ತುಮಕೂರು : ತುಮಕೂರು ಜಿಲ್ಲೆಯ ಆರ್ಯವೈಶ್ಯ ಜನಾಂಗದ ಹೆಮ್ಮೆಯ ಪ್ರತೀಕ ವಾಣಿಜ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ 100 ವಸಂತಗಳನ್ನು ಪೂರೈಸಿರುವ ವೈಶ್ಯ ಕೋ-ಆಪರೇಟಿವ್ ಬ್ಯಾಂಕ್ ನ ಆಡಳಿತ ಮಂಡಳಿ ಚುನಾವಣೆಯ ಘೋಷಣೆ ಆಗಿದ್ದು ಅದರ ಭಾಗವಾಗಿ ಈಶ್ವರ್ ಎಂ.ಕೆ. (ರಮೇಶ್ & ಕೋ) ಇವರು ಚುನಾವಣೆಯ ನಾಮಪತ್ರವನ್ನು ಸಲ್ಲಿಸಿರುತ್ತಾರೆ.
ನಾಮ ಪತ್ರವನ್ನು ಸಲ್ಲಿಸಿ ಮಾತನಾಡಿದ ಈಶ್ವರ್ ಎಂ.ಕೆ.ರವರು ತಮ್ಮ ತಾತ ನವರು ಇದೇ ವೈಶ್ಯ ಕೋ-ಆಪರೇಟಿವ್ ಬ್ಯಾಂಕ್ ನ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು, ಅವರ ನಂತರ ಇದೀಗ ನಾನು ನಮ್ಮ ಆರ್ಯವೈಶ್ಯ ಬಂಧುಗಳ ಸಹಕಾರ, ಸ್ನೇಹಿತರ ಮಾರ್ಗದರ್ಶನ, ಗುರು-ಹಿರಿಯರ ಆಶೀರ್ವಾದಗಳೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದು, ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ನಾನು ಸೇವೆ ಸಲ್ಲಿಸಲು ಆತ್ಮೀಯ ವೈಶ್ಯ ಕೋ ಆಪರೇಟಿವ್ ಬ್ಯಾಂಕ್ ಷೇರುದಾರರಲ್ಲಿ (ಮತದಾರರ)ಲ್ಲಿ ವಿನಮ್ರಪೂರ್ವಕವಾಗಿ ಮತ ಯಾಚನೆ ಮಾಡುತ್ತಿದ್ದೇನೆ, ದಯಮಾಡಿ ಈ ಭಾರಿ ಒಂದು ಅವಕಾಶ ಕಲ್ಪಿಸಿ ಎಂದು ಅವರಲ್ಲಿ ಪ್ರಾರ್ಥಿಸುತ್ತಿದ್ದೇನೆ ಎಂದು ತಿಳಿಸಿದರು.
ಚುನಾವಣೆಯು ಇದೇ ಜನವರಿ 19 ಭಾನುವಾರ 2025 ಟೌನ್ ಹಾಲ್ ವೃತ್ತದಲ್ಲಿರುವ ಶ್ರೀ ಸಿದ್ಧಗಂಗಾ ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ ಎಂದು ತಿಳಿಸಿದರು. ಬಂಧುಗಳು ತಪ್ಪದೇ ಮತದಾನ ಮಾಡಿ ಅದರಲ್ಲಿ ನನ್ನನ್ನು ಗೆಲ್ಲಿಸಿ ಆಶೀರ್ವದಿಸಬೇಕೆಂದು ಮತ್ತೊಮ್ಮೆ ಪ್ರಾರ್ಥಿಸುತ್ತಿದ್ದೇನೆ ಎಂದು ತಿಳಿಸಿದರು.