ತುಮಕೂರು : ರಕ್ಷಣಾ ಪಡೆಗಳು ನಮ್ಮ ದೇಶದ ಹಾಗೂ ಗೌರವದ ಪ್ರತೀಕವಾಗಿದೆ.ಇಂಥ ರಕ್ಷಣೆ ಪಡೆಯಲಿ ಸೇವೆ ಸಲ್ಲಿಸಲು ಭಾರತೀಯರಾದ ನಾವು ಮುಂದಾಗಬೇಕು ಅಖಂಡ ಭಾರತವನ್ನು ಉಳಿಸಲು ವಿಶ್ವಕ್ಕೆ ಭಾರತದ ಏಕ್ಯತೆ ಸಾರಲು ನಮ್ಮಲ್ಲಿನ ಒಗ್ಗಟ್ಟಿನ ಅರಿವು ಮೂಡಿಸಲು ನಾವು ರಕ್ಷಣಾ ಪಡೆಗೆ ಸೇರಬೇಕು.ದೇಶದ ನೆಲ, ಗಡಿ,ಜಲ,ಪ್ರಾಕೃತಿಕ ಸಂಪತ್ತಿನ ರಕ್ಷಣೆಗಾಗಿ ರಕ್ಷಣಾ ಪಡೆಯಲ್ಲಿ ಭಾಗಿಯಾಗಬೇಕು ಭಾರತೀಯರಲ್ಲಿ ಮಾನವೀಯ ಮೌಲ್ಯ ಉಳಿಸಲು ಬೆಳೆಸಲು ಶಾಂತಿಯನ್ನು ಕಾಪಾಡಲು ನಾವು ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಬೇಕು.ಹೌದು ಕೇಂದ್ರ ಸರ್ಕಾರದ ವಕೀಲ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪನವರು ಕರ್ನಾಟಕ ಘನವಿತ್ತ ರಾಜ್ಯಪಾಲರ ಮುಖಾಂತರ ಘನತೆವೆತ್ತ ಭಾರತದ ರಾಷ್ಟ್ರಪತಿಗಳಿಗೆ ದೇಶ ದೇಶ ಸೇವೆ ಮಾಡಲು ಇಚ್ಛೆಯ ರವಾನಿಸಿದ್ದಾರೆ.
ಸ್ವ ಇಚ್ಛೆ ಪತ್ರ ರವಾನಿಸಿ ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ಕೃತ್ಯ ದೇಶದ ಶಾಂತಿ ನೆಮ್ಮದಿಯನ್ನು ಭಂಗಗೊಳಿಸಿದೆ.
2023 ನೇ ಆಗಸ್ಟ್ ತಿಂಗಳಲ್ಲಿ 10 ದಿನಗಳ ಕಾಲ “ಸಲಾಂ ಸೋಲ್ಜರ್” ಶೀರ್ಷಿಕೆ ಅಡಿಯಲ್ಲಿ ಯುವಕರು’ದೇಶ ರಕ್ಷಣೆಗೆ ಒಂದಾಗಿ ಸೈನ್ಯ ಸೇರಲು ಮುಂದಾಗಿ’ ಎನ್ನುವ ವಾಕ್ಯದ ಅಡಿಯಲ್ಲಿ ಕಾರ್ಗಿಲ್ ನಗರದಿಂದ ಕಾರ್ಗಿಲ್ ಯುದ್ಧ ಸ್ಮಾರಕದವರೆಗೆ ರಾಷ್ಟ್ರದ ಹಿಡಿದು 42 ಮೀಟರ್ ಮ್ಯಾರಥಾನ್ ಮಾಡಿದ್ದೇನೆ. ಅಲ್ಲಿನ ಪ್ರಾಕೃತಿಕ ಕಠಿಣತೆಗಳನ್ನು ಅನುಭವಿಸಿದ್ದೇನೆ.ಅಲ್ಲಿನ ಹಿಮಪಾತ ಉಸಿರಾಟಕ್ಕೆ ಅಸಾಧ್ಯವೆನಿಸುವ ಎತ್ತರ ಪ್ರದೇಶ ಅನುಭವವಿದೆ.
ನಮ್ಮ ದೇಶದ ನೆಮ್ಮದಿಯನ್ನು ಕದಡಿದ ಭಯೋತ್ಪಾದಕರನ್ನು ಬಗ್ಗುಬಡಿಯಲು ಶತ್ರು ದೇಶ ಪಾಕಿಸ್ತಾನದ ವಿರುದ್ಧ ನಡೆಯುವ ಸಂಭಾವ್ಯ ಯುದ್ಧದಲ್ಲಿ ನಮ್ಮ ದೇಶ ರಕ್ಷಣೆಗಾಗಿ ನಾಗರೀಕ ರಕ್ಷಣೆ, ಲಾಜಿಸ್ಟಿಕಲ್ ಮತ್ತು ಪ್ರಾದೇಶಿಕ ಬೆಂಬಲ, ಸಶಸ್ತ್ರ ಪಡೆಗಳ ಸ್ವಯಂ ಸೇವಕರಾಗಿ ಅಥವಾ ಸೂಕ್ತವೆನಿಸಿ ಭಾರತ ಸರ್ಕಾರ ನಿಯೋಜಿಸುವ ಯಾವುದೇ ಕರ್ತವ್ಯಕ್ಕೆ ಸೇವೆ ಸಲ್ಲಿಸಲು ಇಂದು ಕರ್ನಾಟಕ ಘನತೆವೆತ್ತ ರಾಜ್ಯಪಾಲರ ಮುಖಾಂತರ ಘನತೆವೆತ್ತ ಭಾರದ ರಾಷ್ಟ್ರಪತಿಗಳಿಗೆ ಇಚ್ಛೆಯ ಪತ್ರ ರವಾನಿಸಿದ್ದೇನೆ.
ನಮ್ಮ ದೇಶ,ನಮ್ಮ ಹೆಮ್ಮೆಯಾಗಿದೆ. ಪ್ರತಿಯೊಬ್ಬ ನಾಗರಿಕರು ನಮ್ಮ ದೇಶದ ರಕ್ಷಣೆಗೆ ನಮ್ಮ ಹೊಣೆ ಎಂದು ತಿಳಿದು ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕೆಂದು ತಿಳಿಸಿದರು.
ವರದಿ : ಭರತ್ ಗುಬ್ಬಿ