ಸರ್ಕಾರದ ನಡೆ ಕಾರ್ಯಕರ್ತರ ಕಡೆ ಇನ್ನೊಂದು ವಾರದಲ್ಲಿ ಜಿಲ್ಲೆಯಲ್ಲಿ ಅನುಷ್ಠಾನವಾಗಲಿದೆ : ಶ್ರೀನಿವಾಸ್ - Vidyaranjaka

ಸರ್ಕಾರದ ನಡೆ ಕಾರ್ಯಕರ್ತರ ಕಡೆ ಇನ್ನೊಂದು ವಾರದಲ್ಲಿ ಜಿಲ್ಲೆಯಲ್ಲಿ ಅನುಷ್ಠಾನವಾಗಲಿದೆ : ಶ್ರೀನಿವಾಸ್

ತುಮಕೂರು : ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಮಹಾಭಿಯಾನ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಇನ್ನೊಂದು ವಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರರವರ ನೇತೃತ್ವದಲ್ಲಿ ನಡೆಯಲಿದ್ದು, ಈ ಒಂದು ಅಭಿಯಾನವು ನಮ್ಮ ಜಿಲ್ಲೆಯ ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟನಾತ್ಮಕವಾಗಿ ಸಂಘಟಿಸುವ ಸದುದ್ದೇಶವನ್ನು ಹೊಂದಲಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರಾದ ಎಸ್.ಟಿ.ಶ್ರೀನಿವಾಸ್ ಇಂದು ತಿಳಿಸಿದರು.

 

 

 

 

 

ಮುಂದುವರೆದ ಮಾತನಾಡುತ್ತಾ ನಮ್ಮ ಸರ್ಕಾರವು ಸದೃಢವಾಗಿದ್ದು, ಇತ್ತೀಚಿನ ಬೆಳವಣಿಗೆಗಳು ವಿರೋಧಪಕ್ಷಗಳ ಕುತಂತ್ರದಿಂದ ನಡೆಯುತ್ತಿವೆ, ಅವರಿಗೆ ಅಧಿಕಾರವಿಲ್ಲವೆಂಬ ಹತಾಶೆಯಿಂದ ನಮ್ಮ ಪಕ್ಷದ ಮೇಲೆ ಗೂಬೆ ಕೂರಿಸಲು ಮುಂದಾಗಿವೆ, ನಮ್ಮ ಸರ್ಕಾರ ನುಡಿದಂತೆ ನಡೆದಿದೆ, ನಡೆಯುತ್ತಿದೆ, ಏಕೆಂದರೆ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತೀ ಜಿಲ್ಲೆಯಲ್ಲಿಯೂ ಸಕಾರತ್ಮಕವಾಗಿ ಜಾರಿಯಾಗಿ, ಲಕ್ಷಾಂತರ ಜನರು ಇದರ ಸದುಪಯೋಗ ಪಡೆಯುತ್ತಿದ್ದಾರೆಂದು ತಿಳಿಸಿದರು, ಇನ್ನೆರಡು ದಿನಗಳಲ್ಲಿ ನಮ್ಮ ಕೆಪಿಸಿಸಿ ವತಿಯಿಂದ ನಡೆಸುತ್ತಿರುವ ಮಹಾಭಿಯಾನವು ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳಲಿದ್ದು, ಜಿಲ್ಲಾ ಉಸ್ತುವರಿ ಸಚಿವರ ಮಾರ್ಗದರ್ಶನದಲ್ಲಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ನಡೆಯಲಿದೆ, ಇನ್ನೇನು ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿದ್ದು, ಅದಕ್ಕೆ ಇದು ಪೂರಕವಾಗಲಿದೆಂದರು. ಯುದ್ಧಕಾಲದಲ್ಲಿ ನಾವು ಶಸ್ತ್ರಭ್ಯಾಸ ಮಾಡುವುದಿಲ್ಲ, ಅದಕ್ಕೂ ಮುಂಚಿತವಾಗಿಯೇ ನಾವು ಸಕಲ ರೀತಿಯಲ್ಲಿ ಸಿದ್ಧರಾಗಿದ್ದೇವೆ ಏಕೆಂದರೆ ಕಾಂಗ್ರೆಸ್ ಪಕ್ಷವು ಮೊದಲಿನಿಂದಲೂ ಸಂಘಟನಾತ್ಮಕ ಪಕ್ಷ ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ ಆದರೂ ಸಹ ನಮ್ಮ ಕಾರ್ಯಕರ್ತರಲ್ಲಿ ಹುರುಪು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಯಶಸ್ವಿಯಾಗಿ ನಿಭಾಯಿಸಿ, ಬಹುಪಾಲು ಸಾಧಿಸುವಲ್ಲಿ ಈ ಒಂದು ಅಭಿಯಾನ ಸಹಕಾರಿಯಾಗಲಿದೆ ಎಂದು ತಿಳಿಸಿದರು.

 

 

 

 

ಮುಂದುವರೆದು ಮಾತನಾಡುತ್ತಾ ನಮ್ಮ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯವರವರು ಅತ್ಯುತ್ತಮ ಬಜೆಟ್‌ನ್ನು ನೀಡಿದ್ದು, ಈ ಬಜೆಟ್ ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಸರ್ವ ಸಮಾನವಾದಂತಹ ಸ್ನೇಹಪೂರ್ವಕ ಬಜೆಟ್ ಆಗಿದೆ, ಪ್ರತಿಯೊಬ್ಬರೂ ಸಹ ಸಂತೋಷದಿಂದ ಸ್ವೀಕರಿಸಿದ್ದಾರೆ, ಪ್ರತಿಪಕ್ಷಗಳಿಗೆ ಕಾಂಗ್ರೆಸ್ ಪಕ್ಷವು ಜನರಿಗೆ ಮಾಡುತ್ತಿರುವ ಒಳ್ಳೆಯ ಕಾರ್ಯಗಳನ್ನು ಸಹಿಸಿಕೊಳ್ಳದೇ ಬಜೆಟ್ ಬಗ್ಗೆ ವಿರೋದ ವ್ಯಕ್ತಪಡಿಸುವುದು, ಅವೇಹಳನವಾಗಿ ಮಾತನಾಡುವುದನ್ನು ನೋಡುತ್ತಿದ್ದೇವೆ, ಆದರೆ ಸಾಮಾನ್ಯ ಪ್ರಜೆಗೂ ಅನ್ವಯವಾಗುವಂತಹ ಬಜೆಟ್ ನೀಡಿರುವುದು ನಮಗೆ ಹೆಮ್ಮೆಯ ವಿಷಯವೆಂದು ತಿಳಿಸಿದರು.

 

 

 

 

 

 

ಇನ್ನು ಜಿಲ್ಲೆಯಲ್ಲಿ ವೃಷಭಾವತಿ ನೀರಿನ ವಿಚಾರಕ್ಕೆ ಮಾತನಾಡಿ ಜನರಿಗೆ ಒಳ್ಳೆಯದಾಗುತ್ತದೆ ಎಂದರೇ ನಾವು ಯಾಕೆ ವಿರೋಧ ಮಾಡುತ್ತೇವೆ, ನಮ್ಮ ಸಂಪೂರ್ಣ ಬೆಂಬಲ ವೃಷಭಾವತಿ ನೀರಿನ ವಿಚಾರದಲ್ಲಿರುತ್ತದೆ, ನಾನು ಪಕ್ಷಾತೀತವಾಗಿ ಬೆಂಬಲವನ್ನು ಸೂಚಿಸುತ್ತೇನೆ, ಆ ಒಂದು ಒಳ್ಳೆಯ ಕಾರ್ಯವನ್ನು ಸುರೇಶ್ ಗೌಡ್ರು ಮಾಡಿದರೇನು, ಗೌರಿಶಂಕರ್ ಅವರು ಮಾಡಿದರೇನು, ಒಟ್ಟಿನಲ್ಲಿ ನಮ್ಮ ಜನತೆಗೆ ಒಳ್ಳೆಯದಾಗುತ್ತದೆ ಎಂದರೇ ಆ ಸಮಯದಲ್ಲಿ ನಾವು ಪಕ್ಷಾತೀತವಾಗಿ ಬೆಂಬಲಕ್ಕೆ ನಿಲ್ಲುವ ಮನಸ್ಥಿತಿ ನಮ್ಮದು ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಜನರಿಗೂ ಯುಗಾದಿ ಹಾಗೂ ರಂಜಾನ್ ಹಬ್ಬದ ಶುಭಾಶಯಗಳನ್ನು ಮಾಧ್ಯಮಗಳ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!