ತುಮಕೂರು : ಗುರುವಾರ ಖಾಸಗಿ ಹೋಟೆಲ್ ಒಂದರಲ್ಲಿ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ್, ಕೆಪಿಸಿಸಿ ಉಪಾಧ್ಯಕ್ಷರಾದ ಮುರಳೀಧರ ಹಾಲಪ್ಪ, ಮಾಜಿ ಶಾಸಕರಾದ ಡಿ.ಸಿ.ಗೌರಿಶಂಕರ್ ರವರ ವಿರುದ್ಧ ಮಾಡಿದ ಪತ್ರಿಕಾಗೋಷ್ಠಿಗೆ ಇಂದು ಮಾಜಿ ಶಾಸಕರಾದ ಡಿ.ಸಿ.ಗೌರಿಶಂಕರ್ ಟಾಂಗ್ ಕೊಟ್ಟರು.
ಬಿಜೆಪಿ ಮುಖಂಡರಾದ ಆರ್ ಆಶೋಕ್, ವಿ. ಸೋಮಣ್ಣ, ಮಾಜಿ ಶಾಸಕ ಸೊಗಡು ಶಿವಣ್ಣ ಸೇರಿದಂತೆ ಹಲವು ಮುಖಂಡರು ಡಾ.ಜಿ. ಪರಮೇಶ್ವರ್ ಅವರನ್ನು ಅಜಾತಶತ್ರು ಎಂದು ಬಣ್ಣಿಸಿದ್ದಾರೆ. ಹೀಗಿದ್ದರೂ ತುಮಕೂರು ಗ್ರಾಮಾಂತರ ಶಾಸಕ ಸುರೇಶ ಗೌಡ, ಡಾ.ಜಿ. ಪರಮೇಶ್ವರ್ ಅವರನ್ನು ಸುಖಾ ಸುಮ್ಮನೆ ತಾಕತ್ತು, ದಮ್ಮು ಎನ್ನುವ ಪದ ಬಳಕೆ ಮಾಡಿ ತೆಜೋವಧೆ ಮಾಡುತ್ತಿರುವುದು ಖಂಡನಿಯ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ ಎಂದರು. ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರೇಶ್ ಗೌಡ ದಿವಂಗತ ಚನ್ನಿಗಪ್ಪ ಅವರ ಬಗ್ಗೆಯೂ ತುಚ್ಚ್ಯವಾಗಿ ಮಾತನಾಡಿದ್ದಾರೆ, ಈಚೆಗೆ ಶಾಸಕ ಅರೆಹುಚ್ಚನಂತೆ ಮಾತನಾಡುತ್ತಿದ್ದು ವ್ಯಕ್ತಿತ್ವ ಬದಲಾವಣೆ ಮಾಡಿಕೊಳ್ಳಲಿಲ್ಲವೆಂದರೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಡಾ. ಜಿ. ಪರಮೇಶ್ವರ್ ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದವರು. ಜಿಲ್ಲೆಗೆ ಅವರದೇ ಆದ ಕೊಡುಗೆ ನೀಡಿದ್ದಾರೆ. ತುಮಕೂರು ವಿವಿ ಸ್ಥಾಪನೆ, ತುಮಕೂರಿಗೆ ಮೆಟ್ರೂ ರೈಲು ತರಲು ಡಿಪಿಆರ್ ತಯಾರಿಸಲಾಗಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತರಲು ಸಹ ಪ್ರಯತ್ನ ನಡೆಯುತ್ತಿದೆ. ಪರಮೇಶ್ವರ್ ಅಭಿವೃದ್ಧಿ ಹರಿಕಾರ. ಅಂತಹ ವ್ಯಕ್ತಿಯನ್ನು ತೇಜೋವಧೆ ಮಾಡುತ್ತಿದ್ದಾರೆ. ಇದನ್ನು ಕೂಡಲೆ ನಿಲ್ಲಿಸಬೇಕು ಎಂದರು. ಮಾಜಿ ಜಿಲ್ಲಾಧ್ಯಕ್ಷ ರಾಮಕೃಷ್ಣ ಮಾತನಾಡಿ, ಡಾ.ಜಿ. ಪರಮೇಶ್ವರ್ ಅವರ ಬಗ್ಗೆ ನಾವು ಮಾತನಾಡಿದರೆ ನಮ್ಮನ್ನು ಪರಮೇಶ್ವರ್ ಅವರ ಚೇಲಗಳು ಎನ್ನುತ್ತಾರೆ. ನಾವು ಚೇಲಗಳು ಅಲ್ಲ ನಾವು ಕಾಂಗ್ರೆಸ್ ಪಕ್ಷದ ನಾಯಕರು. ಪರಮೇಶ್ವರ್ ಎಂದು ಹೊಂದಾಣಿಕೆ ಮಾಡಿಕೊಂಡ ರಾಜಕಾರಣಿ ಅಲ್ಲ, ಎಲ್ಲಾ ಪಕ್ಷದವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ಗೌರಿಶಂಕರ್ ಮಾತನಾಡಿ, ಕೆ.ಎನ್. ರಾಜಣ್ಣ ಅವರ ಬಗ್ಗೆ ಮಾತನಾಡಲು ಧೈರ್ಯವಿಲ್ಲವೆ, 2013 ರ ಚುನಾವಣೆಯಲ್ಲಿ ಹಾಗೂ ಮೊನ್ನೆ ಚುನಾವಣೆಯಲ್ಲಿ ಗೆಲ್ಲಲು ರಾಜಣ್ಣ ಕಾರಣ. ಅದಕ್ಕೆ ನಾನು ರಾಜಣ್ಣ ಪರವಾಗಿ ಯಾಕೆ ಮಾತನಾಡುತ್ತಿಲ್ಲ ಎಂಬ ಅರ್ಥದಲ್ಲಿ ಹೇಳಿರುವುದು. ನನ್ನ ಕಾಲದಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳು ಚನ್ನಾಗಿವೆ ಎಂದಿದ್ದಾರೆ. ಹೀರೆಹಳ್ಳಿ ಮತ್ತು ಕೆಸರಮಡು ರಸ್ತೆ ಮಾಡಿದ ಒಂದೇ ವರ್ಷದಲ್ಲಿ ರಸ್ತೆ ಕಿತ್ತು ಹೋಗಿದೆ. ಭ್ರಷ್ಟಚಾರವೆ ಎಸಗಿಲ್ಲವೆಂದರೆ ರಸ್ತೆಗಳು ಏಕೆ ಕಿತ್ತು ಹೋಗಿವೆ? ಮಾಹಿತಿ ಅವರಿಗೂ ಗೊತ್ತಿದೆ ಎಂದು ಗೌರಿಶಂಕರ್ ಕುಟುಕಿದರು. ಜೊತೆಗೆ ನೆನ್ನೆ ನಡೆದಂತಹ ಪತ್ರಿಕಾಗೋಷ್ಠಿಯಲ್ಲಿ ಮುರಳೀಧರ ಹಾಲಪ್ಪ ವಿರುದ್ಧ ಸಹ ಹಗುರವಾಗಿ ಮಾತನಾಡಿದ್ದೀರಾ, ನೀವು ಅವರು ಹಾಗೂ ಅವರ ತಂದೆ ಮಾಡಿದಂತಹ ಹಲವಾರು ಸಾಮಾಜಿಕ ಕಾರ್ಯಗಳು ನೀವು ಇಂದಿಗೂ ಮಾಡಲು ಅಸಾಧ್ಯ, ನೋಡಿ ಕಲಿಯಿರಿ ನೀವು ಹಾಸ್ಯಸ್ಪದವಾಗಿ ನಾನು ಶಾಸಕ ಶಾಸಕ ಎಂದು ಪದೇ ಪದೇ ಹೇಳಿಕೊಂಡು ಓಡಾಡುತ್ತಿರಾ, ನೀವು ಶಾಸಕರು ಎಂದು ಈ ಕ್ಷೇತ್ರದ ಜನತೆಗೆ ಬಹಳ ಚೆನ್ನಾಗಿ ಗೊತ್ತಿದೆ, ನೀವು ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಸಾಕು ಅದನ್ನು ಬಿಟ್ಟು ಅವರ ಮೇಲೆ ಇವರ ಮೇಲೆ ಹೌಹಾರದ ಮಾತ್ರಕ್ಕೆ ಶಾಸಕನಲ್ಲ ನಿನ್ನನ್ನು ಜನರು ಆಯ್ಕೆ ಮಾಡಿದ್ದಾರೆ, ಅವರಿಗೆ ಋಣ ತೀರಿಸುವ ಜವಾಬ್ದಾರಿ ನಿನ್ನ ಮೇಲಿದೆ, ಜನಪರ ಕೆಲಸಕ್ಕೆ ನಾನೂ ಸಹ ನಿನ್ನೊಟ್ಟಿಗೆ ಸದಾ ಇರುವೆ ಅದನ್ನು ಬಿಟ್ಟು ಬೊಗಳೆ ಹೊಡೆದುಕೊಂಡು ಓಡಾಡುವುದನ್ನು ಮೊದಲು ಬಿಡು ಎಂದರು, ಜೊತೆಗೆ ಮೊನ್ನೆ ನೀನು ಮಾಡಿರುವ ಪತ್ರಿಕಾಗೋಷ್ಠಿಯಲ್ಲಿ ನನಗೆ ಇನ್ನೊಂದು ಮಾಡುವುದು ಗೊತ್ತಿದೆ ಎಂದು ಹೇಳಿದಿಯೆಲ್ಲವಾ? ಅದಕ್ಕೆ ಸ್ಪಷ್ಠೀಕರಣ ಬೇಕಿದೆ ಏಕೆಂದರೆ ನೀವು ನನ್ನನ್ನು ಕೊಲೆ ಮಾಡಿಸುವ ಹಂತಕ್ಕೆ ತಲುಪಿದ್ದೀಯಾ ಎಂಬ ಬಾವನೆ ನನ್ನಲ್ಲಿ ಮೂಡಿದೆ, ಈ ಬಗ್ಗೆ ತನಿಖೆ ಮಾಡಬೇಕೆಂದು ದೂರನ್ನು ಗೃಹ ಸಚಿವರಿಗೆ ಸಲ್ಲಿಸಲಿದ್ದೇನೆ ಎಂದು ಎಚ್ಚರಿಕೆಯನ್ನು ಸಹ ನೀಡಿದರು.