ಬ್ರಹ್ಮಾಂಡ ಭ್ರಷ್ಠಾಚಾರ ಕೂಪದಲ್ಲಿದೆಯೇ ತುಮಕೂರು ಆರ್.ಟಿ.ಓ. ಕಛೇರಿ….?

 

 

 

 

 

 

ತುಮಕೂರಿನ : ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ದುರಾಡಳಿತ ಹೆಚ್ಚುತ್ತಿದ್ದು, ಕಳೆದ ಐದು ವರ್ಷಗಳಿಂದ ಠಿಕಾಣಿ ಹೂಡಿರುವ ಸದ್ರುಲ್ಲಾ ಷರೀಫ್ ಅವರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ತುಮಕೂರು ನಗರ ಮತ್ತು ತಾಲ್ಲೂಕು ಲಾರಿ ಮಾಲೀಕರುಗಳ ಸಂಘ ಸಾರಿಗೆ ಆಯುಕ್ತರಿಗೆ ಪತ್ರ ಬರೆದು ಒತ್ತಾಯಿಸಿದೆ.

 

 

 

 

 

 

ಆರ್ .ಟಿ.ಒ ಕಚೇರಿ ಭ್ರಷ್ಟಾಚಾರ ತಾಣವನ್ನಾಗಿ ಮಾರ್ಪಡಿಸಿಕೊಂಡಿರುವ ಸದ್ರಲ್ಲಾ ಷರೀಪ್ ಅವರು ಖಾಸಗಿ ವ್ಯಕ್ತಿಗಳ ಮೂಲಕ ಡಿಎಲ್, ಎಫ್ ಸಿಗಳನ್ನು ಕಚೇರಿಯ ಹೊರಗಡೆ ಮಾಡುತ್ತಿದ್ದಾರೆ ಎಂದು ಸಂಘ ಆರೋಪಿಸಿದೆ. ಶಾಲಾ-ಕಾಲೇಜು, ವಾಣಿಜ್ಯ ವಾಹನಗಳನ್ನು ಆರ್ ಟಿಒ ಕಚೇರಿಗೆ ಕರೆಸದೇ, ಶಾಲೆಗಳ ಬಳಿ ಹಾಗೂ ವಾಣಿಜ್ಯ ವಾಹನಗಳು ಇರುವ ಸ್ಥಳಕ್ಕೆ ಹೋಗಿ ಎಫ್.ಸಿ (ಫಿಟ್ನೆಸ್ ಸರ್ಟಿಫಿಕೇಟ್) ಗಳನ್ನು ನೀಡುತ್ತಿದ್ದು ಕಾನೂನು ಮೀರಿ ವರ್ತಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

 

 

 

 

ಸರ್ಕಾರಿ ನೌಕರರಲ್ಲದ ಖಾಸಗಿ ವ್ಯಕ್ತಿಗಳನ್ನು ಇಟ್ಟುಕೊಂಡು ಡಿ.ಎಲ್, ಎಫ್.ಸಿ. ಅನುಪಯುಕ್ತ ವಾಹನಗಳ ವರದಿ ತೆಗೆಸಿ ತುಮಕೂರು, ಕುಣಿಗಲ್, ಶಿರಾ ಹಾಗೂ ಗುಬ್ಬಿ ತಾಲ್ಲೂಕುಗಳ ಕ್ರಷರ್ ಗಳಿಂದ ಅಧಿಕ ಭಾರ ಸಾಗಾಣಿಕೆಗೆ ಹಣ ಪಡೆಯುತ್ತಿದ್ದಾರೆ ಎಂದು ತುಮಕೂರು ನಗರ ಮತ್ತು ತಾಲ್ಲೂಕುಗಳ ಲಾರಿ ಮಾಲೀಕರ ಸಂಘ ಆರೋಪಿಸಿದೆ.

 

 

 

 

 

 

ಕಚೇರಿಯಲ್ಲಿರುವ ಅವರ ಕೊಠಡಿಯಲ್ಲಿ ಅನೇಕ ಖಾಸಗಿ ವ್ಯಕ್ತಿಗಳನ್ನು ಕೂರಿಸಿಕೊಂಡು ಸಾರಿಗೆ ಕಚೇರಿಗೆ ಬರುವ ವಾಣಿಜ್ಯ ವಾಹನಗಳ ಎಫ್.ಸಿಯನ್ನು ವಾಹನ ಪರಿಶೀಲಿಸದೇ ಹಣ ಪಡೆದು ನೀಡುತ್ತಿದ್ದಾರೆ, ಖಾಸಗಿ ವ್ಯಕ್ತಿಗಳಿಗೆ ತಮ್ಮ ಕೆಲಸಗಳನ್ನು ಹಂಚಿ ಮೇಲುಸ್ತುವಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸದ್ರುಲ್ಲಾ ಷರೀಫ್ ಅವರನ್ನು ಅಮಾನತುಗೊಳಿಸಿ, ವಿಚಾರಣೆ ನಡೆಸುವಂತೆ ಸಾರಿಗೆ ಆಯುಕ್ತರಿಗೆ ಕಳೆದ ಆಗಸ್ಟ್ ತಿಂಗಳಲ್ಲಿ ತುಮಕೂರು ನಗರ ಮತ್ತು ಲಾರಿ ಮಾಲೀಕರ ಸಂಘ ಬರೆದಿದ್ದರೂ ಆಯುಕ್ತರು ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಸಾಕಷ್ಟು ಅನುಮಾನಗಳೂ ವ್ಯಕ್ತವಾಗುತ್ತಿವೆ.

 

 

 

 

 

ಕಿರಿಯ ಮೋಟಾರ್ ವಾಹನ ನಿರೀಕ್ಷಕರಾಗಿ ಬಂದ ಸದ್ರುಲ್ಲಾ ಷರೀಫ್, ಹಿರಿಯ ಮೋಟಾರ್ ವಾಹನ ನಿರೀಕ್ಷಕರಾಗಿ ಮುಂಬಡ್ತಿ ಪಡೆದು ಕಳೆದ ಐದು ವರ್ಷಗಳಿಂದ ಇಲ್ಲಿಯೇ ಠಿಕಾಣಿ ಹೂಡಿದ್ದು, ಸರ್ಕಾರ ಇವರನ್ನು ವರ್ಗಾವಣೆ ಮಾಡಬೇಕು ಆಗ ಮಾತ್ರ ಆರ್ ಟಿಒ ಕಚೇರಿಯಲ್ಲಿನ ದುರಾಡಳಿತ ಕೊನೆಯಾಗಲಿದೆ ಎಂದು ಸಂಘ ಅಭಿಪ್ರಾಯ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *

error: Content is protected !!