ಮಧುಗಿರಿ : ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನವು ಕ್ಯಾಬಿನೆಟ್ ದರ್ಜೆಯ ಸ್ಥಾನ ಮಾನವಾಗಿದ್ದು ರೈತರಿಗೆ ಹೆಚ್ಚು ಅನೂಕೂಲ ಮಾಡುವಂತಹ ಸ್ಥಾನವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.
ಪಟ್ಟಣದ ತುಮುಲ್ ಉಪ ಕಛೇರಿಯಲ್ಲಿ ಅಭಿನಂದನಾ ಸಮಾರಂಭ ಹಾಗೂ ಹಾಲು ಉತ್ಪಾದಕ ರೈತರಿಗೆ 41.95 ಲಕ್ಷ ರೂ ಗಳ ಚೆಕ್ ವಿತರಣೆ ಮತ್ತು ಕ್ಯಾಲೆಂಡರ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು , ಹಾಲಿ ಅಧ್ಯಕ್ಷ ರಿಂದ ರೈತರಿಗೆ ಅನೂಕೂಲ ವಾಗುವ ನೀರೀಕ್ಷೆ ಇದೆ. ಇತ್ತೀಚೆಗೆ ಮುಖ್ಯಮಂತ್ರಿಗಳು ಸೆಷನ್ ನಂತರ ಹಾಲಿನ ದರವನ್ನು ಕನಿಷ್ಟ 3-5 ರೂ ಗಳ ವರೆಗೆ ಹೆಚ್ಚಿಸುವ ನೀರೀಕ್ಷೆ ಇದೆ. ಈಗಾಗಲೇ ಮೆಗಾ ಡೇರಿ ಕಾಮಗಾರಿ ಆರಂಭವಾಗಿದ್ದು ಈ ಕಾಮಗಾರಿಯನ್ನು ಅತೀ ಶೀಘ್ರವಾಗಿ ಪೂರ್ಣಗೊಳಿಸ ಬೇಕು. ಪೌಡರ್ ತಯಾರಿಕಾ ಘಟಕ ಸ್ಥಾಪನೆಯ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಬೇಸಿಗೆ ಆರಂಭವಾಗಿರುವುದರಿಂದ . ಕುಣಿಗಲ್ , ತುಮಕೂರು ಗ್ರಾಮಾಂತರ , ಪಾವಗಡ , ಕೊರಟಗೆರೆ ಕ್ಷೇತ್ರಗಳಲ್ಲಿ ಹಾಲಿನ ಶೇಖರಣೆ ಇಳಿಮುಖವಾಗಿದೆ.
ಜಾನುವಾರುಗಳ ಲಸಿಕೆಗಳು ವ್ಯತ್ಯಯವಾಗುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕುಣಿಗಲ್ ನಲ್ಲಿ 19 ಸೊಸೈಟಿ ಗಳಿದ್ದು 40 ಕೋಟಿಗಳ ವರೆವಿಗೂ ಸಾಲ ನೀಡಲಾಗಿದೆ ಎಂ ಟಿ ಎಲ್ ಸಾಲವನ್ನಾಗಿ 15 ಕೋಟಿ ರೂಗಳನ್ನು ನೀಡಲಾಗಿದೆ.
ಲಿಂಕ್ ಕೆನಾಲ್ ವಿಚಾರದಲ್ಲಿ ನಾನು ಮತ್ತು ನಮ್ಮ ತಂದೆಯವರು ಅನಗತ್ಯ ತೊಂದರೆ ನೀಡುತ್ತಿದ್ದಾರೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಎಕ್ಸಪ್ರೆಸ್ ಲಿಂಕ್ ಕ್ಯಾನೆಲ್ ಕಾಮಗಾರಿ ಯಿಂದ ಕೊರಟಗೆರೆ , ಮಧುಗಿರಿ ಗೆ ಬಾರಿ ಅನಾನೂಕೂಲವಾಗಲಿದ್ದು ನಮ್ಮ ಪಾಲಿನ ನೀರನ್ನು ನಾವು ಹರಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲಾ.
ಹನಿ ಟ್ರಾಫ್ ಮಾಡಿಸುತ್ತೀರುವವರಿಗೆ ಬಳ್ಳೆಯದಾಗಲಿ ನನ್ನ ಹಾಗೂ ನಮ್ಮ ತಂದೆಯವರ ವಿರುದ್ಧ ಹನಿ ಟ್ರಾಫ್ ಮಾಡಲಾಗುತ್ತಿದ್ದು ಈ ಬಗ್ಗೆ ನನ್ನಲ್ಲಿ ಅಗತ್ಯ ದಾಖಲೆಗಳಿದ್ದು ಶನಿವಾರ ಸಂಜೆ ಮುಖ್ಯಮಂತ್ರಿಗಳನ್ನು ಭೇಟಿ ನೀಡಿ ಚರ್ಚಿಸಲಾಗುವುದು ಅವರು ಸೂಚಿಸಿದರೆ ದೂರ ನೀಡಲಾಗುವುದು ಎಂದರು.
ಪಾವಗಡ ಕ್ಷೇತ್ರದ ಶಾಸಕರು ಹಾಗೂ ತುಮುಲ್ ಅಧ್ಯಕ್ಷ ಹೆಚ್ ವಿ ವೆಂಕಟೇಶ್ ಮಾತನಾಡಿ ತುಮುಲ್ ಅಧ್ಯಕ್ಷ ಸ್ಥಾನದ ಆಕ್ಷಾಂಕ್ಷಿ ನಾನು ಆಗಿರಲಿಲ್ಲ ಆದರೆ ಮುಖ್ಯಮಂತ್ರಿಗಳು , ಸಹಕಾರ ಸಚಿವರು , ಗೃಹ ಸಚಿವರು ನನ್ನನ್ನು ಈ ಸ್ಥಾನಕ್ಕೆ ಅಧ್ಯಕ್ಷನಾಗಿ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ರೈತರ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಲಾಗುವುದು ,
50-100 ಕೋಟಿ ರೂಗಳನ್ನು ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು. ನಮ್ಮ ತುಮುಲ್ ನಲ್ಲಿ ರೈತರಿಗೆ ದೊರೆಯುವ ಸೌಲಭ್ಯಗಳು ಇತರೆ ಖಾಸಗಿ ಡೇರಿಗಳಲ್ಲಿ ದೊರಕುವುದಿಲ್ಲ. ಕೆಲವು ಎ ಎಂ ಸಿ ಗಳಲ್ಲಿ ನೀರು ಮಿಶ್ರಣ ಮಾಡುತ್ತಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ತನಿಖಾ ದಳವನ್ನು ರಚಿಸಲಾಗಿದ್ದು ಇಂತಹ ಆಕ್ರಮಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ತುಮುಲ್ ನಿರ್ದೇಶಕ ಬಿ ನಾಗೇಶ್ ಬಾಬು ಮಾತನಾಡಿ ,
ಬೇಸಿಗೆ ಕಾಲದಲ್ಲಿ ಹಾಲಿನ ಗುಣ ಮಟ್ಟ ಕಡಿಮೆ ಬರುವುದರಿಂದ ನಮ್ಮ ಪಾಲಿನ ಹಾಲುನ್ನು ಖಾಸಗಿ ಡೇರಿಯವರು ಕಡಿಮೆ ದರದಲ್ಲಿ ಖರೀದಿಸುತ್ತಿದ್ದಾರೆ. ಸಂಗ್ರಹಿಸುತ್ತಾರೆ ಇಂತಹ ಸಂಧರ್ಭದಲ್ಲಿ ಖಾಸಗಿ ಡೇರಿ ನೋಟಿಸ್ ನೀಡಬೇಕು , ಗುಣಮಟ್ಟದಲ್ಲಿ ಶೇ. 92.5 ರಷ್ಟು ತಾಲೂಕಿನಲ್ಲಿ ಗಳಿಕೆಯಾಗಿ ಜಿಲ್ಲೆಯಲ್ಲಿ 3 ಸ್ಥಾನಗಳಿಸಿದೆ. ಉತ್ತಮವಾದ ಗುಣಮಟ್ಟ ನೀಡುವಂತಹ ಡೇರಿಯ ಕಾರ್ಯದರ್ಶಿಗೆ 10 ಸಾವಿರ , ಸಹಾಯಕರಿಗೆ 5 ಸಾವಿರ ರೂಗಳನ್ನು ವೈಯಕ್ತಿಕ ವಾಗಿ ನೀಡಲಾಗುವುದು.
ಕೆ ಎಂ ಎಫ್ ನಿರ್ದೇಶಕ ಎಂ.ಪಿ.ಕಾಂತರಾಜು ಮಾತನಾಡಿ ನಮ್ಮ ತಾಲೂಕಿಗೆ ಹಾಲಿನ ಪೌಡರ್ ಅಥವಾ ಐಸ್ ಕ್ರೀಂ ತಯಾರಿಕಾ ಘಟಕವನ್ನು ಮಂಜೂರು ಮಾಡಿ ಕೊಡುವಂತೆ ಮನವಿ ಮಾಡಿದರು.
ಪುರಸಭಾಧ್ಯಕ್ಷ ಲಾಲಪೇಟೆ ಮಂಜುನಾಥ್ , ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಹೆಚ್ ಸಿ ಭೈರಪ್ಪ , ಟಿಎಪಿ ಎಂ ಸ್ ಅಧ್ಯಕ್ಷ ಎಂ.ಎಸ್ ಮಲ್ಲಿಕಾರ್ಜುನಯ್ಯ , ಡಿಸಿಸಿ ಬ್ಯಾಂಕ್ಬುಪಾಧ್ಯಕ್ಷ
ಜಿ.ಜೆ ರಾಜಣ್ಣ , ತುಮುಲ್ ವ್ಯವಸ್ಥಾಪಕ ಜಿ. ಶ್ರೀನಿವಾಸನ್ , ಎ ಆರ್ ಸಿ ಎಸ್ ಸಣ್ಣಪ್ಪಯ್ಯ , ಕೊಂಡವಾಡಿ ರಾಜಕುಮಾರ್ , ಚಲಪತಿ , ಡಾ.ಶ್ರೀನಿವಾಸ್ , ಉಪಕಛೇರಿಯ ಮುಖ್ಯಸ್ಥ ಸಿ.ರಂಜಿತ್ , ವಿಸ್ತರಣಾಧಿಕಾರಿ ಕೆ.ಪಿ. ಮಂಜುನಾಥ್ , ಸಹನಾ ಸ್ವಾಮಿ , ಎ.ಎಸ್ ಲಕ್ಷ್ಮೀ ಕಾಂತ್ ಹಾಗೂ ಮತ್ತಿತರರು ಇದ್ದರು.