ತುಮಕೂರು ನಗರದ ಕ್ಯಾತ್ತ್ಸಂದ್ರದ ಜ್ಞಾನ ಗಂಗಾ ವಿದ್ಯಾ ಕೇಂದ್ರದಲ್ಲಿ ನಡೆದ ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ಫೆಡರೇಶನ್ ವತಿಯಿಂದ ಸದಸ್ಯರ ಮಕ್ಕಳಿಗೆ (ನರ್ಸರಿ ಯಿಂದ ಎಸ್. ಎಸ್. ಎಲ್. ಸಿ ವರೆಗಿನ )ಉಚಿತ ನೋಟ್ ಪುಸ್ತಕಗಳನ್ನು ಜಿಲ್ಲಾ ಗೌರವಾಧ್ಯಕ್ಷರಾದ ಡಾ. ಎಸ್.ನರೇಂದ್ರ ಕುಮಾರ್, ಜಿಲ್ಲಾ ಅಧ್ಯಕ್ಷರಾದ ಶ್ರೀ. ಸುಬ್ರಮಣ್ಯ ಶಾಸ್ತ್ರೀ ರವರ ನೇತೃತ್ವದಲ್ಲಿ ವಿತರಿಸಲಾಯಿತು


ಎಸ್. ಎಸ್. ಎಲ್. ಸಿ ಹಾಗೂ ಪಿ. ಯು. ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು, ಈ ಸಂದರ್ಭದಲ್ಲಿ ಡಾ. ಸುಧಾಕರ ಶರ್ಮ, ಡಾ. ಶ್ರೀಧರ ಶರ್ಮ, ಡಾ. ಅನಂತ ಕೃಷ್ಣ,ಡಾ. ಶೇಷಾದ್ರಿ ಕಡಬ, ಭಾರದ್ವಾಜ ಶರ್ಮ, ಮಂಜುನಾಥ ರಾವ್, ಶಿರಾ ಸುರೇಶ್ ಶಾಸ್ತ್ರಿ,ಜಯಕೃಷ್ಣ, ಪಾವಗಡ ಕೃಷ್ಣ ಶಾಸ್ತ್ರಿ, ಸತ್ಯನಾರಾಯಣ, ಮಹೇಶ್ವರ ಭಟ್, ಲಕ್ಷ್ಮಣ ಶಾಸ್ತ್ರಿ, ಸುಮನ್ ಹಾಗೂ ಅನೇಕ ವೇದ ವಿದ್ವಾಂಸರು, ಅರ್ಚಕರು, ಪುರೋಹಿತರು, ಅಡುಗೆ ಭಟ್ಟರು, ಮಾತೆಯರು ಭಾಗವಹಿಸಿದ್ದರು.