ಭಕ್ತರ ಮೊರೆಯನ್ನು ಆಲಿಸಿ
ರಕ್ಷಿಸಮ್ಮ ಶರಣಾಗತ ವತ್ಸಲೆ
ಪರಮ ಪವಿತ್ರೆ ಪುಣ್ಯ ಚರಿತೆ
ವಿಶ್ವ ವಂದಿತೆ ವಾಸವಿ ಮಾತೆ
ಕುಸುಮ ಶ್ರೇಷ್ಠಿ ಕುಸುಮಾಂಬೆ
ಯಾಗದ ವರದಿಂದ ಜನಿಸಿದಾತೆ
ಪಡೆದು ಸಕಲ ಕಲಾ ಪ್ರಾವಿಣ್ಯತೆ
ಎಲ್ಲರ ಮನವನ್ನು ಸೆಳೆದಾತೆ
ವಿಶ್ವಕರ್ಮನ ಕೈ ಚಳಕದಲ್ಲಿ
ಅರಳಿದ ಭೂ ಲೋಕ ಸ್ವರ್ಗ
ಪೆನುಗೊಂಡ ಪುರವಾಸಿನಿ
ಪುರಜನರ ಪಾಲಿಗೆ ಶುಭಧಾತೆ
ವಿಷ್ಣು ವರ್ಧನ ಮಹಾರಾಜನ
ಕಣ್ಣಿಗೆ ಆಕರ್ಷಕವಾಗಿ ಕಂಡು
ಮೋಹದ ಪಾಶಕ್ಕೆ ಸಿಲುಕಿದಾಗ
ವಿವೇಕದ ಕೆಚ್ಚೆದೆ ತೋರಿದಾತೆ
ರಾಜ್ಯ ಅಪತ್ತಿನಿಂದ ಪಾರಾಗಲು
ಅಗ್ನಿಗೆ ಅರ್ಪಣೆಮಾಡಿಕೊಂಡು
ಆದಿಪರಾಶಕ್ತಿ ಅವತಾರವಾಗಿ
ಧರೆಗವತರಿಸಿದ ಪಾವನ ಚರಿತೆ
ವಿಶ್ವರೂಪ ದರ್ಶನವಾಗಲು
ಸಮೂಹವೆಲ್ಲಾ ಓಂ ಕಾರ ಪಠಿಸಿ
ಒಲಿದು ಬಂದ ವೈಶ್ಯಕುಲ ಮಾತೆ
ಕನ್ಯಕಾ ಪರಮೇಶ್ವರಿ ನಮ್ಮ ದೇವತೆ. ||
ವೆನ್ನಲಕೃಷ್ಣ ತುಮಕೂರು