ತುಮಕೂರು : ಗೂಳೂರು ಹೋಬಳಿಯ ಶೆಟ್ಟಪ್ಪನಹಳ್ಳಿ ಗ್ರಾಮದ ಶ್ರೀ ಜಲದಾರಮ್ಮ ದೇವಸ್ಥಾನದ ಉದ್ಘಾಟನೆ ಹಾಗೂ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಈ ಗ್ರಾಮದಲ್ಲಿ 50 ಮನೆಗಳಿರುವ ಗ್ರಾಮ ಇದಾಗಿದ್ದು ಒಂದು ಕೋಟಿಗೂ ಅಧಿಕ ವೆಚ್ಷದಲ್ಲಿ ನೂತನ ದೇವಾಲಯ ನಿರ್ಮಾಣ ಮಾಡಿರುವುದು ಬಹಳ ಸಂತಸದ ವಿಚಾರವಾಗಿದ್ದು, ಗ್ರಾಮದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ದೇವಾಲಯಗಳ ಪಾತ್ರ ಅಮೂಲ್ಯವಾಗಿದೆ, ನನ್ನ ವೈಯುಕ್ತಿಕವಾಗಿ ರೂ. 5,00,000/- (ಐದು ಲಕ್ಷ ರೂಪಾಯಿ)ಗಳ ನಗದನ್ನು ಧೇಣಿಗೆಗೆ ನೀಡಿದ್ದೇನೆ.
ನಾನು ಶಾಸಕನಾಗಿದ್ದಂತಹ ಸಂದರ್ಭದಲ್ಲಿ ಮಾಜಿ ಸಚಿವರಾದ ಜೆ.ಸಿ.ಮಾಧುಸ್ವಾಮಿರವರು ಕ್ಷೇತ್ರಕ್ಕೆ ಅನುಕೂಲವಾಗಲಿ ಎಂದು 750 ಕೋಟಿ ವೆಚ್ಚದಲ್ಲಿ ವೃಷಭಾವತಿ ಯೋಜನೆ ತಂದಿದ್ದು ಇದರಿಂದ ಕ್ಷೇತ್ರದ 26 ಕೆರೆಗಳಿಗೆ ಅನುಕೂಲವಾಗಲಿದ್ದು, ಕೆಲವು ರಾಜಕೀಯ ಮುಖಂಡರುಗಳು ತಮ್ಮ ಸ್ವ ಹಿತಾಸಕ್ತಿಗಾಗಿ ಇದನ್ನು ವಿರೋಧಿಸುತ್ತಿದ್ದಾರೆ. ಈ ವಿಚಾರದಲ್ಲಿ ಶಾಸಕ ಸುರೇಶ್ ಗೌಡರವರಿಗೆ ನನ್ನ ಸಂಪೂರ್ಣ ಬೆಂಬಲವಿದ್ದು ಕ್ಷೇತ್ರದ ರೈತರಿಗೆ ನೀರಿನ ಭವಣೆ ನೀಗಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹಾಗೂ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ತಾ.ಪಂ. ಸದಸ್ಯರಾದ ದೀಪು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೋಡಿಮುದ್ದನಹಳ್ಳಿ ಪ್ರಕಾಶ್, ಗ್ರಾ.ಪಂ. ಅಧ್ಯಕ್ಷ ಸಿದ್ಧರಾಜು, ಗ್ರಾ.ಪಂ. ಸದಸ್ಯರಾದ ಬಿದರಕಟ್ಟೆ ವಿನೋದ, ಸುತ್ತಮುತ್ತಲ ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.