ಜಾತಿ ಗಣತಿಯಲ್ಲಿ ಹೊಲೆಯ ಎಂದು ಕಡ್ಡಾಯವಾಗಿ ನಮೂದಿಸಲು ಛಲವಾದಿ ಮಹಾಸಭಾ ವತಿಯಿಂದ ಜಾಗೃತಿ ಅರಿವು ಮೂಡಿಸಲಾಯಿತು - Vidyaranjaka

ಜಾತಿ ಗಣತಿಯಲ್ಲಿ ಹೊಲೆಯ ಎಂದು ಕಡ್ಡಾಯವಾಗಿ ನಮೂದಿಸಲು ಛಲವಾದಿ ಮಹಾಸಭಾ ವತಿಯಿಂದ ಜಾಗೃತಿ ಅರಿವು ಮೂಡಿಸಲಾಯಿತು

ಗುಬ್ಬಿ ತಾಲೂಕಿನ ತಿಪ್ಪೂರು, ಸೋಮಲಾಪುರ, ಊದ್ದೆಹೊಸಕೆರೆ, ಬಿಳಿಗೆರೆ, ಹೊಸಹಳ್ಳಿ, ಮಾವಿನಹಳ್ಳಿ ,ನಾಗಸಂದ್ರ, ಲಿಂಗಮ್ಮನಹಳ್ಳಿ,ಕೆಜಿ ಟೆಂಪಲ್, ಕೋಡಿಹಳ್ಳಿ,ಉಂಗುರ,ಚಾಕೇನಹಳ್ಳಿ ದೊಡಚಂಗಾವಿ ತಾಲೂಕಿನ ಮುಂತಾದ ಗ್ರಾಮಗಳಲ್ಲಿ ಜಾತಿ ಗಣತಿ ಕುರಿತು ಅರಿವು ಕಾರ್ಯಕ್ರಮವನ್ನು ಛಲವಾದಿ ಮಹಾಸಭಾ ವತಿಯಿಂದ ಮೂಡಿಸಲಾಯಿತು.

 

 

ನಮ್ಮ ಊರು ನಮ್ಮ ಗ್ರಾಮ ಕಾಲೋನಿಗಳಿಗೆ ಸರ್ಕಾರದ ವತಿಯಿಂದ ಸಮೀಕ್ಷೆ ನಡೆಸಲು ಬಂದಾಗ ಕಡ್ಡಾಯವಾಗಿ ನಮ್ಮ ಮೂಲ ಜಾತಿಯಾದ ಹೊಲಯ ಎಂದು ಬರೆಸಬೇಕೆಂದು ಪ್ರತಿಗ್ರಾಮದ ಸದಸ್ಯರಿಗೆ ಛಲವಾದಿ ಮಹಾಸಭಾ ವತಿಯಿಂದ ಜಾಗೃತಿ ಅರಿವನ್ನು ಮೂಡಿಸಲಾಯಿತು.

 

 

ಈ ನಿಖರವಾದ ಮಾಹಿತಿಯಿಂದ ನಮ್ಮ ಮುಂದಿನ ಪೀಳಿಗೆಗೆ ಮಕ್ಕಳಿಗೆ ವಿದ್ಯಾಭ್ಯಾಸ ಉದ್ಯೋಗ ಹಾಗೂ ರಾಜಕೀಯವಾಗಿ ಪ್ರತ್ಯೇಕ ಮೀಸಲಾತಿ ಸಿಗುವುದರಿಂದ ನಮ್ಮ ಸಮುದಾಯವು ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ. ಆದ್ದರಿಂದ ನಮ್ಮ ಸಮುದಾಯವು ಸಮೀಕ್ಷೆ ಸಮಯದಲ್ಲಿ ಜಾಗೃತರಾಗಬೇಕೆಂದು ಮನವಿ ಮಾಡಿಕೊಂಡರು.

 

 

ಇದೇ ಸಂದರ್ಭದಲ್ಲಿ ಛಲವಾದಿ ಮಹಾಸಭಾ ಅಧ್ಯಕ್ಷರು ಚನ್ನಶೆಟ್ಟಿಹಳ್ಳಿ ಈರಣ್ಣ.ಟಿ,ಉಪಾಧ್ಯಕ್ಷರು ಕಿಟ್ಟದಕುಪ್ಪೆ ನಾಗರಾಜು,ಉಪಾಧ್ಯಕ್ಷರು ಸಚಿನ್ ಛಲವಾದಿ, ಯುವ ಘಟಕದ ಅಧ್ಯಕ್ಷರು ಮಧು, ಬೆಣಚಿಗೆರೆ ರವೀಶ್, ಸಮಾಜದ ಮುಖಂಡರು ಮುಂತಾದವರು ಹಾಜರಿದ್ದರು.

 

 

ವರದಿ : ಗುಬ್ಬಿ ಭರತ್

Leave a Reply

Your email address will not be published. Required fields are marked *

error: Content is protected !!