ಸನಾತನ ರಾಷ್ಟ್ರ ಶಂಖನಾದ : ಒಂದು ಹೆಜ್ಜೆ ರಾಮರಾಜ್ಯದ ಕಡೆಗೆ ! - Vidyaranjaka

ಸನಾತನ ರಾಷ್ಟ್ರ ಶಂಖನಾದ : ಒಂದು ಹೆಜ್ಜೆ ರಾಮರಾಜ್ಯದ ಕಡೆಗೆ !

ಪ್ರಸ್ತಾವನೆ : ವಿಶ್ವದ ಇತಿಹಾಸದಲ್ಲಿ ಅನೇಕ ಸಂಸ್ಕೃತಿಗಳ ಉದಯವಾಯಿತು  ಮತ್ತು ನಾಶವೂ ಆಯಿತು. ಉದಾ. ಈಜಿಪ್ಟಿಯನ್, ಗ್ರೀಕ್, ರೋಮನ್, ಸಂಸ್ಕೃತಿ ಮುಂತಾದವು; ಆದರೆ ರಾಜಕೀಯ ಸಂಘರ್ಷ, ವಿದೇಶಿ ದಾಳಿಗಳು, ನೈಸರ್ಗಿಕ ಆಪತ್ತುಗಳು ಮುಂತಾದ ಕಷ್ಟಗಳನ್ನು ಎದುರಿಸುತ್ತಾ ಉಳಿದಿದ್ದು ಒಂದೇ ಸಂಸ್ಕೃತಿ, ಅದೇ ‘ಸನಾತನ ಸಂಸ್ಕೃತಿ’. ಸನಾತನ ಎಂದರೆ ಶಾಶ್ವತ, ಚಿರಕಾಲ ಉಳಿಯುವ ಹಾಗೂ ನಿತ್ಯ ನೂತನವಾಗಿರುವ ತತ್ವ ! ಸನಾತನ ಧರ್ಮವು ಯಾವಾಗಲೂ ವಿಶ್ವ ಕಲ್ಯಾಣದ ಪರಿಕಲ್ಪನೆ ಮಂಡಿಸಿದೆ. ಸನಾತನ ಧರ್ಮ ಭಾರತದ ಪ್ರಾಣವಾಗಿದೆ. ಎಲ್ಲಿಯವರೆಗೆ ಸನಾತನ ಧರ್ಮದ ಅನುಕರಣೆ ಆಗುತ್ತಿತ್ತು, ಅಲ್ಲಿಯವರೆಗೆ ಭಾರತ ವೈಭವದ ಶಿಖರದಲ್ಲಿತ್ತು; ಆದರೆ ಕಳೆದ ಕೆಲವು ದಶಕಗಳಲ್ಲಿ ಸನಾತನ ಧರ್ಮದ ಕಡೆಗೆ ಉದ್ದೇಶಪೂರ್ವಕ ತಿರಸ್ಕಾರದಿಂದ  ನೋಡಲಾಯಿತು. ಪರಿಣಾಮವಾಗಿ ಅನೇಕ ಕೌಟುಂಬಿಕ, ಮಾನಸಿಕ, ಸಾಮಾಜಿಕ, ಧಾರ್ಮಿಕ ಹಾಗೂ ರಾಷ್ಟ್ರೀಯ ಸಂಕಷ್ಟಗಳು ನಿರ್ಮಾಣವಾದವು. ಇಂದು ಅಂತರಾಷ್ಟ್ರೀಯ ಅನುದಾನದಿಂದ ಪೋಷಿಸಲಾಗುತ್ತಿರುವ ಅನೇಕ ವ್ಯಕ್ತಿಗಳು, ಹಾಗೂ ಸಂಘಟನೆಗಳು ಸನಾತನ ಧರ್ಮ ಮುಗಿಸುವ ಪಣತೊಟ್ಟು ಕಾರ್ಯನಿರತವಾಗಿದ್ದಾರೆ. ಇದರ ಹಿನ್ನೆಲೆಯಲ್ಲಿ ಸನಾತನ ಧರ್ಮದ ರಕ್ಷಣೆಗಾಗಿ ದೇವರು, ದೇಶ, ಧರ್ಮ ಇವುಗಳ ಸೇವೆ ಮಾಡುವ ವ್ಯಕ್ತಿಗಳು, ಸಂಸ್ಥೆಗಳು ಹಾಗೂ ಸಂಘಟನೆಗಳು ಇವುಗಳ ಸಂಘಟನೆ ಮತ್ತು ಜಾಗೃತಿ ಆಗುವುದು ಅಗತ್ಯವಾಗಿದೆ. ಸನಾತನ ಧರ್ಮದ ಸಶಕ್ತಿಕರಣದಿಂದಲೇ ರಾಮರಾಜ್ಯದ ಸಮಾನ ತೇಜಸ್ವಿ ರಾಷ್ಟ್ರದ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಅದಕ್ಕಾಗಿ ಗೋವಾದಲ್ಲಿ ಮೇ 17 ರಿಂದ 19 ವರೆಗೆ ‘ಸನಾತನ ರಾಷ್ಟ್ರಶಂಖನಾದ ಮಹೋತ್ಸವ’ದ ಆಯೋಜನೆ ಮಾಡಲಾಗಿದೆ.

 

 

 

 

ಸನಾತನ ರಾಷ್ಟ್ರದ ಪರಿಕಲ್ಪನೆ : ಸನಾತನ ಸಿದ್ಧಾಂತ ಇದು ಮೂಲತಃ ಕಲ್ಯಾಣಕಾರಿ, ವ್ಯಕ್ತಿಯ ಐಹಿಕ, ಪಾರಮಾರ್ಥಿಕ ಪ್ರಗತಿ ಹೊಂದುವ, ಹಾಗೂ ಸಮಗ್ರವಾಗಿದೆ. ಅದು ಯಾವುದೇ ವ್ಯಕ್ತಿ ಸಮೂಹಕ್ಕಷ್ಟೇ ಸಂಕುಚಿತವಾಗದೆ ಅಖಿಲ ಮಾನವಜಾತಿಗಾಗಿ ಅನ್ವಯಿಸುತ್ತದೆ. ಸನಾತನ ತತ್ವಗಳು ನ್ಯಾಯ, ಸಮಾನತೆ, ನೀತಿ, ಯೋಗ, ಸಾಧನೆ, ಮುಂತಾದವುಗಳ ಮೇಲೆ ಆಧಾರಿತವಾಗಿದೆ. ವೇದ, ಉಪನಿಷತ್ತುಗಳು, ಗೀತೆ, ರಾಮಾಯಣ, ಮಹಾಭಾರತ, ಜ್ಞಾನೇಶ್ವರಿ, ಮುಂತಾದ ಸನಾತನ ಧರ್ಮಗ್ರಂಥಗಳಲ್ಲಿ ಇದರ ಬಗ್ಗೆ ತತ್ವಜ್ಞಾನವಿದೆ. ಸನಾತನ ರಾಷ್ಟ್ರವು ಈ  ತತ್ವಗಳ ಆಧಾರವಾಗಿ ನಡೆಯಲಿದೆ. ಒಂದು ಆದರ್ಶ ಕಲ್ಯಾಣಕಾರಿ ರಾಷ್ಟ್ರವಾಗಿರಲಿದೆ. ಸಂಕ್ಷಿಪ್ತವಾಗಿ, ತ್ರೇತಾಯುಗದ ರಾಮರಾಜ್ಯದ ಕಲಿಯುಗದ ಸ್ವರೂಪವೇ ಸನಾತನ ರಾಷ್ಟ್ರ ಎಂದು ಹೇಳಬಹುದು.

 

 

 

ಪ್ರಸ್ತುತ ಸ್ಥಿತಿ ಮತ್ತು ಧರ್ಮದ ಅಧಿಷ್ಠಾನ ಇರುವುದರ ಮಹತ್ವ : ಪ್ರಸ್ತುತ ಜಾತ್ಯಾತೀತ ವ್ಯವಸ್ಥೆಯಲ್ಲಿ ಗೋವು, ಗಂಗೆ, ಗೀತೆ, ತುಳಸಿ, ಮಠ ಮಂದಿರಗಳು ಮುಂತಾದ ಸನಾತನ ಗೌರವದ ಮೇಲೆ ನಿರಂತರ ಆಘಾತವಾಗುತ್ತಿವೆ. ಆಧುನಿಕತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸನಾತನ ಶ್ರದ್ಧಾಸ್ಥಾನಗಳ ಮೇಲೆ ಆಘಾತ ಮಾಡಲಾಗುತ್ತದೆ. ಹಿಂದೂಗಳ ಧಾರ್ಮಿಕ ಪರಂಪರೆ ಆಚಾರ ಪದ್ಧತಿಗಳಿಗೆ ಮೂಢನಂಬಿಕೆಯ ‘ಲೇಬಲ್’ ಅಂಟಿಸಲಾಗುತ್ತದೆ. ವೈದಿಕ ವಿಜ್ಞಾನಕ್ಕೆ pseudo science ಎಂದು ಟೀಕಿಸಲಾಗುತ್ತದೆ. ಕೌಟುಂಬಿಕ ಮಟ್ಟದಲ್ಲಿ ನೋಡಿದರೆ ಆಗ ದೇವಿ ಸ್ವರೂಪ ಎಂದು ಪೂಜಿಸುತ್ತಿದ್ದ ಮಹಿಳೆಯರು ಇಂದು ಸುರಕ್ಷಿತರಿಲ್ಲ. ಕುಟುಂಬದಲ್ಲಿ ಕೂಡ ಪರಸ್ಪರರಲ್ಲಿ ಆಪ್ತತೆ, ವಾತ್ಸಲ್ಯ ಕಡಿಮೆಯಾಗಿದ್ದು ವ್ಯಕ್ತಿಗಳು ಭೌತಿಕ ದೃಷ್ಟಿಯಿಂದ ಸಂಪನ್ನವಾಗಿದ್ದರೂ ಮಾನಸಿಕ ದೃಷ್ಟಿಯಿಂದ ದುರ್ಬಲರಾಗಿದ್ದಾರೆ; ಮನುಷ್ಯನು ಕಷ್ಟಗಳನ್ನು ಎದುರಿಸುವ ಕ್ಷಮತೆ ಕಡಿಮೆ ಆಗಿದೆ, ಹೀಗೆ ಕಂಡು ಬರುತ್ತಿದೆ. ಈ ಎಲ್ಲಾ ಪರಿಸ್ಥಿತಿಗಳ ಮುಖ್ಯ ಕಾರಣವೆಂದರೆ ಧರ್ಮಾಚರಣೆ, ಸಾಧನೆ ಮತ್ತು ಉಪಾಸನಾ ಶಕ್ತಿಗಳ ಕೊರತೆ. ಧರ್ಮದ ಅದಿಷ್ಠಾನವಿದ್ದರೆ, ವ್ಯಕ್ತಿಯ ಹಾಗೂ ಸಮಾಜದ ಮತ್ತು ರಾಷ್ಟ್ರದ ಪ್ರಗತಿಯಾಗುತ್ತದೆ. ಧರ್ಮವಿಲ್ಲದೆ ಭಾರತ ಶೂನ್ಯವಾಗಿದ್ದು ಭಾರತದ ಗೌರವಶಾಲಿ ಇತಿಹಾಸದ ಪರಂಪರೆ ಭವಿಷ್ಯದಲ್ಲಿ ಕೂಡ ಮುಂದುವರೆಯಬೇಕಿದ್ದರೆ, ಧರ್ಮದ ರಕ್ಷಣೆ ಆಗುವುದು ಆವಶ್ಯಕವಾಗಿದೆ.

 

ಸನಾತನ ರಾಷ್ಟ್ರದ ಆವಶ್ಯಕತೆ : ಹಿಂದೂ ಧರ್ಮದ ಮೇಲಿನ ಆಘಾತದ ವಿರುದ್ಧ ಜಾಗೃತಿ ಮೂಡಿಸಲು ಪ್ರತಿಭಟನೆಗಳು ನಡೆಯುತ್ತಿದ್ದರೂ ಹಿಂದೂಗಳ ಮೇಲೆ ಆಗುತ್ತಿರುವ ಆಘಾತಗಳು ಸಂಪೂರ್ಣವಾಗಿ ನಿಂತಿಲ್ಲ. ಪ್ಲೇಸಸ್ ಆಫ್ ವರ್ಷಿಪ್ ಆಕ್ಟ್ ಇಂತಹ ಕರಾಳ ಕಾನೂನಿನಿಂದ ವಿದೇಶಿ ಆಕ್ರಮಣಕಾರರಿಂದ ನಾಶವಾಗಿರುವ ದೇವಸ್ಥಾನಗಳ ಪುನರ್ನಿರ್ಮಾಣದ ಮಾರ್ಗ ತಡೆಯಲಾಗಿದೆ. ಇತ್ತೀಚಿಗೆ ಅಂಗೀಕಾರಗೊಂಡಿರುವ ಸುಧಾರಿತ ವಕ್ಫ್ ಕಾನೂನಿನಿಂದ ವಕ್ಫ್ ಬೋರ್ಡ್ ನ ಸ್ವೇಚ್ಛಾಚಾರಕ್ಕೆ ಕೆಲವು ಪ್ರಮಾಣದಲ್ಲಿ ಕಡಿವಾಣ ಹಾಕಿದ್ದರೂ, ಈ ಕಾನೂನು ಪ್ರತ್ಯಕ್ಷದಲ್ಲಿ ಜಾರಿಗೊಂಡು ಮತಾಂಧರಿಂದ ಅಕ್ರಮವಾಗಿ ಕಬಳಿಸಿರುವ ಭೂಮಿ ಯಾವಾಗ ವಾಪಾಸಾಗುವುದು ಎಂದು ಮುಂಬರುವ ಕಾಲವೇ ಹೇಳಬೇಕು. ಇಂದು ನುಸುಳುಕೋರರ ಗಂಭೀರ ಸಮಸ್ಯೆಯಿಂದ ಅನೇಕ ಪ್ರದೇಶ ಭಾರತದಿಂದ ಬೇರ್ಪಡುವ ಮಾರ್ಗದಲ್ಲಿ ಇದೆ. ವರ್ತಮಾನ ವ್ಯವಸ್ಥೆಯಲ್ಲಿ ಧರ್ಮ ಮತ್ತು ರಾಷ್ಟ್ರ ಇವುಗಳ ಮೇಲಿನ ಆಘಾತಗಳು ಸಕ್ಷಮವಾಗಿ ಎದುರಿಸದೆ ಇರುವುದರಿಂದ ಸನಾತನ ರಾಷ್ಟ್ರದ ಆವಶ್ಯಕತೆ ಇದೆ. ದೇಶದ ಅಭಿವೃದ್ಧಿ ಕೇವಲ ಜೆಡಿಪಿ ಅಥವಾ ಟೆಕ್ನಾಲಜಿ ಇಂದ ಆಗುವುದಿಲ್ಲ. ಅದು ಧರ್ಮದಿಂದ ಆಗುತ್ತದೆ. (ಧರ್ಮೇಣ ಜಯತಿ ರಾಷ್ಟ್ರಮ್) ಆದ್ದರಿಂದ ಭಾರತೀಯ ಸಂಸ್ಕೃತಿಯಲ್ಲಿ ಚಿನ್ನದ ಲಂಕೆಯದಲ್ಲ; ಶ್ರೀರಾಮನ ರಾಮರಾಜ್ಯದ ಪೂಜೆ ಮಾಡಲಾಗುತ್ತದೆ

 

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ದಾರ್ಶನಿಕತೆ : ಇಂದು ‘ಸನಾತನ’ ಈ ವಿಷಯ ಬೃಹತ್ ಪ್ರಮಾಣದಲ್ಲಿ ಚರ್ಚಿಸಲಾಗುತ್ತಿದ್ದು ಹಿಂದೂ ರಾಷ್ಟ್ರದ ಆಗ್ರಹವೂ ಕೇಳಿಬರುತ್‌ತಿದೆ. ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು 27 ವರ್ಷಗಳ ಹಿಂದೆಯೇ ಅಂದರೆ ಯಾವ ಕಾಲದಲ್ಲಿ ಸನಾತನ ಈ ಶಬ್ದವಂತು ಬಿಡಿ, ಹಿಂದೂ ಶಬ್ದ  ಉಚ್ಛರಿಸುದು ಕೂಡ ಧೈರ್ಯದ ಮಾತಾಗಿತ್ತು, ಅಂತಹ ಸಮಯದಲ್ಲಿ ಈಶ್ವರೀ ರಾಜ್ಯದ ಸ್ಥಾಪನೆ ಈ ಗ್ರಂಥ ಬರೆದು ಆಧ್ಯಾತ್ಮದ ಆಧಾರದಲ್ಲಿ ರಾಷ್ಟ್ರ ರಚನೆಯ  ಪರಿಕಲ್ಪನೆ ಮಂಡಿಸಿದರು. ಸಂತರ ದಾರ್ಶನಿಕತೆ ಇದರಿಂದ ಕಂಡು ಬರುತ್ತದೆ. ಇಲ್ಲಿಯವರೆಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಧರ್ಮ, ಆಧ್ಯಾತ್ಮ, ಸಾಧನೆ ಮುಂತಾದಗಳ ಬಗ್ಗೆ 380 ಕಿಂತಲೂ ಹೆಚ್ಚಿನ ಗ್ರಂಥಗಳನ್ನು ಸಂಕಲನ ಮಾಡಿದ್ದು ಭಾರತೀಯ ಸಂಸ್ಕೃತಿಯಲ್ಲಿನ ಕಲೆ, ವಿದ್ಯೆ ಇವುಗಳ ಪುನರುಜ್ಜೀವನಕ್ಕಾಗಿ ಅನೇಕ ಉಪಕ್ರಮಗಳನ್ನು ಆರಂಭಿಸಿದರು. ಹಿಂದುತ್ವದ ಮೇಲಿನ ಆಘಾತಗಳ ಕುರಿತು ಎಲ್ಲೆಡೆ ಜಾಗೃತಿ ಮೂಡಲಿಸಲು ಅವರು ಸನಾತನ ಪ್ರಭಾತ ಈ ಪ್ರಖರ ಹಿಂದುತ್ವನಿಷ್ಠ ದೈನಿಕ ಆರಂಭಿಸಿದರು. ಅವರ ಪ್ರೇರಣೆಯಿಂದ ಹಿಂದೂ ಐಕ್ಯತೆಯ ದೃಷ್ಟಿಯಿಂದಲೂ ಅನೇಕ ಪ್ರತಿಭಟನೆಗಳು ನಡೆಸಲಾದವು. ಅಲ್ಪಾವಧಿಯಲ್ಲಿಯೇ ಈ ಕಾರ್ಯ ದೇಶವಿದೇಶದಲ್ಲಿ ವಿಸ್ತಾರವಾಗಿರುವುದು ಅವರ ದೈವೀ ಕಾರ್ಯದ ಸಾಕ್ಷಿಯಾಗಿದೆ.

ಸನಾತನ ರಾಷ್ಟ್ರ ಶಂಖನಾದ : ಸನಾತನ ಸಂಸ್ಥೆಯ ರಜತ ಮಹೋತ್ಸವ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಜನ್ಮೋತ್ಸವದ ಪ್ರಯುಕ್ತ ಆಯೋಜಿಸಿರುವ ‘ಸನಾತನ ರಾಷ್ಟ್ರ ಶಂಖನಾದ’ ಇದು ಕೇವಲ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಅದು ಧರ್ಮ ಮತ್ತು ರಾಷ್ಟ್ರ ರಕ್ಷಣೆಯ ಹಾದಿಯಲ್ಲಿ ಒಂದು ಮಹತ್ವದ ಹಂತವಾಗಿದೆ. ಇದು ಭಾರತದ ಉಜ್ವಲ ಭವಿಷ್ಯದ  ಶಂಖನಾದವಾಗಿದೆ. ಅದರ ಪ್ರಯುಕ್ತ ಸನಾತನ ಧರ್ಮದ ಸೇವೆಯು ಇನ್ನು ಕೃತಿಶೀಲ ಮತ್ತು ಗತಿಶೀಲವಾಗಲಿದೆ, ಇದು ಒಂದು ರೀತಿಯ ರಾಷ್ಟ್ರ ರಚನೆಯ ಎಂದರೆ ಧರ್ಮ ಸಂಸ್ಥಾಪನೆಯ ಕಾರ್ಯದಲ್ಲಿ ಸಹಭಾಗಿ

Leave a Reply

Your email address will not be published. Required fields are marked *

error: Content is protected !!