ತುಮಕೂರು – ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಪುಂಡನೊಬ್ಬ ಕೂಲಿ ಕಾರ್ಮಿಕನೊಬ್ಬನಿಗೆ ಹಾಡು ಹಗಲೇ ಬ್ಲೇಡಿನಿಂದ ಕತ್ತು ಕುಯ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ನಡೆದಿರುವುದು ತುಮಕೂರು ನಗರದ ಸದಾಶಿವನಗರ ಬಡಾವಣೆಯ 4ನೇ ಮುಖ್ಯರಸ್ತೆಯಲ್ಲಿ ಆಗಸ್ಟ್ 25ರಂದು ಘಟನೆ ನಡೆದಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಚಿತ್ರದುರ್ಗ ಮೂಲದ ಹನುಮಂತು ಎಂಬಾತ ತನ್ನ ಹೆಂಡತಿ ಮಕ್ಕಳೊಂದಿಗೆ ಅಂಗಡಿಗೆ ಬಂದಿದ್ದ ವೇಳೆಯಲ್ಲಿ ರಸ್ತೆಯಲ್ಲಿದ್ದ ಪುಂಡನೊಬ್ಬ ಕುಡಿಯಲು ಹಣ ಕೇಳಿದ್ದು ಹಣ ನೀಡದ ಕಾರಣಕ್ಕೆ ಏಕಾಏಕಿ ಪುಂಡನೊಬ್ಬ ಬ್ಲೇಡಿನಿಂದ ಕತ್ತು ಕೊಯ್ದು ಪರಾರಿ ಆಗಲು ಮುಂದಾದ ಕಾರಣಕ್ಕೆ ಸಾರ್ವಜನಿಕರೇ ಪುಂಡನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬ್ಲೇಡಿನಿಂದ ಕತ್ತು ಕೊಯ್ದ ಪುಂಡನನ್ನು ಸ್ಥಳೀಯ ನಿವಾಸಿ ಎಂದು ಗುರುತಿಸಲಾಗಿದ್ದು ಘಟನೆಯಲ್ಲಿ ಗಾಯಗೊಂಡ ಹನುಮಂತ ಕೂಲಿ ಕೆಲಸಕ್ಕಾಗಿ ಚಿತ್ರದುರ್ಗದಿಂದ ತುಮಕೂರಿಗೆ ವಲಸೆ ಬಂದು ಜೋಪಡಿಯಲ್ಲಿ ವಾಸ ಮಾಡುತ್ತಿದ್ದು ಸದ್ಯ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದೇ ವೇಳೆ ಕತ್ತು ಕೊಯ್ದು ಪರಾರಿಯಾಗಲು ಯತ್ನಿಸಿದ ಪುಂಡನನ್ನ ಸ್ಥಳೀಯರೇ ಹಿಡಿದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದು ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಘಟನೆಗೆ ತುಮಕೂರು ನಗರದ ಸದಾಶಿವನಗರ ಬಸ್ ಸ್ಟಾಪ್ ಬಳಿ ಅಗತ್ಯಕ್ಕಿಂತ ಹೆಚ್ಚಿನದಾಗಿ ವೈನ್ ಶಾಪ್ ಗಳಿಗೆ ಲೈಸೆನ್ಸ್ ನೀಡಿದ್ದು ಇದರಿಂದ ಕುಡುಕರ ಹಾವಳಿ ಹೆಚ್ಚಾಗಿದ್ದು ಇದರಿಂದ ಪ್ರತಿನಿತ್ಯ ಸಾರ್ವಜನಿಕರು ಸಹ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದ್ದು ಪದೇಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದು ಇನ್ನಾದರೂ ಪೊಲೀಸರು ಎಚ್ಚೆತ್ತುಕೊಂಡು ಇಂತಹ ಪುಂಡರಿಗೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ