ಗುಬ್ಬಿ :- ತಾಲೂಕಿನ ಹೋಬಳಿ ಮುಖ್ಯ ಕೇಂದ್ರವಾದ ಕಡಬ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು. ಕಲ್ಪನಾ ರಾಜೀನಾಮೆ ನೀಡಿ ತೆರವಾದ ಜಾಗಕ್ಕೆ ಪೂರ್ಣಿಮಾ ಎಚ್ ಆರ್ ಆವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಂಚಾಯತಿ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಮೋಹನ್ ಕುಮಾರ್ ನಡೆಸಿಕೊಟ್ಟರು.
ಈ ಹಿಂದೆ ಕಲ್ಪನಾ ರಾಜೀನಾಮೆ ಸಲ್ಲಿಸಿ ತೆರವಾಗಿದ್ದ ಜಾಗಕ್ಕೆ ಏಕೈಕ ಅಭ್ಯರ್ಥಿಯಾಗಿ ಪೂರ್ಣಿಮಾ ಎಚ್ ಆರ್ ನಾಮಪತ್ರ ಸಲ್ಲಿಸಿದ್ದು ಆವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಉಪಾಧ್ಯಕ್ಷೆ ಪೂರ್ಣಿಮಾ ಶಿವಕುಮಾರ್ ಮಾತನಾಡಿ ಕಡಬ ಗ್ರಾಮ ಪಂಚಾಯಿತಿ ಹೋಬಳಿ ಮುಖ್ಯ ಕೇಂದ್ರವಾಗಿದ್ದು ಪಂಚಾಯತ್ ವ್ಯಾಪ್ತಿಯ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಬೀದಿ ದೀಪ. ವಿದ್ಯುತ್.ಚರಂಡಿ ಸ್ವಚ್ಛತೆ ಹಾಗೂ ಕುಡಿಯುವ ನೀರನ್ನು ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ.
ಅದೇ ರೀತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಜೊತೆಗೂಡಿ ಸಾರ್ವಜನಿಕರ ನೋವುಗಳಿಗೆ ಸ್ಪಂದಿಸುತ್ತೇವೆ ಎಂದರು. ನನ್ನನ್ನು ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ ಸರ್ವ ಸದಸ್ಯರು ಹಾಗೂ ನನ್ನ ಮತಕ್ಷೇತ್ರದ ಎಲ್ಲಾ ಮತದಾರರಿಗೂ ಧನ್ಯವಾದಗಳು ತಿಳಿಸಿದರು. ಇದೇ ಸಂದರ್ಭದಲ್ಲಿ ಮುಖಂಡರಾದ ಕಡಬ ಶಂಕರ್. ಪಾಂಡುರಂಗಯ್ಯ ಕರಿನಹಟ್ಟಿ. ಮಂಜುನಾಥ್ ಕೊಪ್ಪ. ಸರ್ವ ಸದಸ್ಯರು. ಪೊಲೀಸ್ ಇಲಾಖೆ ಸಿಬ್ಬಂದಿ ಮತ್ತು ಇತರರು ಹಾಜರಿದ್ದರು.
ವರದಿ:- ಸಂತೋಷ್ ಗುಬ್ಬಿ