ಗುಬ್ಬಿ :- ಅಧ್ಯಕ್ಷರು ಮತ್ತು ಪಿಡಿಓ ರವರ ದುರ್ವರ್ತನೆ ಖಂಡಿಸಿ ಕಡಬ ಗ್ರಾಮದಲ್ಲಿ ಗ್ರಾಮಸ್ಥರಿಂದ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ದಿಢೀರ್ ಪ್ರತಿಭಟನೆ ನಡೆಸಲಾಗಿದೆ. ತಾಲೂಕಿನ ಹೋಬಳಿ ಮುಖ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಕಡಬ ಗ್ರಾಮದಲ್ಲಿ ಮೈಸೂರು-ನಿಟ್ಟೂರು ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಕೊಲ್ಲಾಪುರದಮ್ಮ ದೇವಿ ದೇವಾಲಯದ ಮುಂಭಾಗದಲ್ಲಿ ಸುಮಾರು 150 ಮನೆಗಳು ಹರಿಜನ ಕಾಲೋನಿ ಗ್ರಾಮದ ವಾಸಿಗಳು ವಾಸ ಮಾಡುತ್ತಿದ್ದು ಈ ಗ್ರಾಮದಲ್ಲಿ ಚರಂಡಿ ತುಂಬಿಕೊಂಡು ವಾಸದ ಮನೆಗಳಲ್ಲಿ ವಾಸ ಮಾಡಲು ಸಾಧ್ಯವಾಗದಷ್ಟು ವಾಸನೆ ಕಂಡುಬರುತ್ತಿದೆ ಹಾಗೂ ರಸ್ತೆಗಳು ಹಾಳಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಪಂ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗೆ ಹಲವು ಬಾರಿ ಮನವಿ ಮಾಡಿದರು ಯಾವುದೇ ರೀತಿ ಪ್ರಯೋಜನವಾಗುತ್ತಿಲ್ಲ.ಎಂದು ಗ್ರಾಮದ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕಡಬ ಗ್ರಾಮದ ಹರಿಜನ ಕಾಲೋನಿಯಿಂದ ಗ್ರಾಮ ಪಂಚಾಯಿತಿ ಮುಂಭಾಗಕ್ಕೆ ತಮಟೆಯನ್ನು ಬಾರಿಸುವ ಮೂಲಕ ಕಾಲ್ನಡಿಗೆಯಲ್ಲಿ ನಡೆದರು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಕುಳಿತು ಕಾರ್ಯನಿರ್ವಹಣಾ ಅಧಿಕಾರಿಗಳು ಆಗಮಿಸಿ ನಮ್ಮ ನೋವನ್ನು ಆಲಿಸುವವರೆಗೂ ಪಂಚಾಯಿತಿ ಮುಂಭಾಗದಿಂದ ಹೇಳುವುದಿಲ್ಲ ಎಂದು ಧಿಕ್ಕಾರ ಕೂಗಿದರು. ಕುಡಿಯುವ ನೀರು ಗ್ರಾಮಕ್ಕೆ ಬಿಡದೆ ಸುಮಾರು ದಿನಗಳು ಕಳೆದರೂ ಅಧ್ಯಕ್ಷರು ಮತ್ತು ಪಿಡಿಓ ಮೀನಾ ಮೇಷ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸುರೇಶ್,ಕೃಷ್ಣಮೂರ್ತಿ (ಕಿಟ್ಟಿ),ಶ್ರೀಧರ್ , ಮುರಳಿ,ಕುಮಾರ್, ಮಂಜನಾಥ, ಅನಿತ.ರಂಗನಾಥ, ಪ್ರಕಾಶ್, ಗೀರಿಶ್, ವಿನಯ್, ರವಿರಾಜ್, ದರ್ಶನ್, ಹಾಗೂ ಇನ್ನಿತರರು ಹಾಜರಿದ್ದರು.