ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ - Vidyaranjaka

ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ

ತುಮಕೂರು(ಕ.ವಾ.)ಮಾ.೨೫: ಪ್ರವಾಸೋದ್ಯಮ ಇಲಾಖೆಯು ಎಸ್.ಸಿ.ಎಸ್.ಪಿ./ಟಿ.ಎಸ್.ಪಿ. ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗಾಗಿ ವಿವಿಧ ವಸತಿ ಸಹಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ತರಬೇತಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ಆತಿಥ್ಯ ಕ್ಷೇತ್ರದ ಮೈಸೂರಿನ ಫುಡ್ ಕ್ರಾಫ್ಟ್ ಇನ್ಸ್ಟಿಟ್ಯೂಟ್(ಈಅI) ಹಾಗೂ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್(Iಊಒ)ಸಂಸ್ಥೆಗಳ ಮೂಲಕ ನೀಡಲಾಗುವುದು.
ಆಹಾರ ಮತ್ತು ಪಾನೀಯ ಸೇವಾ ಮೇಲ್ವಿಚಾರಕ ಹಾಗೂ ಬಹು ಅಡುಗೆ ತಯಾರಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಹಾರ ಮತ್ತು ಪಾನೀಯ ಸೇವಾ ಮೇಲ್ವಿಚಾರಕ ಹುದ್ದೆಗೆ ಕನಿಷ್ಠ ೧೦ನೇ ತರಗತಿ ಉತ್ತೀರ್ಣರಾಗಿದ್ದು, ೨೦ ರಿಂದ ೪೫ ವರ್ಷದೊಳಗಿನವರಾಗಿರಬೇಕು ಹಾಗೂ ಬಹು ಅಡುಗೆ ತಯಾರಕ ಹುದ್ದೆಗೆ ಕನಿಷ್ಠ ೮ನೇ ತರಗತಿ ಪಾಸಾಗಿದ್ದು, ೨೦ ರಿಂದ ೪೫ ವರ್ಷದೊಳಗಿನವರಾಗಿರಬೇಕು.
ಅಭ್ಯರ್ಥಿಗಳು ನಿಗಧಿತ ಅರ್ಜಿ ನಮೂನೆಯನ್ನು ಮಾರ್ಚ್ ೨೧ರೊಳಗಾಗಿ ನಗರದ ಅಶೋಕ ರಸ್ತೆ, ರೆಡ್‌ಕ್ರಾಸ್ ಭವನ, ೧ನೇ ಮಹಡಿ, ಕೊಠಡಿ ಸಂಖ್ಯೆ ಎಫ್ ೨೩೨ರಲ್ಲಿರುವ ಪ್ರವಾಸೋದ್ಯಮ ಇಲಾಖೆಗೆ ಖುದ್ದಾಗಿ ಭೇಟಿ ನೀಡಿ ಪಡೆಯಬಹುದಾಗಿದೆ.
ಭರ್ತಿ ಮಾಡಿದ ಅರ್ಜಿಯನ್ನು ಸ್ವಯಂ ದೃಢೀಕರಿಸಿ ಅಗತ್ಯ ದಾಖಲೆಗಳೊಂದಿಗೆ ದ್ವಿಪ್ರತಿಯಲ್ಲಿ ಏಪ್ರಿಲ್ ೧ರೊಳಗಾಗಿ ಮುಚ್ಚಿದ ಲಕೋಟೆಯಲ್ಲಿ ಮೇಲ್ಕಂಡ ಕಚೇರಿಗೆ ಸಲ್ಲಿಸಬಹುದಾಗಿದೆ. ಅರ್ಜಿಯೊಂದಿಗೆ ಅಭ್ಯರ್ಥಿಯ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಶೈಕ್ಷಣಿಕ ವಿದ್ಯಾರ್ಹತೆ ಅಂಕಪಟ್ಟಿ ಮತ್ತಿತರ ದಾಖಲೆಗಳನ್ನು ಲಗತ್ತಿಸಬೇಕು.
ಈಗಾಗಲೇ ಪ್ರವಾಸೋದ್ಯಮ ಇಲಾಖೆಯು ನೀಡಲಾಗುತ್ತಿರುವ ಈ ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ರಾಜ್ಯದ ವಿವಿಧ ಪಂಚತಾರಾ ಹಾಗೂ ಇತರೆ ಹೋಟೆಲ್‌ಗಳಲ್ಲಿ ನೌಕರಿ ಖಾತರಿಯಾಗಿರುತ್ತದೆ. ತರಬೇತಿ ಪಡೆಯುವ ಅವಧಿಯಲ್ಲಿ ಮಾಹೆಯಾನ ೨,೦೦೦ ರೂ.ಗಳ ಸ್ಟೈಫಂಡ್ ನೀಡಲಾಗುವುದು. ತರಬೇತಿಗೆ ಹಾಜರಾಗುವವರಿಗೆ ಉಚಿತ ವಸತಿ, ಊಟೋಪಚಾರ ಹಾಗೂ ಸಮವಸ್ತ್ರವನ್ನು ನೀಡಲಾಗುವುದು.
ತರಬೇತಿ ಜೊತೆಗೆ ರಾಜ್ಯದ ವಿವಿಧ ಪಂಚತಾರಾ ಹಾಗೂ ಇತರೆ ಹೋಟೆಲ್‌ಗಳಲ್ಲಿ ಆನ್ ಜಾಬ್ ಟ್ರೈನಿಂಗ್ ಸಹ ನೀಡಲಾಗುವುದು. ತರಬೇತಿ ಪಡೆದವರಿಗೆ ಬೆಂಗಳೂರಿನ ಐಹೆಚ್‌ಎಂ ಹಾಗೂ ಮೈಸೂರಿನ ಎಫ್‌ಸಿಐ ಸಂಸ್ಥೆಗಳಿಂದ ಪ್ರಮಾಣ ಪತ್ರ ನೀಡುವುದರಿಂದ ರಾಜ್ಯವಲ್ಲದೆ ದೇಶದ ಯಾವುದೇ ಭಾಗದ ಹೋಟೆಲ್ ಉದ್ಯಮದಲ್ಲಿ ಕೆಲಸ ಖಾತರಿಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ.೦೮೧೬-೨೦೦೬೩೪೯ನ್ನು ಸಂಪರ್ಕಿಸಬೇಕೆಂದು ತಹಶೀಲ್ದಾರ್ ರಾಜೇಶ್ವರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!