ಗುಬ್ಬಿ:-ಹರಿದೇವನಹಳ್ಳಿ ಗ್ರಾಮಸ್ಥರಿಂದ ಕಲ್ಲೂರು ಗ್ರಾ.ಪಂ.ಪಿಡಿಓ ಮತ್ತು ರಾಮೇಗೌಡ ಎಂಬ ವ್ಯಕ್ತಿ ವಿರುದ್ಧ ಗ್ರಾಮ ಪಂಚಾಯಿತಿ ಮುಂಬಾಗ ದಿಢೀರ್ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದ ಘಟನೆ ಸೋಮವಾರ ಕಂಡು ಬಂತು.
ತಾಲೂಕಿನ ಕಡಬ ಹೋಬಳಿ ಕಲ್ಲೂರು ಗ್ರಾಮ ಪಂ ಹರಿದೇವನಹಳ್ಳಿ ಗ್ರಾಮದಲ್ಲಿ ಸುಮಾರು ನೂರು ವರ್ಷಗಳ ಹಳೇಯ ವಾಸದ ಮನೆಗಳ ಜಾಗವನ್ನು ರಾಮೇಗೌಡ ಎಂಬ ವ್ಯಕ್ತಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ರಾಮೇಗೌಡ ರವರ ಸಹೋದರ ಮತ್ತು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಧಿಡೀರ್ ಪ್ರತಿಭಟನೆ ಮಾಡಿದರು.
ರಾಮೇಗೌಡ ರವರ ಅಣ್ಣ ಬೆಟ್ಟಸ್ವಾಮಿಗೌಡ ಮಾತನಾಡಿ ನನ್ನ ತಾಯಿ ಮೂರು ಜನ ಗಂಡು ಮಕ್ಕಳಲ್ಲಿ ಇಬ್ಬರು ಮಕ್ಕಳಿಗೆ ಒಂದೊಂದು ಸೈಟ್ ಜಾಗವನ್ನು ಬರೆದು ಕೊಟ್ಟಿದ್ದರು ಆದರೆ ರಾಮೇಗೌಡ ನನ್ನ ತಮ್ಮ ಗ್ರಾಮಸ್ಥರ ಜಾಗಕ್ಕೆ ಅತಿಕ್ರಮಣ ಮಾಡಿರುವುದು ಸರಿಯಲ್ಲ ನಮ್ಮ ಹಳೇಯ ಮನೆಯ ಪಕ್ಕದಲ್ಲಿ ಕೆಲವು ಗ್ರಾಮಸ್ಥರ ವಾಸದ ಹಳೇಯ ಮನೆಗಳು ಇದ್ದು ನಾವೆಲ್ಲರೂ ಒಟ್ಟಾಗಿ ಒಂದೇ ಗ್ರಾಮದ ಜನಗಳಂತೆ ವಾಸ ಮಾಡುತ್ತಿದ್ದೆವು ಎಂದರು.
ಗ್ರಾಮ ಪಂಚಾಯತಿ ಸದಸ್ಯ ಬ್ಯಾಟರಾಜು ಮಾತನಾಡಿ ಗ್ರಾಮ ಠಾಣೆ ಜಾಗವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಮೇಗೌಡ ಎಂಬ ವ್ಯಕ್ತಿಗೆ ಈ ಸ್ವತ್ತು ಮಾಡಿಕೊಟ್ಟಿದ್ದಾರೆ ಈ ಜಾಗ ಕೆಲವು ಗ್ರಾಮಸ್ಥರ ಹಳೇಯ ವಾಸದ ಮನೆಗಳ ಜಾಗವಾಗಿರುತ್ತದೆ ಎಂದರು.
ಗ್ರಾಮದ ಮಹಿಳೆ ಮಾತನಾಡಿ ನಮ್ಮ ತಾತ ಮತ್ತು ಮುತ್ತಾತಂದಿರು ವಾಸ ಮಾಡಿದ ಜಾಗದಲ್ಲಿ ನಾವುಗಳು ಈಗ ದನದ ಕಸ ಹಾಕಿಕೊಂಡು ತಿಪ್ಪೆ ಮಾಡಿಕೊಂಡಿದ್ದೆವು ಅದರ ಜೊತೆಗೆ ಮುತ್ತಾತಂದಿರ ಜಾಗವನ್ನು ರಾಮೇಗೌಡ ಎಂಬ ವ್ಯಕ್ತಿ ಅಕ್ರಮವಾಗಿ ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ ಹಾಗಾಗಿ ಈ ಜಾಗವನ್ನು ನಾವು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಪಿಡಿಒ ಮತ್ತು ರಾಮೇಗೌಡರ ವಿರುದ್ಧ ಆಕ್ರೋಶ ಹೊರಹಾಕಿದರು.
ಗ್ರಾಮದ ಮತ್ತೊಬ್ಬ ವ್ಯಕ್ತಿ ಸಣ್ಣ ಬೆಟ್ಟಯ್ಯ ಮಾತನಾಡಿ ಮುತ್ತಾತನ ಕಾಲದಿಂದ ವಾಸ ಮಾಡಿಕೊಂಡು ಅನುಭವದಲ್ಲಿರುವ ಜಾಗಕ್ಕೆ ರಾಮೇಗೌಡ ಎಂಬ ವ್ಯಕ್ತಿ ಈ ಜಾಗ ನನಗೆ ಈ ಖಾತೆ ಹಾಗಿದ್ದು ಈ ಜಾಗದಲ್ಲಿ ನಾನು ಸ್ವಚ್ಛ ಮಾಡಲು ಮುಂದಾಗಿದ್ದೇನೆ ಎಂದು ಏಕಾಏಕಿ ಆಗಮಿಸಿದ್ದಾರೆ. ನಮ್ಮ ಜಾಗಕ್ಕೆ ತಂತಿ ಬೇಲಿ ಹಾಕಲು ಮುಂದಾಗಿರುವ ರಾಮೇಗೌಡ ವಿರುದ್ಧ ನಾವು ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಹರಿದೇವನಹಳ್ಳಿ ಗ್ರಾಮದ ನೂರಾರು ಮಹಿಳೆಯರು ಮತ್ತು ಗ್ರಾಮಸ್ಥರು ಹಾಜರಿದ್ದರು.