ಶಿವನ ದರ್ಶನ ಪಡೆಯುವ ಮುನ್ನ ನಂದಿಯ ದರ್ಶನ ಪಡೆಯುವುದು
ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಮುನ್ನ ನಂದಿಯ ಎರಡೂ ಕೊಂಬುಗಳಿಗೆ ಕೈಮುಟ್ಟಿಸಿ ಅದರ ದರ್ಶನ ಪಡೆಯಬೇಕು ನಂದಿಯ ಕೊಂಬುಗಳಿಂದ ಪ್ರಕ್ಷೇಪಿತವಾಗುವ ಶಿವತತ್ತ್ವದ ಸಗುಣ ಮಾರಕ ಲಹರಿಗಳಿಂದ ವ್ಯಕ್ತಿಯ ಶರೀರದಲ್ಲಿನ ರಜ-ತಮ ಕಣಗಳ ವಿಘಟನೆಯಾಗಿ ವ್ಯಕ್ತಿಯ ಸಾತ್ತ್ವಿಕತೆಯು ಹೆಚ್ಚಾಗುತ್ತದೆ. ಇದರಿಂದ ವ್ಯಕ್ತಿಗೆ ಶಿವಲಿಂಗದಿಂದ ಹೊರ ಬೀಳುವ ಶಕ್ತಿಶಾಲಿ ಲಹರಿಗಳನ್ನು ಸಹಿಸಲು ಸಾಧ್ಯವಾಗುತ್ತದೆ. ನಂದಿಯ ಕೊಂಬುಗಳಿಂದ ದರ್ಶನವನ್ನು ಪಡೆದುಕೊಳ್ಳದೇ ನೇರವಾಗಿ ಶಿವನ ದರ್ಶನವನ್ನು ಪಡೆದು ಕೊಂಡರೆ ತೇಜಲಹರಿಗಳ ಆಘಾತದಿಂದ ಶರೀರದಲ್ಲಿ ಉಷ್ಣತೆ ನಿರ್ಮಾಣವಾಗುವುದು, ತಲೆ ಭಾರವಾಗುವುದು, ಶರೀರ ಅಕಸ್ಮಾತ್ತಾಗಿ ಕಂಪಿಸುವುದು ಮುಂತಾದ ತೊಂದರೆಗಳಾಗಬಹುದು.
ಶೃಂಗದರ್ಶನದ ಮಹತ್ವವೇನು ?
‘ಶೃಂಗದರ್ಶನ’ ಎಂದರೆ ನಂದಿಯ ಕೊಂಬುಗಳ ಮೂಲಕ ಶಿವಲಿಂಗವನ್ನು ನೋಡುವುದು. ನಂದಿಯ ಬಲಬದಿಗೆ ಕುಳಿತುಕೊಂಡು ಅಥವಾ ನಿಂತುಕೊಂಡು ಎಡಗೈಯನ್ನು ನಂದಿಯ ವೃಷಣದ ಮೇಲಿಡಬೇಕು. ಬಲಗೈಯ ತರ್ಜನಿ (ಹೆಬ್ಬೆರಳಿನ ಸಮೀಪದ ಬೆರಳು) ಮತ್ತು ಹೆಬ್ಬೆರಳನ್ನು ನಂದಿಯ ಎರಡು ಕೊಂಬುಗಳ ಮೇಲಿಡಬೇಕು. ಎರಡು ಕೊಂಬುಗಳು ಮತ್ತು ಅದರ ಮೇಲಿರಿಸಿದ ಎರಡು ಬೆರಳುಗಳ ನಡುವಿನ ಖಾಲಿ ಜಾಗದಿಂದ ಶಿವಲಿಂಗದ ದರ್ಶನವನ್ನು ಪಡೆದುಕೊಳ್ಳಬೇಕು.
ಲಿಂಗದ ದರ್ಶನವನ್ನು ಪಡೆದುಕೊಳ್ಳುವಾಗ ಶಿವಲಿಂಗ ಮತ್ತು ನಂದಿಯ ನಡುವೆ ನಿಂತುಕೊಳ್ಳದೇ ಅಥವಾ ಕುಳಿತುಕೊಳ್ಳದೇ ಲಿಂಗ ಮತ್ತು ನಂದಿಯನ್ನು ಜೋಡಿಸುವ ರೇಖೆಯ ಬದಿಯಲ್ಲಿ ನಿಂತುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಶಿವ’