ಶ್ರೀರಾಮನವಮಿ ನಿಮಿತ್ತ ವಿಶೇಷ ಲೇಖನ ! - Vidyaranjaka

ಶ್ರೀರಾಮನವಮಿ ನಿಮಿತ್ತ ವಿಶೇಷ ಲೇಖನ !

ರಾಮಾಯಣದ ಉತ್ಪತ್ತಿ
ಉತ್ಪತ್ತಿ ಮತ್ತು ಅರ್ಥ : ರಾಮಾಯಣ ಶಬ್ದವು ರಂ + ಅಯನ ಈ ಎರಡು ಶಬ್ದಗಳಿಂದ ನಿರ್ಮಾಣವಾಗಿದೆ. ರಮ್ ರಮಯತೇ ಎಂದರೆ ತಲ್ಲೀನರಾಗುವುದು, ‘ಸಾಧನೆಯಲ್ಲಿ ತಲ್ಲೀನರಾಗುವುದು’. ಅಯನ ಎಂದರೆ ಸಪ್ತಲೋಕಗಳು. ಸಾಧನೆಯಲ್ಲಿ ತಲ್ಲೀನರಾಗಿ ಆನಂದದಲ್ಲಿದ್ದು, ಸಪ್ತಲೋಕ ಗಳನ್ನು ದಾಟಿ ಮೋಕ್ಷಕ್ಕೆ ಹೋಗುವುದನ್ನು ರಾಮಾಯಣದಲ್ಲಿ ಹೇಳಲಾಗಿದೆ. ‘ಸಮಸ್ತ ಅಯನಂ ರಾಮಾಯಣಮ್ |’ ಅಯನ ಎಂದರೆ ಹೋಗುವುದು, ಮಾರ್ಗ ಇತ್ಯಾದಿ ಅರ್ಥವಾಗುತ್ತದೆ. ಪರಬ್ರಹ್ಮ ಪರಮಾತ್ಮಸ್ವರೂಪನಾದ ಶ್ರೀರಾಮನ ಕಡೆಗೆ ಕೊಂಡೊಯ್ಯುವ, ಅದರತ್ತ ಹೋಗಲು ಚಾಲನೆ ನೀಡುವ ಅಥವಾ ಸ್ಫೂರ್ತಿ, ಉತ್ಸಾಹ ನೀಡುವ, ಜೀವನದ ನಿಜವಾದ ಮಾರ್ಗವನ್ನು ತೋರಿಸುವುದೆಂದರೆ ‘ರಾಮಾಯಣ’ವಾಗಿದೆ.

 

 

 

 

ರಾಮಾಯಣದಲ್ಲಿನ ಕೆಲವು ವಿಶೇಷ ಪ್ರಸಂಗಗಳು

ಶ್ರೀರಾಮನಲ್ಲಿ ವಿರಾಟನ ಸಾಮರ್ಥ್ಯವಿತ್ತು !
ಶೂರ್ಪಣಖಿಯು ಅವಳ ಸಹೋದರ ಖರ ಮತ್ತು ದೂಷಣ ಹಾಗೂ ೧೦ ಸಾವಿರ ಸೈನ್ಯದೊಂದಿಗೆ ಬಂದಾಗ ರಾಮನು ಲಕ್ಷ್ಮಣನಿಗೆ, ‘ನೀನು ಸೀತೆಯನ್ನು ನೋಡಿಕೋ ! ಈ ಸೈನ್ಯವನ್ನು ಸೋಲಿಸಲು ನಾನೊಬ್ಬನೇ ಸಾಕು’ ಎಂದು ಹೇಳಿದನು. ಇದರಿಂದ ರಾಮನ ಶೌರ್ಯದ ಕಲ್ಪನೆ ಬರುತ್ತದೆ. ಇಲ್ಲಿ ರಾಮನ ಮನಸ್ಸಿನ ವೈಶಾಲ್ಯವು ತಿಳಿಯುತ್ತದೆ. ರಾಮನ ಮನಸ್ಸು ವಿಶ್ವವ್ಯಾಪಕವಾಗಿತ್ತು. ಅವನು ಈಶ್ವರನ ಅಂಶವಾಗಿದ್ದನು. ಈಶ್ವರನ ಸಾಮರ್ಥ್ಯವು ಅವನಲ್ಲಿ ಬಂದಿತ್ತು. ಪೃಥ್ವಿ ಮತ್ತು ಪೃಥ್ವಿಯ ಮೇಲಿನ ಸೈನ್ಯವು ಅವನಿಗೆ ನಗಣ್ಯವಾಗಿತ್ತು.

 

 

 


ಪ್ರತಿಯೊಬ್ಬರೂ ಲಕ್ಷ್ಮಣರಾಗಬೇಕು !
ಲಕ್ಷ್ಮಣನು ವನವಾಸದಲ್ಲಿದ್ದಾಗ ರಾಮ ಮತ್ತು ಸೀತೆಯರ ಹಿಂದಿನಿಂದ ಹೋಗುತ್ತಿದ್ದನು. ಲಕ್ಷ್ಮಣನಿಗೆ ರಾಮನ ಬಗ್ಗೆ ಬಹಳ ಪ್ರೇಮವಿತ್ತು. ರಾಮನು ಯಾವಾಗಲೂ ತನ್ನ ಎದುರು ಇರಬೇಕೆಂದು ಅನಿಸುತ್ತಿತ್ತು. ಲಕ್ಷ್ಮಣನು ಯಾವಾಗಲೂ ರಾಮನಾಮವನ್ನು ಜಪಿಸುತ್ತಿದ್ದನು, ಅವನು ರಾಮನನ್ನು ಭಜಿಸುತ್ತಿದ್ದನು. ಇಂತಹ ಈ ಭಕ್ತನು ಮಾಯೆಯ, ಅಂದರೆ ಸೀತೆಯ ಮುಖವನ್ನು ಯಾವತ್ತೂ ನೋಡಲಿಲ್ಲ. ಅವನು ಅವಳ ಪದಕಮಲಗಳ ಕಡೆಗೆ ನೋಡಿ ನಡೆಯುತ್ತಿದ್ದನು. ಅದರಿಂದ ಲಕ್ಷ್ಮಣನ ಮೇಲಿನ ಮಾಯೆಯ ಹಿಡಿತವು ಕಡಿಮೆಯಾಯಿತು ಮತ್ತು ‘ಸೀತಾ-ರಾಮ-ಲಕ್ಷ್ಮಣ’ ಈ ಶಬ್ದವು ನಿರ್ಮಾಣವಾಯಿತು.

 

 

ರಾಮಭಕ್ತಿಯ ಸಾಮರ್ಥ್ಯ
ಒಮ್ಮೆ ಅಂಗದನು ರಾಮನ ದೂತನಾಗಿ ರಾವಣನ ರಾಜ್ಯಸಭೆಗೆ ಹೋದನು, ಆಗ ರಾವಣನು ತನ್ನ ಪ್ರಶಂಸೆಯನ್ನು ಮಾಡಿಕೊಂಡು ಅವನನ್ನು ಹೆದರಿಸಿದನು. ಆಗ ಅಂಗದನು ‘ಎಲೈ ರಾವಣನೇ, ಇಲ್ಲಿಯವರೆಗೆ ನಾನು ನಿನ್ನ ಶೌರ್ಯದ ಬಗ್ಗೆ ಕೇಳಿದೆ. ಈಗ ನಾನು ನನ್ನ ಕಾಲನ್ನು ಭೂಮಿಯ ಮೇಲೆ ಇಡುತ್ತೇನೆ, ನೀನು ಅಥವಾ ನಿನ್ನ ಸೈನಿಕರು ಅದನ್ನು ಎತ್ತಿ ತೋರಿಸಬೇಕು ಅಂದರೆ ನಾನು ನಿನ್ನ ಮಾತುಗಳನ್ನು ನಿಜವೆಂದು ನಂಬುತ್ತೇನೆ’ ಎಂದನು. ಅಂಗದನು ‘ಜೈ ಶ್ರೀರಾಮ’ ಎಂದು ತನ್ನ ಕಾಲನ್ನು ಭೂಮಿಯ ಮೇಲೆ ಇಟ್ಟನು. ಆಶ್ಚರ್ಯದ ಸಂಗತಿಯೆಂದರೆ ರಾವಣ ಅಥವಾ ಅವನ ಎಲ್ಲ ಸೈನಿಕರಿಂದ ಅಂಗದನ ಕಾಲನ್ನು ಅಲುಗಾಡಿಸಲೂ ಆಗಲಿಲ್ಲ. ಇದೇ ರಾಮಭಕ್ತಿಯ ಪರಿಣಾಮವಾಗಿದೆ!

Leave a Reply

Your email address will not be published. Required fields are marked *

error: Content is protected !!