ಕರಾಳ ದಿನಾಚರಣೆಗೆ ಬೆಂಬಲವಿಲ್ಲ: ರೂಪ್ಸ ಅಧ್ಯಕ್ಷ ಡಾ.ಹಾಲನೂರು ಲೇಪಾಕ್ಷ

 

 

 

 

 

ತುಮಕೂರು: ಸ್ವಾತಂತ್ರ್ಯ ದಿನಾಚರಣೆಯಂದು ಖಾಸಗೀ ಶಿಕ್ಷಣ ಸಂಸ್ಥೆಗಳ ಕೆಲವು ಸಂಘಟನೆಗಳು ಕರೆ ನೀಡಿರುವ ಕರಾಳ ದಿನಾಚರಣೆಗೆ ತಮ್ಮ ಬೆಂಬಲವಿಲ್ಲ ಎಂದು ರೂಪ್ಸ ಕರ್ನಾಟಕ ರಾಜ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾ ಖಾಸಗೀ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಡಾ. ಹಾಲನೂರು ಲೇಪಾಕ್ಷ ತಿಳಿಸಿದರು.

 

 

 

 

 

 

 

ಅವರು ನಗರದಲ್ಲಿ ಈ ಬಗ್ಗೆ ಪ್ರಣತಿ ನ್ಯೂಸ್’ನ ಪ್ರತಿನಿಧಿಯೊಂದಿಗೆ ಮಾತನಾಡಿ ಖಾಸಗೀ ಶಿಕ್ಷಣ ಸಂಸ್ಥೆಗಳ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ನೀಡುತ್ತಿರುವ ನಿರಂತರ ಕಿರುಕುಳವನ್ನು ಖಂಡಿಸಿ ಕಾಮ್ಸ್ ಸೇರಿದಂತೆ ಕಲವು ಸಂಘಟನೆಗಳು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಕಪ್ಪುಪಟ್ಟಿ ಧರಿಸಿ ಕರಾಳ ದಿನವನ್ನಾಗಿ ಆಚರಿಸಲು ಕರೆ ನೀಡಿದ್ದು, ಇದಕ್ಕೆ ರೂಪ್ಸ ಕರ್ನಾಟಕ ರಾಜ್ಯ ಘಟಕ ಹಾಗೂ ತುಮಕೂರು ಜಿಲ್ಲಾ ಘಟಕ ವಿರೋಧವನ್ನು ವ್ಯಕ್ತಪಡಿಸಿದ್ದು, ತಮ್ಮ ಬೆಂಬಲವಿಲ್ಲವೆಂದು ತಿಳಿಸಿದರು.

 

 

 

 

 

 

ಸ್ವಾತಂತ್ರ್ಯ ದಿನಾಚರಣೆ ದೇಶದ ಬಹು ದೊಡ್ಡ ಹಬ್ಬವಾಗಿದ್ದು, ಇಡೀ ದೇಶ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಈ ರಾಷ್ಟ್ರೀಯ ಹಬ್ಬವನ್ನು ಆಚರಿಸುತ್ತದೆ. ಹಲವು ಮಹನೀಯರ ತ್ಯಾಗ ಬಲಿದಾನದಿಂದಾಗಿ ನಾವುಗಳು ಸ್ವಾತಂತ್ರ್ಯವನ್ನು ಗಳಿಸಿದ್ದು, ಅಂತಹ ಮಹನೀಯರನ್ನು ನೆನೆದು ಅವರಿಗೆ ನಮನ ಸಲ್ಲಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ವಿದ್ಯಾರ್ಥಿಗಳಿಗೆ ಸ್ವಾತಂತ್ಯ ಸಂಗ್ರಾಮದ ಬಗ್ಗೆ ತಿಳಿಸಿ, ನಮ್ಮ ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸುವಲ್ಲಿ ನಮ್ಮ ನಾಯಕರ ಪಾತ್ರವನ್ಬು ವಿವರಿಸಬೇಕಿದೆ. ಅಂಥಹ ಪವಿತ್ರ ದಿನದಂದು ಕಪ್ಪು ಪಟ್ಟಿ ಧರಿಸುವುದು ಅನರ್ಥವಾದುದ್ದಾಗಿದ್ದು, ಯಾವುದೇ ಕಾರಣಕ್ಕೂ ಈ ನಿರ್ಧಾರಕ್ಕೆ ನಮ್ಮ ಬೆಂಬಲವಿಲ್ಲ ಹಾಗೂ ನಮ್ಮ ಶಾಲೆಗಳಲ್ಲಿ ಎಂದಿನಂತೆ ಸಂಭ್ರಮ ಹಾಗೂ ಸಡಗರದಿಂದ ಅರ್ಥಪೂರ್ಣವಾಗಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತದೆ ಎಂದರು.

 

 

 

 

 

 

ಪ್ರತೀ ದಿನ ಶಾಲೆಗಳಲ್ಲಿ
ದೇಶದ ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ದೇಶಭಕ್ತಿ ಮೂಡಿಸುವ ಹಾಗೂ ಸಂವಿಧಾನದ ಬಗ್ಗೆ ಅರಿವು‌ ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು, ಈ ಕಾರ್ಯವನ್ನು ನಡೆಸುವ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಶಿಕ್ಷಕರೇ ಕಪ್ಪು ಪಟ್ಟಿ ಧರಿಸಿದರೆ ಮಕ್ಕಳಿಗೆ ಯಾವ ಸಂದೇಶವನ್ನು ರವಾನಿಸಿದಂತಾಗುತ್ತದೆ ಎಂದು ಪ್ರಶ್ನಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂವಿಧಾನಾತ್ಮಕವಾಗಿ ಹಲವಾರು ಮಾರ್ಗಗಳಿದ್ದು ಅದನ್ನು ಅನುಸರಿಸಬೇಕು ಅದನ್ನು ಬಿಟ್ಟು ಈ ರೀತಿಯ ಅನ್ಯಮಾರ್ಗಗಳನ್ನು ಅನುಸರಿಸುವುದು ಮೂರ್ಖತನದ ಪರಮಾವಧಿಯಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಖಾಸಗೀ ಶಿಕ್ಷಣ ಸಂಸ್ಥೆಗಳು ಈ ರೀತಿಯ ಯಾವುದೇ ಕರೆಗೆ ಓಗೊಡದೆ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಬೇಕೆಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!