್ ಜನಾಂಗದ ಕ್ಷೇಮಾಭಿವೃದ್ಧಿ ಸಂಘ, ರಾಜ್ಯ ಘಟಕದ ವತಿಯಿಂದ ಹೂಗುಚ್ಛ ನೀಡಿ ಸನ್ಮಾನಿಸಲಾಯಿತು.

 

 

 

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಬಷೀರ್ ಅಹಮದ್‌ರವರು ಮಾತನಾಡಿ ನಮ್ಮ ಜನಾಂಗವು ಅತ್ಯಂತ ಕಿರಿಯ ಜನಾಂಗವಾಗಿದ್ದು, ಬಹುತೇಕರು ಸಣ್ಣ-ಪುಟ್ಟ ಕೆಲಸ ಕಾರ್ಯಗಳನ್ನು ಅಂದರೆ ಗಾದಿ, ದಿಂಬು, ಹಾಸಿಗೆ ಹೊಲೆಯುವುದು ಸೇರಿದಂತೆ ಸಣ್ಣ ಪ್ರಮಾಣ ಕರಕುಶಲ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ, ನಮ್ಮಗಳಿಗೆ ತಮ್ಮ ಇಲಾಖೆಯಿಂದ ಇತ್ತೀಚೆಗೆ ಕಾರ್ಮಿಕರ ಗುರುತಿನ ಚೀಟಿಯನ್ನು ನೀಡುತ್ತಿದ್ದು, ಇದರಿಂದ ಬಹಳ ಅನುಕೂಲಕರವಾಗಿದೆ ಜೊತೆಗೆ ತಮ್ಮ ಇಲಾಖೆಯಿಂದ ಸಿಗಬಹುದಾದ ಸೌಲಭ್ಯಗಳನ್ನು ಒಂದು ಕಾರ್ಯಗಾರ ಮಾಡಿ ಎಲ್ಲರಲ್ಲೂ ಅರಿವು ಮೂಡಿಸುವಂತಹ ಕಾರ್ಯಕ್ರಮಗಳು ತಮ್ಮಿಂದ ಆಗಬೇಕಾಗಿದೆ ಎಂದು ಮನವಿಯನ್ನು ಸಹ ಮಾಡಿದರು.

ಇದಕ್ಕೂ ಮುಂಚಿತವಾಗಿ ಕರ್ನಾಟಕ ರಾಜ್ಯ ಪಿಂಜಾರ ನದಾಫ್ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಕಾರ್ಯಕಾರಣಿ ಸಭೆಯನ್ನು ರಾಜ್ಯಾಧ್ಯಕ್ಷರಾದ ಬಷೀರ್ ಅಹಮದ್‌ರವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕಾರಣಾಂತರಗಳಿಂದ ಈ ಹಿಂದೆ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಬ್ದುಲ್ ಲತೀಫ್ ರವರನ್ನು ಮತ್ತೊಮ್ಮೆ ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನೇ ಉಪಾಧ್ಯಕ್ಷನಾಗಿ ಮುಂದುವರಿಸಲು ತೀರ್ಮಾನಿಸಲಾಯಿತು, ನಂತರ ನೂತನವಾಗಿ ಸಹ-ಕಾರ್ಯದರ್ಶಿಯನ್ನಾಗಿ ಜಾಫರ್ ಸಾಧಿಕ್ ರವರನ್ನು ನೇಮಕಾತಿ ಮಾಡಲಾಯಿತು. ಈ ಸಂದರ್ಭಲ್ಲಿ ರಾಜ್ಯ ನಿರ್ದೇಶಕ ಶಫಿ ಐ.ಎಂ, ರಾಜ್ಯ ಕಾರ್ಯದರ್ಶಿ ಮೆಹಬೂಬ್ ಪಾಷಾ, ರಾಜ್ಯ ಖಜಾಂಚಿ ನಝೀರ್ ಅಹ್ಮದ್, ಉಪಾಧ್ಯಕ್ಷ ಅಬ್ದುಲ್ ಲತೀಫ್, ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ನಬೀರಸುಲ್ ಡಿ ಇಲಿಯಾಸ್, ಅಲಿಬೈ, ಕೊರಟಗೆರೆ ಸಂಘಟನಾ ಕಾರ್ಯದರ್ಶಿ ಗೌಸ್ ಪೀರ್, ಸೇರಿದಂತೆ ಇನ್ನಿತರರು ಉಪಸ್ಥಿರಿದ್ದರು.

Leave a Reply

Your email address will not be published. Required fields are marked *

error: Content is protected !!