ತುಮಕೂರಿನಲ್ಲಿ ತಡವಾಗಿ ಬೆಳಕಿಗೆ ಬಂದ ದರೋಡೆ ಪ್ರಕರಣ

 

 

 

 

 

ತುಮಕೂರು ನಗರದ ಪ್ರಸಿದ್ಧ ದೇವಾಲಯ ಒಂದರಲ್ಲಿ ದರೋಡೆ  ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

 

 

ತುಮಕೂರು ನಗರದ ಸಿರಾ ಗೇಟ್ ಬಳಿ ಡಿ.ಸಿ. ಬಂಗಲೆ ಮುಂಭಾಗದಲ್ಲೇ ಇರುವ ಶ್ರೀ ಮಹಾವೀರ ಸ್ವಾಮಿ ಜೈನ ಶ್ವೇತಾಂಬರ ಆಗಮ ಮಂದಿರದಲ್ಲಿ ಗುರುವಾರ ರಾತ್ರಿ ದರೋಡೆ ನಡೆದಿದೆ.

 

 


ಗುರುವಾರ ರಾತ್ರಿ ದೇವಾಲಯಕ್ಕೆ ನುಗ್ಗಿರುವ ಮೂವರು ದರೋಡೆ ಕೋರರು ಮುಖಕ್ಕೆ ಕಪ್ಪು ಬಣ್ಣದ ಬಟ್ಟೆ ಸುತ್ತಿಕೊಂಡು ದರೋಡೆ ಮಾಡಿರುವುದು ಬೆಳಕಿಗೆ ಬಂದಿದೆ, ದೇವಾಲಯದ ಪ್ರಮುಖ ವಿಗ್ರಹದ ಮೇಲೆ ಹೊದ್ದಿಸಲಾಗಿದ್ದ ಚಿನ್ನ ಹಾಗೂ ಬೆಳ್ಳಿಯ ಕಿರೀಟ, ಹಣೆಗೆ ಕಟ್ಟಿದ್ದ ಚಿನ್ನದ ಪಟ್ಟಿ , ಆರತಿ ತಟ್ಟೆ ಸೇರಿದಂತೆ ಸಾಕಷ್ಟು ಚಿನ್ನಾಭರಣಗಳನ್ನ ದೋಚಿರುವ ಘಟನೆ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

 

 

 

 

 

ಘಟನೆ ನಡೆದಿರುವ ಸ್ಥಳ ಜನನಿಬಿಡ ಪ್ರದೇಶವಾಗಿರುವುದಲ್ಲದೇ, ಡಿ.ಸಿ. ಬಂಗಲೆ, ಜಿಲ್ಲಾ ಎಸ್.ಪಿ. ನಿವಾಸ, ಸೇರಿದಂತೆ ಅನೇಕ ಪ್ರಮುಖ ಅಧಿಕಾರಿಗಳ ವಸತಿ ಗೃಹಗಳು ಸಹ ದೇವಾಲಯದ ಸನ್ನಿಹದಲ್ಲಿದೆ,  ಜೊತೆಗೆ ಹತ್ತಿರದಲ್ಲಿಯೇ ಕೆಲವು ಶ್ರೀಮಂತರ ಭವ್ಯ ಬಂಗಲೆ, ಆಸ್ಪತ್ರೆ, ಸರ್ಕಾರಿ ಆಹಾರ ದಾಸ್ತಾನು ಮಳಿಗೆ ಸಹ ಈ ಭಾಗದಲ್ಲಿಯೇ ಇದೆ, ಆದರೂ ಸಹ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ.

 

 

 

 


ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಬಲೆಯನ್ನು ಎಳೆದಿದ್ದು ಶೀಘ್ರದಲ್ಲಿಯೇ ಬಂಧಿಸುವ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಯಾವುದೇ ಏನೇ ಆಗಲೀ ಜನನೀಬಿಡ ಹಾಗೂ ಪ್ರಮುಖ ವ್ಯಕ್ತಿಗಳು ವಾಸ ಮಾಡುವ ಸ್ಥಳಗಳಲ್ಲಿಯೇ ಈ ರೀತಿಯ ಕಳ್ಳರು ಕೈಚಳಕ ತೋರಿಸಿದ್ದಾರೆ ಎಂದರೇ ಜನ ಸಮಾನ್ಯರು ವಾಸಿಸುವ ಸ್ಥಳಗಳ ಪರಿಸ್ಥಿತಿ?????????????????

Leave a Reply

Your email address will not be published. Required fields are marked *

error: Content is protected !!