ರಾಜ ಸತ್ಯವ್ರತ ಅಥವಾ ಶನಿಮಾಹಾತ್ಮೆ ಎಂಬ ಪೌರಾಣಿಕ ನಾಟಕ ಪ್ರದರ್ಶನ - Vidyaranjaka

ರಾಜ ಸತ್ಯವ್ರತ ಅಥವಾ ಶನಿಮಾಹಾತ್ಮೆ ಎಂಬ ಪೌರಾಣಿಕ ನಾಟಕ ಪ್ರದರ್ಶನ

 

 

 

 

 

 

 

ತುಮಕೂರು : ಆತ್ಮೀಯ ಕಲ್ಪತರು ನಾಡಿನ ಕಲಾ ಬಂಧುಗಳೇ ದಿನಾಂಕ 13-04-2025ರ ಭಾನುವಾರದಂದು ಶ್ರೀ ಭೈರವ ಕಲಾ ಸಂಘ, ಸದಾಶಿವನಗರ ತುಮಕೂರು ಇವರ ಸಂಘದ 27ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿಯ ಸಾತ್ಸಂದ್ರ ಗ್ರಾಮದ ಶ್ರೀ ಕೆಂಪಮ್ಮ ದೇವಿಯವರ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ತುಮಕೂರಿನ ಹಲವಾರು ಹಿರಿಯ ರಂಗಭೂಮಿ ಕಲಾವಿದರು ಹಾಗೂ ಅನುಭವಿ ಕಲಾವಿದರುಗಳಿಂದ ಗುಬ್ಬಿ ತಾಲ್ಲೂಕಿನ ಶ್ರೀನಿವಾಸ ಡ್ರಾಮ ಸೀನರಿ ಅವರ ಭವ್ಯ ರಂಗ ಸಜ್ಜಿಕೆಯಲ್ಲಿ ತುಮಕೂರಿನ ಹೆಸರಾಂತ ಹಿರಿಯ ಸಂಗೀತ ನಿರ್ದೇಶಕರಾದ ಐ.ಎಲ್.ರಂಗಸ್ವಾಮಯ್ಯರವರ ಸುಪುತ್ರ ಐ.ಆರ್.ವಿಶ್ವನಾಥ್ ರವರ ಸಂಗೀತ ನಿರ್ದೇಶನದಲ್ಲಿ ಪಕ್ಕ ವಾದ್ಯಗಳೊಂದಿಗೆ ವಿಶೇಷವಾಗಿ ಸರಿಸುಮಾರು 26 ರಿಂದ 27 ನೇ ಭಾರಿಗೆ ರಾಜಾ ಸತ್ಯವ್ರತನ ಪಾತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಎಸ್.ರಾಜಣ್ಣನವರ ಅದ್ಭೂತ ಅಭಿನಯ ಹಾಗೂ ಶ್ರೀ ಸತ್ಯ ಶನೇಶ್ಚರನ ಪಾತ್ರದಲ್ಲಿ ಶ್ರೀ ಭೈರವ ಕಲಾ ಸಂಘದ ಸಂಸ್ಥಾಪಕರು, ಹಿರಿಯ ರಂಗಭೂಮಿ ಕಲಾವಿದರು, ಬೆಳ್ಳಿ ಕಿರೀಟ ಪುರಸ್ಕೃತರು, ನಿವೃತ್ತ ನೌಕರರಾದ ಹೆಚ್.ಬಿ.ಪುಟ್ಟಬೋರಯ್ಯನವರಿಂದ ಅತ್ಯದ್ಭುತವಾದ ಅಭಿನಯದೊಂದಿಗೆ ಸಾತ್ಸಂದ್ರ ಗ್ರಾಮದ ಸಾರ್ವಜನಿಕರ ಸಮ್ಮುಖದಲ್ಲಿ ರಾಜ ಸತ್ಯವ್ರತ ಅಥವಾ ಶನಿ ಪ್ರಭಾವ ಎಂಬ ಪೌರಾಣಿಕ ನಾಟಕ ಪ್ರದರ್ಶನ ಮಾಡುತ್ತಿದ್ದು ಜಿಲ್ಲೆಯ ಹಾಗೂ ರಾಜ್ಯದ ಎಲ್ಲಾ ಕಲಾಭಿಮಾನಿಗಳು, ಕಲಾ ಪ್ರೋತ್ಸಾಹಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿ ಕಲಾವಿದರನ್ನು ಪ್ರೋತ್ಸಹಿಸಿ, ಬೆಳಸಬೇಕು ಎಂದು ಈ ಮೂಲಕ ನಾಟಕ ಮಂಡಳಿಯ ಎಲ್ಲಾ ಸದಸ್ಯರುಗಳು ಮನವಿ ಮಾಡಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!