“ಜಸ್ಟಿಸ್ ಫಾರ್ ಸೌಮ್ಯ” ಸಿನಿಮಾ ಮಾಡ್ತಿದ್ದಾರಾ ನಿರ್ದೇಶಕ ಟೈಗರ್ ನಾಗ್ !!

ಹೌದು ! ಹೀಗೊಂದು ಗುಮಾನಿ ಚಂದನವನದಲ್ಲಿ ಶುರುವಾಗಿದೆ. “ಜಸ್ಟೀಸ್ ಫಾರ್ ಸೌಮ್ಯ” ಈ ಶೀರ್ಷಿಕೆಯನ್ನು ಕೇಳಿದ ತಕ್ಷಣವೇ ನೆನಪಿಗೆ ಬರುವುದು ಧರ್ಮಸ್ಥಳದಲ್ಲಿ 2012 ರಲ್ಲಿ ಅತ್ಯಾಚಾರಕ್ಕೊಳಗಾಗಿ ನಿಗೂಢವಾಗಿ ಕೊಲೆಯಾದ ಸಹೋದರಿ ಸೌಜನ್ಯ.

 

 

 

ಸೌಜನ್ಯ ಪ್ರಕರಣದ ನಿಜವಾದ ಆರೋಪಿಗಳು ಯಾರೆಂದು ಇನ್ನೂ ನಿಗೂಢವಾಗಿದ್ದು ದಿನಾಂಕ 03.07.2025 ರಂದು ವಕೀಲರೊಬ್ಬರು ಮಂಗಳೂರಿನಲ್ಲಿ ಎಸ್ ಪಿ ಯನ್ನು ಭೇಟಿಯಾಗಿ ಅನಾಮಿಕ ವ್ಯಕ್ತಿಯ ದೂರನ್ನು ಎಸ್ಪಿ ಗೆ ಸಲ್ಲಿಸಿದ್ದು ಧರ್ಮಸ್ಥಳದಲ್ಲಿ ನಡೆದ ನೂರಾರು ಹೆಣ್ಣುಮಕ್ಕಳ ಅತ್ಯಾಚಾರ ಕೊಲೆಗಳ ಪ್ರಕರಣದಲ್ಲಿ ಶವಗಳನ್ನು ಸುಟ್ಟ, . ಹೂತಿಟ್ಟ ಬೀಕರ ಪ್ರಕರಣಗಳ ಬಗ್ಗೆ ಪ್ರಶ್ಚಾತಾಪ ಪಟ್ಟು ಅನಾಮಧೇಯ ವ್ಯಕ್ತಿ ನೀಡಿದ ಸತ್ಯಕಥೆಯ ಹೇಳಿಕೆಯುಳ್ಳ ದೂರನ್ನು ವಕೀಲರು ಎಸ್ ವಿ ಸಲ್ಲಿಸಿ ಪ್ರಕರಣಕ್ಕೆ ಸ್ಪೋಟಕ ತಿರುವು ನೀಡಿದ್ದಾರೆ. ಇದೇ ಸಮಯದಲ್ಲಿ ಸಾಮಾಜಿಕ ಹೋರಾಟಗಾರ, ನಟ , ನಿರ್ದೇಶಕ ಟೈಗರ್ ನಾಗ್ “ಜಸ್ಟೀಸ್ ಫಾರ್ ಸೌಮ್ಯ” ಎಂದು ತಮ್ಮ ಚಿತ್ರಕ್ಕೆ ಶೀರ್ಷಿಕೆ ಇಟ್ಟು ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಮುಗಿಸಿ ಚಿತ್ರದ ಮೊದಲ ಲಿರಿಕಲ್ ಸಾಂಗ್ ಬಿಡುಗಡೆ ಮಾಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

 

 

 

ಈಗಾಗಲೇ ಸಂಪೂರ್ಣ ಚಿತ್ರೀಕರಣ ಮುಗಿಸಿ ಕೆಲವು ದೃಶ್ಯಗಳನ್ನು ಮಾತ್ರ ಮರು ಚಿತ್ರೀಕರಿಸುವ ಯೋಚನೆಯಲ್ಲಿರುವ ಟೈಗರ್ ನಾಗ್ ತಮ್ಮ ಚಿತ್ರದಲ್ಲಿ ದೇಶಾದ್ಯಂತ ಅತ್ಯಾಚಾರ ಪ್ರಕರಣಗಳ ವಿರುದ್ಧದ ಹೋರಾಟಗಳಿಗೆ ಕಿಚ್ಚು ಹಚ್ಚುವ ಸಾಹಿತ್ಯ ಇರುವ ‘ಧಗ ಧಗ ಉರಿಯುತ್ತಿದೆ ಜ್ವಾಲೆ ‘ ಎಂಬ ತಮ್ಮ ಸಾಹಿತ್ಯ ಇರುವ ಪ್ರಥಮ ಲಿರಿಕಲ್ ವಿಡಿಯೋ ಸಾಂಗ್ ಅನ್ನು ತಮ್ಮ ದೇ ‘ ಬಿ’ ಮ್ಯೂಸಿಕ್ ‘ ಯು ಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ನೇರ ಹೋರಾಟ ಮಾಡುತ್ತಾ ಬಂದಿರುವ ನಿರ್ದೇಶಕ ಟೈಗರ್ ನಾಗ್ ಸಿನಿಮಾದಲ್ಲೂ ಅತ್ಯಾಚಾರಕ್ಕೆ ಒಳಗಾದ ಹೆಣ್ಣಿಗೆ ಹೋರಾಟದ ಮೂಲಕ ನ್ಯಾಯ ಕೊಡಿಸುವ ಪ್ರಯತ್ನ ಮಾಡಿರಬಹುದಾ ಎಂಬ ಚರ್ಚೆ ಚಿಂತಕರ ಚಾವಡಿಯಲ್ಲಿ ಶುರುವಾಗಿದ್ದು ವಿಪಿನ್ ಛಾಯಾಗ್ರಹಣ, ಕೆ. ಮಂಜು ಕೋಟೆಕೆರೆ ಸಂಭಾಷಣೆ ಒದಗಿಸಿರುವ ಈ ಚಿತ್ರಕ್ಕೆ ಟೈಗರ್ ನಾಗ್ ಸಂಗೀತ ನೀಡಿದ್ದಾರೆ.

 

ಈಗ ಬಿಡುಗಡೆಯಾಗಿರುವ ಹೋರಾಟದ ಹಾಡನ್ನು ತಾವೇ ಬರೆದು, ಹಾಡಿರುವ ಟೈಗರ್ ನಾಗ್, ಹಾಡಿನಲ್ಲೂ ಸಾಕಷ್ಟು ಗಂಭೀರ ವಿಷಯಗಳನ್ನು ಹೇಳಿದ್ದಾರೆ.
ಚಿತ್ರದ ತಾರಾಬಳಗದ ಮಾಹಿತಿ ಸದ್ಯಕ್ಕೆ ಬಿಡುಗಡೆ ಮಾಡದೆ ಗೌಪ್ಯವಾಗಿಟ್ಟಿದ್ದು ಚಿತ್ರದ ಬಿಡುಗಡೆ ಸಮಯದಲ್ಲಿ ನೀಡುವುದಾಗಿ ರಿವೀಲ್ ಮಾಡುವುದಾಗಿ ನಿರ್ದೇಶಕ ಟೈಗರ್ ನಾಗ್ ತಿಳಿಸಿದ್ದಾರೆ. ಚಿತ್ರದ ಪರ ವಿರೋಧದ ಬಿಸಿ ಬಿಸಿ ಚರ್ಚೆಗಳು ಗಾಂಧಿನಗರದಲ್ಲಿ ಆರಂಭವಾಗಿವೆ.

Leave a Reply

Your email address will not be published. Required fields are marked *

error: Content is protected !!