ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಯೋಗಾಸನ ಭಾರತ್ ಆಯೋಜಿಸಿರುವ ದಿನಾಂಕ 12 ರಿಂದ 15 ಡಿಸೆಂಬರ 5ನೇ ಹಿರಿಯರ ರಾಷ್ಟ್ರೀಯ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ 2024-25 ನ ಪೂರ್ವಭಾವಿ ಸಿದ್ಧತೆಯ ಚಟುವಟಿಕೆಗಳಲ್ಲಿ ಮಾನ್ಯ ಮುರಳೀಧರ ಹಾಲಪ್ಪನವರು ಭಾಗವಹಿಸಿ ಕಾರ್ಯಕ್ರಮದ ಪೂರ್ವ ತಯಾರಿಯ ರೂಪರೇಷೆಗಳನ್ನು ವೀಕ್ಷಿಸಿದರು.
ಪರಿವೀಕ್ಷಣೆ ಮಾಡಿ ಯೋಗಪಟುಗಳಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಕ್ರಮದಲ್ಲಿ ಪಾಲ್ಗೊಳ್ಳಲು ದೇಶದ ಸುಮಾರು 15ಕ್ಕೂ ಹೆಚ್ಚು ರಾಜ್ಯಗಳಿಂದ ಆಗಮಿಸಿದ್ದ 500ಕ್ಕೂ ಹೆಚ್ಚು ಯೋಗಾಸಕ್ತ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡುತ್ತಾ ಕಾರ್ಯಕ್ರಮದ ವ್ಯವಸ್ಥೆಯ ಬಗ್ಗೆ ವಿಚಾರಿಸಿ ಊಟ ವಸತಿ ಇನ್ನಿತರೆ ಯಾವುದೇ ಸಮಸ್ಯೆಗಳಿದ್ದರೆ ಮುಕ್ತವಾಗಿ ತಿಳಿಸಬಹುದೆಂದು ಹೇಳಿದರಲ್ಲದೆ ಆಗಮಿಸಿದ ಯೋಗ ಪಟುಗಳಿಗೆ ಶುಭಾಶಯಗಳು ಕೋರಿದರು ಹಾಗೂ ಕಾರ್ಯಕ್ರಮದ ಆಯೋಜಕರಾದ ನಿರಂಜನ್ ಮೂರ್ತಿ, ಅಂತರಾಷ್ಟ್ರೀಯ ಕ್ರೀಡಾಪಟು ಆನಂದ್, ಡೆಲ್ಟಾ ಜಿಮ್ ನ ನಿರ್ವಾಹಕರಾದ ಗಂಗಾಧರ ಗೌಡ ಯುವಜನ ಕ್ರೀಡೆ ಸಹಾಯಕ ನಿರ್ದೇಶಕರಾದ ರೋಹಿತ್ ಗಂಗಾಧರ್ ಉಪಸ್ಥಿತರಿದ್ದರು