ಇದಕ್ಕೆಲ್ಲ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ ನೋಡೋಣ
ನಮಗೆಲ್ಲ ತಿಳಿದಿರುವಂತೆ ಚಂದ್ರನು ಗುರುವಿನ ಪತ್ನಿಯಾದ ತಾರಳನ್ನು ಮೋಹಿಸಿ ಮದುವೆಯಾದರೆ ಫಲವೇ ಬುಧನ ಜನನ
ಚಂದ್ರನು ತನ್ನ ಮಗನಿಗೆ ವಿದ್ಯೆ ಹೇಳಿ ಕೊಡಬೇಕೆಂದು ಗುರುವನ್ನು ಕೇಳಿಕೊಂಡನು. ಗುರುವು ಕೋಪವಿದ್ದರೂ ತನ್ನ ಗುರುಸ್ಥಾನಕ್ಕೆ ಗೌರವ ಕೊಟ್ಟು ಧರ್ಮದ ದೃಷ್ಟಿಯಿಂದ ಪಾಠ ಹೇಳಿಕೊಡಲು ಒಪ್ಪಿಕೊಂಡರು.
ಹೀಗೆ ದೇವತೆಗಳ ಸಮೂಹ, ಗ್ರಹಗಳ ಸಮೂಹದಲ್ಲಿ ವಿದ್ಯೆ ಕಲಿಯುತ್ತಾ ಕಾಲವು ಉರುಳಿತು, ಒಂದು ದಿನ ಅವರೊಳಗೆ ಒಂದು ಕಲಹ ಏರ್ಪಟ್ಟಿತ್ತು ನಿಮ್ಮ ತಂದೆ ಯಾರು ನಿಮ್ಮ ತಾಯಿ ಯಾರು ಎಂಬ ಬಗ್ಗೆ ವಾಗ್ವಾದವಾಯಿತು .
ಆಗ ಆ ಗುಂಪಿನಲ್ಲಿದ್ದ ಕುಜನು ಇವನು ಗುರುವಿನ ಮಗನು ಎಂದಾಗ ಮತ್ತೊಬ್ಬ ದೇವತೆಯು ಇವನು ಗುರುವಿನ ಹೆಂಡತಿಯಾದ ತಾರೆಗೆ ಜಾರತನದಲ್ಲಿ ಹುಟ್ಟಿದ ಮಗ ಎಂದಾಗ ಎಲ್ಲರೂ ಹಾಸ್ಯ ಮಾಡಿದರು … ಆಗ ಕುಜನು ಬುಧನನ್ನು ಅಣಕಿಸಿದರು .. ಗುರುವಿನ ಮೇಲಿದ್ದ ಕೋಪಕ್ಕೆ ಶುಕ್ರಾಚಾರ್ಯರು ಬುಧನ ಸಹಾಯಕ್ಕೆ ಬಂದರು.

ಶನಿಯು ಚಂದ್ರನ ಮೇಲಿದ್ದ ಕೋಪಕ್ಕೆ ಬುದನ ಸಹಾಯಕ್ಕೆ ನಿಂತರು, ರಾಹು ಕೇತುಗಳು ಚಂದ್ರನ ಮೇಲಿದ್ದ ಕೋಪಕ್ಕೆ ಬುಧನ ಸಹಾಯಕ್ಕೆ ನಿಂತರು, ಹೀಗೆ ನವಗ್ರಹಗಳಿಗೆ ತಮ್ಮ ತಮ್ಮೊಳಗೆ ದ್ವೇಷ ಅಸೂಯೆ ಏರ್ಪಟ್ಟಿತ್ತು ಕುಜನು ಬುಧನನ್ನು ಅಣಕಿ ಸಿದ್ದರಿಂದ ಬುಧನು ಕುಜನಿಗೆ ಶತ್ರುವಾದರು.
ಶುಕ್ರಾಚಾರ್ಯರು ಗುರುವಿಗೆ ಶತ್ರು ಾದರೂ ಬುಧನಿಗೆ ಮಿತ್ರರಾದರು ರಾಹುಕೇತುಗಳು ಬುಧರಿಗೆ ಮಿತ್ರರಾದರು ಕುಜರಿಗೆ ಶತ್ರುವಾದರು ಶನಿಗೆ ಸಮವಾದರು. ಚಂದ್ರರು ಸಹಜ ಗುಣ ಹೊಂದಿದ್ದರಿಂದ ಚಂದ್ರರಿಗೆ ಯಾರು ಶತ್ರು ಇಲ್ಲವಾದರು.
ಆದರೆ ಚಂದ್ರ ತುಂಬಿದ ದೇವ ಸಭೆಯಲ್ಲಿ ಬುಧನನ್ನು ಮಗನಾಗಿ ಒಪ್ಪಿಕೊಂಡರು. ಗುರುವು ಪುತ್ರ ಪ್ರೇಮದಿಂದ ಧರ್ಮಕ್ಕೆ ಕಟ್ಟುಬಿದ್ದು ಬುಧರನ್ನು ಔರಸ ಪುತ್ರ ಎಂದು ಕರೆದು ಮಗನೆಂದು ಒಪ್ಪಿಕೊಂಡರು….

ಈ ರಹಸ್ಯವನ್ನು ಎಲ್ಲರ ಮುಂದಿಟ್ಟು ಬುಧರನ್ನು ಅವಮಾನ ಮಾಡಿದ್ದರಿಂದ ಬುಧರು ಚಂದ್ರ ಮತ್ತು ಗುರುವನ್ನು ಶತ್ರು*ವನ್ನಾಗಿ ಕಂಡರು .ಅತ್ರಿ ಮಹರ್ಷಿಯ ಪುತ್ರರಾದ ಚಂದ್ರರು ಬುಧನಿಗೆ ತಂದೆ ಯಾದ್ದರಿಂದ ಬುಧನಿಗೆ ಅತ್ರಿ ಗೋತ್ರ ವಾಯಿತು ಗುರುವು ಬುಧನನ್ನು ಮಗ ಎಂದು ಒಪ್ಪಿಕೊಂಡಿದ್ದರಿಂದ ಬುಧನು ಅಂಗೀರಸ ಗೊತ್ರಕ್ಕುಾ ಸೇರಿದರು .(ಗುರು ಅಂಗೀರಸ ಮಹರ್ಷಿಯ ಮಗ )
ಮುಂದೆ ಬುಧನು ಬೆಳೆದು ಪಿತೃ ದೇವತೆಯ ಮಗನಾದ ಪುರೂರವನ ಮಗಳಾದ ಇಳೆಯನ್ನು ಮದುವೆಯಾದವನು
ಇದರಿಂದ ಬುಧನು ಬಂಧು ಪುಾಜ್ಯನಾದನು.
ತಾರಾಮಂಡಲದಲ್ಲಿ ರಾಶಿ ಚಕ್ರದಲ್ಲಿ ಸುತ್ತುವಾಗ ತನ್ನ ತಂದೆಯ ಮನೆಗೆ ಕಟಕ ರಾಶಿಯನ್ನು ಪ್ರವೇಶಿಸುವಾಗ ತನ್ನ ದ್ವೇಷವನ್ನು ಆ ರಾಶಿಯಲ್ಲಿ ಬುಧನು ತೀರಿಸಿಕೊಳ್ಳುವನ್ನು ಆಷಾಢ ಮಾಸ ಬಂದಾಗ ಬುಧರು ಕಟಕ ರಾಶಿಗೆ ಪ್ರವೇಶಿಸುವರು . ಚಂದ್ರನು ಮನಸ್ಸಿನ ಕಾರಕ ರಾದ್ದರಿಂದ ಬುಧರು ವ್ಯಾಪಾರ ಕಾರಕರಾದರಿಂದ ವ್ಯಾಪಾರ ವ್ಯವಹಾರ ವಹಿವಾಟು ಎಲ್ಲವೂ ಏರುಪೇರು ಮಾಡುವವರು ಸ್ಥಗಿತಗೊಳಿಸುವರು ಇದರಿಂದ ವ್ಯಾಪಾರಸ್ಥರಿಗೆ ಈ ಮಾಸದಲ್ಲಿ ನಷ್ಟ ಉಂಟಾಗುವುದು.
ಬುದ್ಧಿಕಾರಕ ವಿದ್ಯಾಕಾರಕ ಆದ ಬುಧರು ಕಟಕ ರಾಶಿಯಲ್ಲಿ ಇರುವಾಗ ವಿದ್ಯೆಯು ಪಲ್ಲಟ ಗೊಳ್ಳುವುದು .ವಿದ್ಯೆಯು ಕುಂಠಿತವಾಗುವುದ. ಬುಧರು ಜಲ ರಾಶಿಯಲ್ಲಿದ್ದಾಗ ಮರೆವು ಹೆಚ್ಚು ಬುಧರ ಹೆಂಡತಿ ಇಳೆಯು. ಚಂದ್ರ ತಾರೆಯರನ್ನು ದ್ವೇಷಿಸಿದಳು. ತನ್ನ ಗಂಡನಿಗೆ ಆದ ಅನ್ಯಾಯವನ್ನು ಆಗಾಗ ಎತ್ತಿ ಆಡಿದ್ದರಿಂದ ಅತ್ತೆ ಸೊಸೆಯರು ಒಂದೇ ಮನೆಯಲ್ಲಿ ಇರುವುದು ತೊಂದರೆಯಾಗಿತ್ತು ಅತ್ತೆ ಸೊಸೆಯರು ಹೊಸಲು ದಾಟಲು ವಿರೋಧವಾದರು..

ಇದು ದಕ್ಷಿಣಾಯನ ಕಾಲವಾದ್ದರಿಂದ ಪಿತೃಗಳಿಗೆ ಹಗಲು ದೇವತೆಗಳಿಗೆ ರಾತ್ರಿ. ಪಿತೃಗಳು ಬುಧರಿಗೆ ಮಾವಂದಿರು …ಈ ಮಾವಂದಿರ ಮನೆಗೆ ಬುಧರು ಅಳಿಯನಾಗಿ ಹೋಗಲು ಇಷ್ಟವಾಗಲಿಲ್ಲ ಹೀಗೆ ಇದೇ ಆಚರಣೆ ಕಾಲಕ್ರಮೇಣ ಉರುಳಿ ಭೂಲೋಕದಲ್ಲಿ ಆಚರಣೆಗೆ ಬಂದು ಮಾನವರು ಹೀಗೆ ಪರದಾಡಬೇಕಾಯಿತು.