ತುಮಕೂರು : ನಗರದ ಕ್ಯಾತ್ಸಂದ್ರದಲ್ಲಿರುವ ಜ್ಞಾನಗಂಗಾ ವಿದ್ಯಾಕೇಂದ್ರದಲ್ಲಿ ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಷನ್ ರಿ., ಇದರ ತುಮಕೂರು ಜಿಲ್ಲಾ ಘಟಕದ ಉದ್ಘಾಟನೆಯನ್ನು ನೆರವೇರಿಸಲಾಯಿತು. ಉದ್ಘಾಟನಾ ಸಮಾರಂಭದ ಸಲುವಾಗಿ ಬಡ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ, ಪುಸ್ತಕಗಳನ್ನು ವಿತರಿಸಲಾಯಿತು ಹಾಗೆಯೇ ಜಿಲ್ಲೆಯ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಡಾ. ಶ್ರೀನಿವಾಸ ಮೂರ್ತಿ, ಪದಾಧಿಕಾರಿಗಳಾದ ಫಣೀಂದ್ರ ಶರ್ಮ, ಸತೀಶ್ ಸಿಂಹ, ಕೇಶವ ಶರ್ಮ, ಜಿಲ್ಲಾ ಪದಾಧಿಕಾರಿಗಳಾದ ಡಾ. ಎಸ್ ನರೇಂದ್ರ ಕುಮಾರ್, ಡಾ. ಜಿ.ಎಸ್.ಸುಧಾಕರ ಶರ್ಮ, ಡಾ. ಶ್ರೀಧರ ಶರ್ಮ, ಡಾ. ಅನಂತ ಕೃಷ್ಣ, ಸುಬ್ರಮಣ್ಯಂ, ಭಾರದ್ವಾಜ ಶರ್ಮ, ಮಂಜುನಾಥ ರಾವ್, ಶಿರಾ ಜಯಕೃಷ್ಣ, ಪಾವಗಡ ಕೃಷ್ಣ ಶಾಸ್ತ್ರಿ, ಸತ್ಯನಾರಾಯಣ, ಮಹೇಶ್ವರ ಭಟ್, ಲಕ್ಷ್ಮಣ ಶಾಸ್ತ್ರಿ, ಸುಮನ್ ಹಾಗೂ ಅನೇಕ ವೇದ ವಿದ್ವಾಂಸರು, ಅರ್ಚಕರು, ಪುರೋಹಿತರು, ಅಡುಗೆ ಭಟ್ಟರು, ಮಾತೆಯರು ಭಾಗವಹಿಸಿದ್ದರು.