ತುಮಕೂರು : ತುಮಕೂರಿನ ಉತ್ತಮ ಕಾನೂನು ಕಾಲೇಜು ಎಂದು ಹೆಸರು ಪಡೆದಿದ್ದ ವಿದ್ಯೋದಯ ಕಾನೂನು ಕಾಲೇಜು ಇಂದು ವಿವಾದಗಳ ಕೇಂದ್ರಬಿಂದುವಾಗಿದೆ.
ಒಂದಿಲ್ಲೊಂದು ವಿವಾದಗಳು ವಿದ್ಯೋದಯ ಕಾನೂನು ಕಾಲೇಜಿನ ಸುತ್ತ ಗಿರಕಿ ಹೊಡೆಯುತ್ತಿದ್ದು ವಿದ್ಯೋದಯ ಕಾನೂನು ಕಾಲೇಜಿನ ಸ್ತಿತಿ ಹೀಗಾಗಬಾರದಿತ್ತು ಎಂದು ಪ್ರಜ್ಙಾವಂತ ವರ್ಗ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ವಿದ್ಯೋದಯ ಕಾನೂನು ಕಾಲೇಜು ರಾಜ್ಯ ಕಾನೂನು ವಿಶ್ವ ವಿದ್ಯಾಲಯ ಹಾಗೂ ಬಾರತೀಯ ವಕೀಲ ಮಂಡಳಿಯ ನಿಯಮಾವಳಿ ಪಾಲನೆ ಮಾಡುತ್ತಿಲ್ಲ ಎಂದು ಕೆ.ವೆಂಕಟೇಶ್ ನೀಡಿದ ದೂರನ್ನು ಪರಾಮರ್ಶಿಸಿದ ರಾಜ್ಯ ಕಾನೂನು ಮಹಾವಿದ್ಯಾಲಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ಭಾರತಿಯ ವಕೀಲ ಮಂಡಳಿಯ ನಿಯಮಾವಳಿಗಳ ಪ್ರಕಾರಸದರಿ ಕಾನೂನು ಮಹಾವಿದ್ಯಾಲಯವು 3 ವರ್ಷದ ಎಲ್.ಎಲ್.ಬಿ., ಮೂರು ವಿಭಾಗಕ್ಕೆ ಒಟ್ಟು 9 ಬೋದನಾ ಕೊಠಡಿಗಳು ಹಾಗೂ 5 ವರ್ಷದ ಬಿ.ಎ..ಎಲ್.ಎಲ್.ಬಿ., ಎರಡು ವಿಭಾಗಕ್ಕೆ ಒಟ್ಟು 10 ಬೋದನಾ ಕೊಠಡಿಗಳು ಇರಬೇಕು ಆದರೆ ನಿಮ್ಮ ಕಾನೂನು ಮಹಾವಿದ್ಯಾಲಯವು ನಿಯಮಗಳನ್ನು ಪಾಲಿಸದ ಕಾರಣ ಒಂದು ಲಕ್ಷ ರೂ ದಂಡವನ್ನು ಬರಿಸಲು ಕಾನೂನು ವಿ ವಿ ಕುಲಸಚಿವರು ಆದೇಶಿಸಿದ್ದಾರೆ.
2024 ರ ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ನಡೆದ ಸೆಮಿಸ್ಟರ್ ಪ್ರಶ್ನೆ ಪತ್ರಿಕೆಗಳನ್ನು ವಿದ್ಯೋದಯ ಕಾನೂನು ಕಾಲೇಜಿನ ಕೆಲ ವಿದ್ಯಾರ್ಥಿಗಳು ಸೋರಿಕೆ ಮಾಡಿರುವ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ ದೂರು ದಾಖಲಾಗಿದೆ.
2024-2025 ನೇ ಸಾಲಿನ ವಿದ್ಯೋದಯ ಕಾನೂನು ಕಾಲೇಜಿನ ಮಾನ್ಯತೆ ನವೀಕರಣವಾಗುವ ಮೊದಲೇ ಕಾಲೇಜು ಆಡಳಿತ ಮಂಡಳಿ ಪ್ರವೇಶಾತಿ ಪ್ರಕ್ರಿಯೆ ಆರಂಭಿಸಿ ಮುಕ್ತಾಯಗೊಳಿಸಿದ್ದು ಈ ಬಗ್ಗೆ ಕೆಪಿಸಿಸಿ ಕಾನೂನು ಮಾನವ ಹಾಗೂ ಮಾಹಿತಿ ಹಕ್ಕು ವಿಭಾಗದ ಜಿಲ್ಲಾಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.