ಮಧುಗಿರಿ : ಪಟ್ಟಣದ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಯುವಜನ ಸಂಘ ವತಿಯಿಂದ ಸ್ವಸ್ತಿಶ್ರೀ ಕ್ರೋಧಿನಾಮ ಸಂವತ್ಸರದ ಭಾದ್ರಪದ ಶುದ್ಧ ಚೌತಿ ಶನಿವಾರ ಬೆಳಿಗ್ಗೆ ಶ್ರೀ ಪ್ರಸನ್ನ ಗಣಪತಿಯ ವಾರ್ಷಿಕೋತ್ಸವ ಪ್ರಯುಕ್ತ ಮೂಲ ಗಣೇಶನ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಅಲಂಕಾರ ಹಾಗೂ 11-00 ರಿಂದ 11.45 ಗಂಟೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ವೈಭವ ಮಂಟಪದಲ್ಲಿ ಅಲಂಕೃತವಾದ ಶ್ರೀ ಪ್ರಸನ್ನ ಗಣಪತಿಯನ್ನು ಪ್ರತಿಷ್ಠಾಪನೆ ನಂತರ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಿದ್ದರು.
ವಾಯು ಯುವ ಪಡೆಯ ವತಿಯಿಂದ 6 ದಿನಗಳ ಶ್ರೀ ಪ್ರಸನ್ನ ಗಣಪತಿ ವಾರ್ಷಿಕೋತ್ಸವವನ್ನು ಹಮ್ಮಿಕೊಂಡಿದ್ದು, ಇದು ನಮ್ಮ ತಂಡದ 12 ನೇ ವರ್ಷದ ಕಾಣಿಕೆಯಾಗಿದೆ. ದಿನಾಂಕ 7 ನೇ ತಾರೀಕಿನಿಂದ ಶನಿವಾರ ಪ್ರಾರಂಭಗೊಂಡು ಪ್ರತಿದಿನ ಬೆಳಿಗ್ಗೆ 10.30ಕ್ಕೆ ಪ್ರಸನ್ನ ಗಣಪತಿಗೆ ಪಂಚಾಮೃತ ಅಭಿಷೇಕ ಮತ್ತು 12.00 ಗಂಟೆಗೆ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಹಾಗೂ ಪ್ರತಿದಿನ ಸಂಜೆ 6-30ಕ್ಕೆ
ಸಾಂಸ್ಕೃತಿಕ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
8ನೇ ತಾರೀಕು ಭಾನುವಾರ ಸಂಜೆ ಕ್ರೀಡಾ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ಮತ್ತು ರಸಪ್ರಶ್ನೆ . ಹಾಗೂ ದಿನಾಂಕ 9ನೇ ತಾರೀಕು ಸೋಮವಾರ ಸಂಜೆ 5:30ಕ್ಕೆ ಕರ್ನಾಟಕ ಆರ್ಯವೈಶ್ಯ ಯುವಜನ ಮಹಸಭಾ ಅಧ್ಯಕ್ಷರಾದ ಸುನೀಲ್ ರವರಿಂದ ವಾಸವಿ ಯುವಜನ ಸಂಘದ ನೂತನ ಕಾರ್ಯಾಲಯ ಉದ್ಘಾಟನೆ,ಮತ್ತು ಶಿವೋಹಂ ಹರಹರ ಮಹಾದೇವ
ನೃತ್ಯ ಸಂಯೋಜನೆ : ಕೃಪಾ ರವಿ ರವರಿಂದ ನಾಟ್ಯ ವೇದ ಕಲಾ ಶಾಲೆ, ವತಿಯಿಂದ ಕಾರ್ಯಕ್ರಮ.
10ನೇ ತಾರೀಕು ಮಂಗಳವಾರ ಸಂಜೆ ಸೂಪರ್ ವುಮನ್ ಕಾರ್ಯಕ್ರಮ 11ನೇ ತಾರೀಕು ಬುಧವಾರ ಸಂಜೆ
ಅದ್ಭುತ 2 ಕೆಲವು ಕಾರ್ಯಕ್ರಮ 12 ನೇ ತಾರೀಕು ಗುರುವಾರ ನಮ್ಮ ಆರ್ಯವೈಶ್ಯ ಬಂಧುಗಳು ತಮ್ಮ ಅಂಗಡಿಗಳಿಗೆ ರಾಜಾ ಘೋಷಿಸಿ. ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು
ಬೆಳಗ್ಗೆ 10:30 ರಿಂದ ಶ್ರೀ ಪ್ರಸನ್ನ ಗಣಪತಿಗೆ ಮೂರ್ತಿಗೆ ಮಹಾಮಂಗಳಾರತಿ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ವಿಸರ್ಜನೆ.
ಸಹೃದಯಿಗಳಾದ ತಾವುಗಳು ತಪ್ಪದೇ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಅಧ್ಯಕ್ಷರಾದ ಎಂ ಎ ರವಿ ತಿಳಿಸಿದರು.
ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷರು ಕೆಎಂ ಶ್ರೀನಿವಾಸ್ ಮೂರ್ತಿ, ಬದ್ರಿ ನಾರಾಯಣ, ತಾತ ಬದ್ರಿ, ಮೋಹನ್, ಸುರೇಂದ್ರನಾಥ್, ಎಸ್ಎಂ ಕೃಷ್ಣ, ಎಂ.ಕೆ. ಮಂಜುನಾಥ್,ಅಶ್ವಿನ್ ಬಾಲಾಜಿ, ಮಧು, ವಿಕ್ರಂ, ಫಣೇಶ್, ರಾಕೇಶ್, ಅಮಿತ್, ಹನುಮಂತರಾಜು, ಅಮಿತ್ ಬಾಬು, ಅಕ್ಷಯ್, ಸ್ವರೂಪ್, ಅರ್ಚನ್, ಬಾಲಾಜಿ, ಕಾರ್ತಿಕ್, ಸುಕೇಶ್, ಆದರ್ಶ, ಭುವನ್, ಇನ್ನು ಮುಂತಾದವರು ಇದ್ದರು