ಅಕ್ರಮ ರಕ್ತ ಚಂದನ ಸಾಗಾಣಿಕೆಗೆ ಯತ್ನ: 1ಕೋಟಿ ಮೌಲ್ಯದ ದಿಮ್ಮಿಗಳು ವಶ

 

 

 

ತುಮಕೂರು: ಅಕ್ರಮವಾಗಿ ರಕ್ತ ಚಂದನದ ತುಂಡುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿ ಲಾರಿ ಚಾಲಕನನ್ನು ಬಂಧಿಸಿ 1ಕೋಟಿಗೂ ಅಧಿಕ ಮೌಲ್ಯದ ರಕ್ತಚಂದನದ ದಿಮ್ಮಿಗಳನ್ನು ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ಬೆಳಿಗ್ಗೆ ಹಿರೇಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ನಡೆದಿದೆ.

 

 

 

 

 

ಆಂಧ್ರಪ್ರದೇಶದಿಂದ ತುಮಕೂರಿಗೆ ಸರಕು ಸಾಗಿಸುತ್ತಾ ಬರುತ್ತಿದ್ದ ಲಾರಿಯೊಂದನ್ನು ಮಗರದ ಹೊರವಳಯದ ಹಿರೇಹಳ್ಳಿ ಬಳಿಯ ಅರಣ್ಯ ಇಲಾಖೆ ತಪಾಸಣಾ ಸ್ಥಳದಲ್ಲಿ ತಡೆದು ನಿಲ್ಲಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಲಾರಿಯನ್ನು ತಪಾಸಣೆ ಮಾಡಿದ್ದಾರೆ. ಈ ವೇಳೆ ಇಲಾಖೆಯ ಸಿಬ್ಬಂದಿ ಕೇಶವಮೂರ್ತಿ ಲಾರಿಯೊಳಗೆ ಇದ್ದ ರಕ್ತ ಚಂದನದ ದಿಮ್ಮಿಗಳನ್ನು ಪತ್ತೆಹಚ್ಚಿದ್ದಾರೆ.

 

 

 

ಇದೇ ವೇಳೆ ಲಾರಿಯ ಚಾಲಕ ಹಾಗೂ ಇತರೇ ಮತ್ತೊಬ್ಬ ತಪ್ಪಿಸಿಕೊಂಡು ಓಡಿ ಹೋಗುವ ಪ್ರಯತ್ನ ಮಾಡಿದ್ದಾರೆ‌. ಚಾಲಕನ ಬೆನ್ನುಹತ್ತಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ರಸ್ತೆ ಬದಿಯ ಚರಂಡಿಯಲ್ಲಿ ಅವಿತು ಕುಳಿತಿದ್ದ ಲಾರಿ ಚಾಲಕ ಇಬ್ರಾಹಿಂನನ್ನು ಬಂಧಿಸಿ ಮತ್ತೊಬ್ಬನ ಬಂಧನಕ್ಕೆ ಬಲೆ ಬೀಸಿದ್ದಾರೆ.

 

 

 

 

 

ಘಟನಾ ಸ್ಥಳಕ್ಕೆ ಎಸ್.ಸಿ.ಎಫ್. ಮಹೇಶ್ ಮಾಲಗತ್ತಿ ಹಾಗೂ ಇತರೇ ಸಿಬ್ಬಂದಿಗಳು ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!