ತುಮಕೂರು: ನಗರದ ಪ್ರತಿಷ್ಠಿತ ಹಾಗೂ ಆರ್ಯವೈಶ್ಯ ಸಮುದಾಯದ ಹೆಮ್ಮೆಯ ಪ್ರತೀಕ ವೈಶ್ಯ ಕೋ ಆಪರೇಟಿವ್ ಬ್ಯಾಂಕ್ ಶತಮಾನೋತ್ಸವ ಸಮಾರಂಭ ನ.10ರಂದು ಬೆಳಗ್ಗೆ 10:30ಕ್ಕೆ ಹೆಗ್ಗೆರೆಯ ಎಚ್.ಎಂ.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಜರುಗಲಿದೆ ಎಂದು ಬ್ಯಾಂಕ್ನ ಅಧ್ಯಕ್ಷರಾದ ಕೆ.ಎನ್.ಗೋವಿಂದರಾಜು ತಿಳಿಸಿದರು. ಬ್ಯಾಂಕ್ ಆಡಳಿತ ಕಚೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, 1925ರಲ್ಲಿ ನಗರದ ಚಿಕ್ಕಪೇಟೆಯಲ್ಲಿ 49 ಸದಸ್ಯರು 6025 ರೂಪಾಯಿ ಬಂಡವಾಳ ದೊಂದಿಗೆ ಸಮಾಜಸೇವಕ ಎ.ವಿ.ನಂಜುಂ ಡಶೆಟ್ಟರ ನೇತೃತ್ವದಲ್ಲಿ ವೈಶ್ಯ ಕೋ ಆಪರೇಟಿವ್ ಸೊಸೈಟಿ ಹೆಸರಲ್ಲಿ ಆರಂಭ ವಾದ ಹಣಕಾಸು ಸಂಸ್ಥೆ, 18-08-1978ರಲ್ಲಿ ವೈಶ್ಯ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಆಗಿ ಮೇಲ್ದರ್ಜೆಗೇರಿತು. ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷರಾದ ದಾನಿಟಿ.ಎ.ಸಂಜೀವಶೆಟ್ಟರು, ಬ್ಯಾಂಕ್ ಪ್ರಥಮ ಅಧ್ಯಕ್ಷರಾದ ಟಿ.ಎಸ್. ಶಶಿಕುಮಾರ್ ಅವರಾದಿಯಾಗಿ ಹತ್ತು ವರ್ಷಗಳಿಂದ ಅಧ್ಯಕ್ಷರಾಗಿರುವ ನನ್ನ ಅವಧಿಯವರೆಗೆ ಎಲ್ಲಾ ಉಪಾಧ್ಯಕ್ಷರು, ನಿರ್ದೇಶಕರು, ಸಿಬ್ಬಂದಿ ಶ್ರಮದಿಂದ ಪ್ರಗತಿಯ ಹಾದಿಯಲ್ಲಿ ಮುನ್ನೆಡೆಯುತ್ತಾ ತುಮ ಕೂರು ಬೆಂಗಳೂರು, ಮೈಸೂರು ಸೇರಿ ಒಟ್ಟು 8 ಶಾಖೆಯನ್ನು ಹೊಂದಿದೆ ಎಂದರು.
ನ.೧೦ರಂದು ಇಡೀ ದಿನ ಪೂರ್ತಿ ಶತಮಾನೋತ್ಸವ ಸಂಭ್ರಮದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಂದು ಬೆಳಿಗ್ಗೆ ೧೦.೩೦ಕ್ಕೆ ಸಮಾರಂಭದ ಉದ್ಘಾಟನೆಯನ್ನು ವಾಸವಿಪೀಠಂ ಪೀಠಾಧಿಪತಿ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ಹಿರೇಮಠಾಧ್ಯಕ್ಷ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ನೆರವೇರಿಸುವರು. ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ಇದೇ ವೇಳೆ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮವನ್ನು ಸಚಿವರುಗಳಾದ ಹೆಚ್.ಕೆ.ಪಾಟೀಲ್, ಕೆ.ಎನ್.ರಾಜಣ್ಣ, ಡಿ.ಸುಧಾಕರ್, ರಾಜ್ಯ ಸಭಾ ಮಾಜಿ ಸದಸ್ಯ ಟಿ.ಜಿ.ವೆಂಕಟೇಶ್, ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನಪರಿಷತ್ ಸದಸ್ಯರಾದ ಡಿ. ಎಸ್.ಅರುಣ್ ನೆರವೇರಿಸಿಕೊಡುವರು. ವಿಶೇಷ ಆಹ್ವಾನಿತರಾಗಿ ಸಹಕಾರ ಸಂಘಗಳ ನಿಬಂಧಕ ಡಾ.ಟಿ.ಎಚ್. ಎಂ.ಕುಮಾರ್, ಆರ್ಯ ವೈಶ್ಯ ಮಂಡಳಿ ವಾಸವಿ ಸಂಘದ ಅಧ್ಯಕ್ಷ ಡಾ.ಆರ್. ಎಲ್.ರಮೇಶ್ಬಾಬು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಉಪಾಧ್ಯಕ್ಷ ಕೆ.ಎಸ್.ರಾಮ ಮೂರ್ತಿ ಮಾತನಾಡಿ ಸಂಜೆ ೫ಗಂಟೆಗೆ ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಮಾಜಿ ಹಾಗೂ ಹಾಲಿ ಆಡಳಿತ ಮಂಡಳಿಯ ನಿರ್ದೇಶಕರಿಗೆ ಸನ್ಮಾನ ಸಂಗೀತ ಹಾಗೂ ಸಂಜೆ ಮನರಂಜನಾ ಕಾರ್ಯಕ್ರಮವಿದ್ದು, ಮುಖ್ಯ ಅತಿಥಿಯಾಗಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಆರ್ಯುವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್, ಆರ್ಯವೈಶ್ಯ ಮಹಿಳಾ ಮಹಾಸಭಾ ರಾಜ್ಯಾಧ್ಯಕ್ಷೆ ಉಮಾ ಸಾಯಿರಾಂ, ಚಿಕ್ಕಪೇಟೆ ಕನ್ಯಕಾ ಪರಮೇಶ್ವರಿ ದೇವಾಲಯದ ಅಧ್ಯಕ್ಷ ಟಿ.ಟಿ.ಸತ್ಯನಾರಾಯಣ ಪಾಲ್ಗೊಳ್ಳುವರು. ವಿಶೇಷ ಆಹ್ವಾನಿತರಾಗಿ ಆರ್ಯವೈಶ್ಯ ಸಮುದಾಯ ಸಂಘಟನೆಗಳ ಅಧ್ಯಕ್ಷರುಗ ಳಾದ ಸಿ.ಎ.ಸೋಮೇಶ್ವರ ಗುಪ್ತ, ಬಿ.ಆರ್.ನಟರಾಜ ಶೆಟ್ಟಿ, ಕೆ.ಎಸ್.ನಾಗೇಶ್, ಸಿ.ಕೆ.ಬ್ರಹ್ಮಾನಂದ, ಎಸ್.ಆರ್.ನಂಜುಂಡಗುಪ್ತ, ಕೆ.ಎಸ್.ನವೀನ್, ಆರ್. ಆಕರ್ಪ್, ಶೇಷು ಎನ್.ರಮೇಶ್, ಸರಸ್ವತಿ ಲಕ್ಷ್ಮೀ ನಾರಾಯಣ್, ಪಾಲ್ಗೊಳ್ಳುವರು ಎಂದರು. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಎಂ.ನಾಗಸುಂದರ್, ಎನ್.ಎ.ಅರುಣ್ ಕುಮಾರ್, ಕೆ.ವೆಂಕಟರಾಜು, ಬಿ.ಎ.ಲಕ್ಷ್ಮೀ ಕಾಂತಶೆಟ್ಟಿ, ಟಿ.ನರಸಿಂಹಮೂರ್ತಿ, ಕೆ.ಆರ್. ರಾಜಶೇಖರ್, ಸಿ.ಎಸ್. ಸಂಜಯ್, ಡಿ.ಎಲ್. ಲಕ್ಷ್ಮೀಪತಿ, ಟಿ.ಎ. ಪಾರ್ಥಸಾರಥಿ, ಎಲ್.ಎ. ರಾಘವೇಂದ್ರ, ಸಿ.ಬಿ.ಕನಕಲಕ್ಷ್ಮಿ, ಬಾಲರಾಜ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಸುಮ ಸೇರಿ ಲಕ್ಷ್ಮೀ ಕಾಂತರಾಜೇ ಅರಸು ಇತರೆ ಸಿಬ್ಬಂದಿ ವರ್ಗದವರಿದ್ದರು.