ತುಮಕೂರು : ತುಮಕೂರಿನ ಬಿ.ಹೆಚ್.ರಸ್ತೆ ಶ್ರೀರಂಗ ಟಾಕೀಸ್ ಹತ್ತಿರವಿರುವ ಕಲ್ಯಾಣ ಮಂಟಪದಲ್ಲಿ ಕ್ಲೀನಿಂಗ್ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಕಳೆದ ಐದು ದಿನಗಳಿಂದ ನಾಪತ್ತೆ ಆಗಿದ್ದು ಭಾನುವಾರ ಮಧ್ಯಾಹ್ನ ಆತನ ಮೃತ ದೇಹ ಪತ್ತೆಯಾಗಿದೆ, ಇದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ವ್ಯಕ್ತಿಯ ಸಾವು ಕೊಲೆ ಅಥವಾ ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ.
ತುಮಕೂರಿನ ಕ್ಯಾತ್ಸಂದ್ರ ಬಳಿಯ ಡಿ.ಎನ್.ಡಿ.ಎಸ್ ಕಲ್ಯಾಣ ಮಂಟಪದಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಆಂಧ್ರದ ರತ್ನಗಿರಿ ಮೂಲದ ಹೇಮಾಚಾರಿ ಎಂಬ ವ್ಯಕ್ತಿಯ ಮೃತದೇಹ ಸಿಕ್ಕಿದ್ದು ಈತ ಕಳೆದ ನಾಲ್ಕು ವರ್ಷಗಳಿಂದ ಇದೇ ಕಲ್ಯಾಣ ಮಂಟಪದಲ್ಲಿ ಕ್ಲೀನಿಂಗ್ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಈತ ಕಳೆದ ನಾಲ್ಕು ದಿನದ ಹಿಂದೆ ಕಲ್ಯಾಣ ಮಂಟಪಕ್ಕೆ ಕೆಲಸಕ್ಕಾಗಿ ಹೋಗಿದ್ದು ಆ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಎನ್ನಲಾಗಿದ್ದು ಕುಡಿತದ ಚಟಕ್ಕೆ ಬಿದ್ದಿದ್ದ ಎಂದೂ ಸಹ ಹೇಳಲಾಗಿರುವ ಈ ವ್ಯಕ್ತಿ ಮತ್ತೆ ಮನೆಗೆ ಬರುತ್ತಾನೆ ಎಂದು ಕುಟುಂಬದವರು ಸುಮ್ಮನಾಗಿದ್ದರು ಎಂದು ಹೇಳಲಾಗಿದೆ.
ಆದರೆ ದುರದೃಷ್ಟವಷಾತ್ ಹೇಮಾಚಾರಿ ಕೆಲಸ ನಿರ್ವಹಿಸುತ್ತಿದ್ದ ಕಲ್ಯಾಣ ಮಂಟಪದ ಹಿಂಬದಿಯ ಇರುವ ಕಸದ ರಾಶಿಯಲ್ಲಿ ಆತನ ಮೃತ ದೇಹ ತುಂಡುಗಳಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಇನ್ನು ಈತನ ಮೃತದೇಹವನ್ನು ನಾಯಿಗಳು ಕಿತ್ತು ತಿನ್ನುತ್ತಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ
ಮೃತಪಟ್ಟ ಹೇಮಾಚಾರಿ ಮೃತದೇಹವು ತುಂಡು ತುಂಡಾಗಿ ಸಿಕ್ಕಿದ್ದು ದೇಹದ ಸಂಪೂರ್ಣ ಭಾಗಗಳು ಇದುವರೆಗೂ ಪತ್ತೆಯಾಗಿಲ್ಲ ಮೃತಪಟ್ಟ ಹೇಮಾಚಾರ್ಯ ಕೈ ಬೆರಳುಗಳು ಹಾಗೂ ಅಂಗಾಲಿನ ಭಾಗ ನಾಪತ್ತೆ ಯಾಗಿದೆ ಎನ್ನಲಾಗಿದೆ.
ಕಲ್ಯಾಣ ಮಂಟಪದ ತ್ಯಾಜ್ಯ ಸಂಸ್ಕರಣ ಘಟಕದ ಯಂತ್ರಕ್ಕೆ ಸಿಲುಕಿ ಮೃತಪಟ್ಟಿರುವ ಶಂಕೆ…??
ಕಲ್ಯಾಣ ಮಂಟಪದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಸ್ಕರಣ ಮಾಡುವ ನಿಟ್ಟಿನಲ್ಲಿ ಕಲ್ಯಾಣ ಮಂಟಪದಲ್ಲಿ ತ್ಯಾಜ್ಯ ಸಂಸ್ಕರಣ ಯಂತ್ರವನ್ನು ಇಡಲಾಗಿದ್ದು ಈ ಯಂತ್ರಕ್ಕೆ ಹೇಮಚಾರಿ ಸಿಕ್ಕಿ ಮೃತ ಪಟ್ಟ ಅನುಮಾನ ಕುಟುಂಬಸ್ಥರಿಂದ ವ್ಯಕ್ತ.ಮೃತನ ಕುಟುಂಬಸ್ಥರು ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು ಕಳೆದ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ ಹೇಮಾಚಾರಿ ಕುಟುಂಬದೊಂದಿಗೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದ ಆದರೆ ಇಂದು ಆತ ಕೆಲಸ ನಿರ್ವಹಿಸುತ್ತಿದ್ದ ಜಾಗದಲ್ಲೇ ಮೃತ ದೇಹದವಾಗಿ ಪತ್ತೆಯಾಗಿದ್ದು ಸಾಕಷ್ಟು ಅನುಮಾನ ಮೂಡಿಸಿದ್ದು ಆತನನ್ನು ಕೊಲೆ ಮಾಡಲಾಗಿದೆ ಎನ್ನುವ ಶಂಕೆಯನ್ನ ವ್ಯಕ್ತಪಡಿಸಿದ್ದು ಕೂಡಲೇ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ, ಸರ್ಕಲ್ ಇನ್ಸ್ಪೆಕ್ಟರ್ ರಾಮ್ ಪ್ರಸಾದ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಚೇತನ್ ಕುಮಾರ್ ಸೇರಿದಂತೆ ಹಿರಿಯ ಪೊಲೀಸ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡು ಎಫ್.ಐ.ಆರ್ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಕಲ್ಯಾಣ ಮಂಟಪದ ಮಾಲೀಕರಾದ ಸುನಿತ, ಹಾಗೂ ಕಲ್ಯಾಣ ಮಂಟಪದ ಉಸ್ತುವಾರಿ ಜಗದೀಶ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.