ತುಮಕೂರು ನಗರದಲ್ಲಿ ರಾತ್ರಿ ನಡೆಯಿತು ಬೀಕರ ಕೊಲೆ ; ಬೆಚ್ಚಿಬಿದ್ದ ಜನತೆ

ತುಮಕೂರು : ಮನೆಯಲ್ಲಿ ರಾತ್ರಿ ಊಟ ಮಾಡುತ್ತಿದ್ದ ಯುವಕನನ್ನು ಮನೆಯಿಂದ ಹೊರ ಕರೆದು ಚಾಕುವಿನಿಂದ ಚುಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನೆನ್ನೆ ರಾತ್ರಿ ವರದಿಯಾಗಿದೆ. ತುಮಕೂರು ನಗರದಲ್ಲಿ ದಿನ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು ಅದಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ನಗರದ ಮರಳೂರು ದಿನ್ನೆಯ ಆರನೇ ಕ್ರಾಸ್ ನಲ್ಲಿ ವಾಸವಿರುವ ಯುವಕನ ಮನೆ ಮುಂದೆಯೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ನಗರವನ್ನ ಬೆಚ್ಚಿ ಬೆಳಿಸಿದೆ.

 

 

ಮೃತನಾದ ರಿಹಾನ್ (18) ಯುವಕ ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದ  ಎಂದು ಹೇಳಲಾಗಿದೆ. ಮರಳೂರು ದಿಣ್ಣೆಯಲ್ಲಿ ವಾಸವಿರುವ ರಿಹಾನ್ ನನ್ನು ಅದೇ ಬಡಾವಣೆಯ ನಿವಾಸಿಯಾದ ಸಾಧಿಕ್ ಅಬ್ಬಾಸ್ ಸೇರಿದಂತೆ ನಾಲ್ವರು ಯುವಕರು ಶುಕ್ರವಾರ ರಾತ್ರಿ ರಿಹಾನ್ ಮನೆ ಬಳಿ ತೆರಳಿ, ಊಟ ಮಾಡುತ್ತಿದ್ದ ರಿಹಾನ್ ನನ್ನು ಮಾತನಾಡಿಸುವ ಸಲುವಾಗಿ ಮನೆಯಿಂದ ಹೊರ ಕರೆದು ಮನೆ ಮುಂದೆಯೇ ಚಾಕುವಿನಿಂದ ಚುಚ್ಚಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮನೆ ಮುಂದೆ ಕೊಲೆಯಾದ ಸಾಧಿಕ್ ನ ಪರಿಸ್ಥಿತಿ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

 

 

 

 

ರಕ್ತದ ಮಡುವಿನಲ್ಲಿ ಬಿದ್ದಿದ್ದ ರಿಹಾನನ ಕೂಡಲೇ ಸ್ಥಳೀಯರು ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಿದರು, ಆದರೆ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದ ಕಾರಣ ಬೆಂಗಳೂರಿಗೆ ರವಾನಿಸಲಾಗುತ್ತಿತ್ತು ಆ ಸಂದರ್ಭದಲ್ಲಿ ದಾರಿ ಮಧ್ಯೆಯಲ್ಲಿಯೇ ರಿಹಾನ್ ಸಾವನ್ನಪ್ಪಿದ್ದಾನೆ.

 

 

 

 

 

ಇನ್ನು ಕೊಲೆ ಮಾಡಿರುವ ಆರೋಪಿಗಳು ಗಾಂಜಾ, ಸೊಲ್ಯೂಷನ್ ಚಟಕ್ಕೆ ಮರು ಹೋಗಿದ್ದರು ಎಂದು ಶಂಕಿಸಲಾಗಿದೆ. ಕಳೆದ ಒಂದು ವರ್ಷದ ಹಿಂದೆಯೂ ಸಹ ರಿಹಾನ್ ನ ಮೇಲೆ ಸಾಧಿಕ್ ಗಲಾಟೆ ಮಾಡಿದ್ದರು, ಆಗ ನಾವು ಅವರ ಗಲಾಟೆಯನ್ನು ಸಹ ಬಿಡಿಸಿದ್ದೆವು ಎಂದು ಪೋಷಕರು ತಿಳಿಸಿದ್ದು ಗಾಂಜಾ ಸೊಲ್ಯೂಷನ್ ಗೆ ಮಾರುಹೋಗಿರುವ ಯುವಕರು ನನ್ನ ಮಗನನ್ನು ಬೀಕರವಾಗಿ ಕೊಲೆ ಮಾಡಿದ್ದು ಕೂಡಲೇ ಕೊಲೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ರಿಹಾನ್ ತಂದೆ ಹಾಗು ಪೋಷಕರು ಒತ್ತಾಯಿಸಿದ್ದಾರೆ.

 

 

 

 

ಘಟನೆ ನಡೆದ ಕೂಡಲೇ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ಕೈಗೊಂಡಿದ್ದು ಸಾಧಿಕ್ ಹಾಗೂ ಅಬ್ಬಾಸ್ ನನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದ್ದು ಉಳಿದ ಇಬ್ಬರು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದು. ಮೃತಪಟ್ಟ ಯುವಕನ ಶವವನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

Leave a Reply

Your email address will not be published. Required fields are marked *

error: Content is protected !!