ನಾಗರಪಂಚಮಿ – ಪ್ರಾಣಿಮಾತ್ರರಲ್ಲಿ ಈಶ್ವರನನ್ನು ನೋಡಲು ಕಲಿಸುವ ಹಬ್ಬ

 

 

 

 

 

 

 

 

ನಾಗರಪಂಚಮಿ ಹಬ್ಬಗಳ ತಿಂಗಳಾಗಿರುವ ಶ್ರಾವಣಮಾಸದಲ್ಲಿ ಬರುವ ಮೊದಲನೇ ಹಬ್ಬ. ನಾಗರಪಂಚಮಿಯನ್ನು ಶ್ರಾವಣ ಶುಕ್ಲ ಪಂಚಮಿಯಂದು (2024 ರಲ್ಲಿ ಆಗಸ್ಟ್ 9, ಶುಕ್ರವಾರ) ಆಚರಿಸಲಾಗುತ್ತದೆ. ಈ ದಿನದಂದು ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ, ಹೊಸ ಬಟ್ಟೆ-ಅಲಂಕಾರವನ್ನು ಧರಿಸಿ, ನಾಗ ದೇವರನ್ನು ಪೂಜಿಸಿ, ನಾಗ ದೇವರಿಗೆ ಹಾಲಿನ ನೈವೇದ್ಯವನ್ನು ಅರ್ಪಿಸುತ್ತಾರೆ. ನಾಗಗಳ ಪೂಜೆಯನ್ನು ಮಾಡುವುದರಿಂದ ಸರ್ಪಭಯ ಉಳಿಯುವುದಿಲ್ಲ ಮತ್ತು ವಿಷಬಾಧೆಯಾಗುವ ಸಂಕಟ ತಪ್ಪುತ್ತದೆ ಎಂದು ಭಕ್ತರ ಬಲವಾದ ನಂಬಿಕೆಯಿದೆ. ನಾಗರಪಂಚಮಿಯ ಇತಿಹಾಸ, ಅಂದು ಏನು ಮಾಡಬೇಕು, ಏನು ಮಾಡಬಾರದು, ಇವೆಲ್ಲವುಗಳ ಹಿಂದಿರುವ ಶಾಸ್ತ್ರ ಇಲ್ಲಿ ನೀಡುತ್ತಿದ್ದೇವೆ.

 

 

ನಾಗರಪಂಚಮಿ – ಇವನ್ನು ಮಾಡಿ

  • ಉಪವಾಸ ಮಾಡಿ
    ಉಪವಾಸದಿಂದ ಶಕ್ತಿ ಹೆಚ್ಚಾಗಿ ಅದರ ಫಲವೂ ಲಭಿಸುತ್ತದೆ.
  • ನಾಗ ದೇವರಿಗೆ ಪೂಜೆ ಸಲ್ಲಿಸಿ
    ನಾಗರಪಂಚಮಿಯಂದು ನಾಗಗಳಿಗೆ ಪೂಜೆ ಸಲ್ಲಿಸುವುದು ಎಂದರೆ ನಾಗದೇವತೆಯನ್ನು ಪ್ರಸನ್ನಗೊಳಿಸುವುದು. ನಾಗಗಳ ಪೂಜೆ ಅಂದರೆ ಸಗುಣ ರೂಪದಲ್ಲಿರುವ ಶಿವನ ಪೂಜೆಯೇ. ಆದುದರಿಂದ ಆ ದಿನ ವಾತಾವರಣದಲ್ಲಿರುವ ಶಿವ-ಲಹರಿಗಳು ಆಕರ್ಶಿತಗೊಂಡು ಆ ಜೀವಕ್ಕೆ ಇತರ 364 ದಿನಗಳ ಕಾಲ ಉಪಯುಕ್ತವಾಗುತ್ತವೆ.
    ಸ್ತ್ರೀಯರು ನಾಗ ದೇವರಿಗೆ ಪೂಜೆ ಸಲ್ಲಿಸುವುದರಿಂದ ಅವರಿಗೆ ಶಕ್ತಿ ತತ್ತ್ವ ಪ್ರಾಪ್ತವಾಗುತ್ತದೆ.
  • ಸ್ತ್ರೀಯರು ನಾಗ ಪ್ರತಿಮೆಯನ್ನು ಸಹೋದರನೆಂದು ಪೂಜಿಸಿ
    ಸ್ತ್ರೀಯರು ನಾಗ ದೇವರಿಗೆ ಪೂಜೆ ಸಲ್ಲಿಸುವುದರಿಂದ ಅವರ ಸಹೋದರನ ಆಯುಷ್ಯ ವೃದ್ಧಿಯಾಗುತ್ತದೆ.
  • ಹೊಸ ಬಟ್ಟೆ ಮತ್ತು ಅಲಂಕಾರ ಧರಿಸಿ
    ಇದರಿಂದ ಆನಂದ ಮತ್ತು ಚೈತನ್ಯದ ಲಹರಿಗಳು ಆಕರ್ಷಿಸಲ್ಪಡುತ್ತವೆ.
  • ಸ್ತ್ರೀಯರು ಉಯ್ಯಾಲೆಯಲ್ಲಿ ಆಡಬೇಕು
    ಇದರಿಂದ ಕ್ಷಾತ್ರಭಾವ ಮತ್ತು ಭಕ್ತಿಭಾವ ಹೆಚ್ಚಾಗಿ ಅದರಿಂದ ಸಾತ್ತ್ವಿಕತೆಯ ಲಹರಿಗಳು ಲಭಿಸುತ್ತವೆ.
  • ಪ್ರಾರ್ಥನೆ ಮಾಡಿ
    ಈ ದಿನದಂದು ಶೇಷನಾಗ ಮತ್ತು ಶ್ರೀವಿಷ್ಣುವಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು – ‘ತಮ್ಮ ಕೃಪೆಯಿಂದ ಈ ದಿನದಂದು ಶಿವ ಲೋಕದಿಂದ ಪ್ರಕ್ಷೇಪಿತವಾಗುವ ಲಹರಿಗಳು ನನ್ನಿಂದ ಹೆಚ್ಚೆಚ್ಚು ಗ್ರಹಿಸುವಂತಾಗಲಿ. ನನ್ನ ಆಧ್ಯಾತ್ಮಿಕ ಪ್ರಗತಿಗೆ ಎದುರಾಗುವ ಎಲ್ಲ ಅಡಚಣೆಗಳೂ ನಾಶವಾಗಲಿ. ದೇವತೆಗಳ ಶಕ್ತಿಯು ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರ ಪ್ರಾಪ್ತಿಗಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಉಪಯೋಗವಾಗಲಿ. ನನ್ನ ಪಂಚಪ್ರಾಣಗಳ ಶುದ್ಧಿಯಾಗಲಿ.’
    ನಾಗರ ಪಂಚಮಿಯಂದು ಸಹೋದರಿಯ ಮೊರೆಯು ಈಶ್ವರನು ಆಲಿಸುತ್ತಾನೆ. ಆದುದರಿಂದ ಸಹೋದರಿಯು ತನ್ನ ಸಹೋದರನ ಉನ್ನತಿಗಾಗಿ ದೇವರಲ್ಲಿ ಕಳಕಳಿಯಿಂದ ಮುಂದಿನಂತೆ ಪ್ರಾರ್ಥಿಸಬೇಕು – ‘ದೇವರೇ, ನನ್ನ ಸಹೋದರನಿಗೆ ಸದ್ಬುದ್ಧಿ, ಶಕ್ತಿ ಮತ್ತು ಸಾಮರ್ಥ್ಯವನ್ನು ದಯಪಾಲಿಸಿ’.
  1. ಸರ್ಪಯಜ್ಞದ ಸಮಾಪ್ತಿಯ ದಿನ :ಸರ್ಪಯಜ್ಞ ಮಾಡುತ್ತಿದ್ದ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿದ ಆಸ್ತಿಕ ಋಷಿಗಳು ಬೇಡಿದ ವರಕ್ಕನುಸಾರ ಜನಮೇಜಯ ರಾಜನು ಯಜ್ಞ ನಿಲ್ಲಿಸಿದನು, ಮತ್ತು ಆಸ್ತಿಕ ಋಷಿಗಳು ವಿಶ್ವದಲ್ಲಿನ ಎಲ್ಲ ನಾಗಗಳಿಗೆ ಅಭಯವನ್ನು ನೀಡಿದರು
  2. ಕಾಲಿಯಾಮರ್ದನದ ತಿಥಿ :ಭಗವಾನ ಶ್ರೀಕೃಷ್ಣನು ಗೋಕುಲದಲ್ಲಿರುವಾಗ ಶ್ರಾವಣ ಶುಕ್ಲ ಪಕ್ಷ ಪಂಚಮಿಯ ದಿನದಂದು ಯಮುನಾ ನದಿಯಲ್ಲಿದ್ದ ಕಾಲಿಯಾ ಎಂಬ ನಾಗನ ಮರ್ದನವನ್ನು ಮಾಡಿದನು.
  3.  5 ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ಕ್ಷುದ್ರ ದೇವಿಯಿದ್ದಳು. ಅವಳಿಗೆ ಸತ್ಯೇಶ್ವರ ಎಂಬ ಸಹೋದರನಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತನಾದ. ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುವೆನು ಎಂದು ಅವಳಿಗೆ ಮಾತು ನೀಡಿದನು. ಆದುದರಿಂದಲೇ ಆ ದಿನ ಪ್ರತಿಯೊಬ್ಬ ಸ್ತ್ರೀಯು ನಾಗನ ಪೂಜೆ ಮಾಡಿ ನಾಗರಪಂಚಮಿಯನ್ನು ಆಚರಿಸುತ್ತಾಳೆ.
  4. ನಾಗಗಳು ಪರಮೇಶ್ವರನ ಅವತಾರಗಳೊಂದಿಗೆ, ಅಂದರೆ ಸಗುಣ ರೂಪದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಸಮುದ್ರ ಮಂಥನದ ಸಮಯದಲ್ಲಿ ಕೂರ್ಮಾವತಾರಕ್ಕೆ ವಾಸುಕೀ ಎಂಬ ನಾಗವು ಸಹಾಯವನ್ನು ಮಾಡಿತ್ತು. ಶ್ರೀವಿಷ್ಣು ಶೇಷನಾಗನ ಶಯ್ಯೆಯ ಮೇಲೆ ಮಲಗಿರುತ್ತಾನೆ. ಶ್ರೀವಿಷ್ಣು ರಾಮನಾಗಿ ಅವತರಿಸಿದಾಗ ಅದೇ ಶೇಷನಾಗನು ಲಕ್ಷ್ಮಣನ ಅವತಾರವನ್ನು ತಾಳಿದ್ದನು. ಭಗವಾನ ಶಿವನು ಮೈಮೇಲೆ ಒಂಬತ್ತು ನಾಗಗಳನ್ನು ಧರಿಸಿದ್ದಾನೆ.
  5. ಶಿವನು ಹಾಲಾಹಲ ವಿಷ ಸೇವಿಸಿದಾಗ ಅವನಿಗೆ ಸಹಾಯ ಮಾಡಲು ಒಂಬತ್ತು ನಾಗಗಳು ಬಂದವು ಮತ್ತು ಅವುಗಳು ಸಹ ಹಾಲಾಹಲದ ಅಂಶವನ್ನು ಸೇವಿಸಿದವು. ಇದರಿಂದ ನಾಗಗಳ ಮೇಲೆ ಪ್ರಸನ್ನನಾದ ಶಿವನು ನಾಗಗಳು ಸಮಸ್ತ ಸೃಷ್ಟಿಯ ರಕ್ಷಣೆಯನ್ನು ಮಾಡಲು ನೀಡಿದ ಯೋಗದಾನಕ್ಕಾಗಿ ‘ಮನುಷ್ಯನು ಯಾವಾಗಲೂ ನಾಗಗಳ ಬಗ್ಗೆ ಕೃತಜ್ಞನಾಗಿದ್ದು ಅವನು ನಾಗಗಳ ಪೂಜೆಯನ್ನು ಮಾಡುತ್ತಾನೆ’, ಎಂಬ ಆಶೀರ್ವಾದವನ್ನು ನೀಡಿದನು. ಅಂದಿನಿಂದ ಒಂಬತ್ತು ನಾಗಗಳು ಮನುಷ್ಯನಿಗೆ ಪೂಜನೀಯವಾದವು. ಒಂಬತ್ತು ನಾಗಗಳು ಒಂಬತ್ತು ವಿಧದ ಪವಿತ್ರಕಗಳನ್ನು (ಚೈತನ್ಯಲಹರಿಗಳು) ಗ್ರಹಣ ಮಾಡುವ ಘಟಕಗಳಾಗಿವೆ. ಅವುಗಳ ಪೂಜೆಯಿಂದ ಚೈತನ್ಯ ಲಹರಿಗಳನ್ನು ಧಾರಣೆ ಮಾಡುವ ಸಮೂಹದ್ದೇ ಪೂಜೆಯಾಗುತ್ತದೆ.

ನಾಗರಪಂಚಮಿ – ಪೂಜೆಯ ವಿಧಿ

 

ಮನೆಯಲ್ಲಿ ಸ್ವಚ್ಛವಾದ ಮರದ ಮಣೆಯ ಮೇಲೆ ಗಂಧ, ಅರಿಶಿಣ ಮತ್ತು ಕುಂಕುಮ ಇವುಗಳ ಮಿಶ್ರಣದಿಂದ ಐದು ಹೆಡೆಗಳ ನಾಗನನ್ನು ಬಿಡಿಸಬೇಕು ಅಥವಾ ರಕ್ತಚಂದನದಿಂದ ಒಂಬತ್ತು ನಾಗಗಳ ಆಕೃತಿಯನ್ನು ಬಿಡಿಸಬೇಕು. ಕೆಲವು ಸ್ಥಳಗಳಲ್ಲಿ ಮಣ್ಣಿನ ನಾಗವನ್ನು ಸಹ ತಯಾರಿಸಿ ಅದರ ಪೂಜೆಯನ್ನು ಮಾಡುತ್ತಾರೆ. ಕರಾವಳಿ ಭಾಗದಲ್ಲಿ ನಾಗದೇವರ ಕಲ್ಲಿನ ವಿಗ್ರಹಗಳಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ನಾಗನ ಪೂಜೆಯನ್ನು ಮಾಡುವಾಗ ಅನಂತ, ವಾಸುಕಿ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಈ ಒಂಭತ್ತು ನಾಗಗಳ ಹೆಸರುಗಳನ್ನು ಉಚ್ಚರಿಸಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸಬೇಕು. ಮನೆಯ ಸದಸ್ಯರು ಹೂವು, ಗರಿಕೆ, ಅರಳು, ಕಡಲೆಕಾಳು ಮುಂತಾದ ಪದಾರ್ಥಗಳನ್ನು ಅರ್ಪಿಸಬೇಕು.

ಹಿಂದೂ ಧರ್ಮವು ನಿರ್ಜೀವ ವಸ್ತುಗಳಿಂದ ಹಿಡಿದು ಪ್ರಾಣಿಪ್ರಪಂಚ ಇವೆಲ್ಲವುಗಳೂ ಪೂಜನೀಯವಾಗಿವೆ ಎಂದು ಕಲಿಸುತ್ತದೆ. ಪ್ರತಿಯೊಂದರಲ್ಲಿರುವ ದೇವತ್ವವನ್ನು ಗುರುತಿಸಿ ಅದನ್ನು ವಂದಿಸಲು ಕಲಿಸುತ್ತದೆ. ಇದರಿಂದ ನಮಗೆ ದೇವರ ಅಸ್ತಿತ್ವದ ಅರಿವು ಸತತವಾಗಿ ಆಗುತ್ತಿರುತ್ತದೆ. ಈ ಅರಿವೇ ದೇವರ ಅನುಸಂಧಾನ.

ಆಧಾರ: ಸನಾತನದ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’ 

Leave a Reply

Your email address will not be published. Required fields are marked *

error: Content is protected !!