ಸುಮಾರು 500 ವರ್ಷಗಳ ಇತಿಹಾಸವಿರುವ ಚೋಳರಕಾಲದ ದೇವಾಲಯವಿದು. ಕೋಲಾರದ ನಿವಾಸಿಗ ಳಾದ ಸ್ಮಾರ್ತ ಬ್ರಾಹ್ಮಣ ವರ್ಗಕ್ಕೆ ಸೇರಿದ ವೇ.ಬ್ರ.ಶ್ರೀ. ದಿ.ಶ್ಯಾನುಭೋಗ ಜಿ.ನರಸಪ್ಪ ನವರ ಕಾಲದಲ್ಲಿ ಪ್ರಥಮ ಏಕಾದಶಿಯಂದು ಚಂದ್ರಮೌಳೀಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರ ಪ್ರತಿಷ್ಠೆಯನ್ನು ಮಾಡಿಸಿ ರುತ್ತಾರೆ. ಹಿಂದೆ ಕುಂದಲಗುರ್ಕಿ ದಿ.ನಂದಿಗಿ ರಿಯಪ್ಪನವರು ವಾರಪೂಜೆಯನ್ನು ನಡೆಸಿಕೊಂಡು ಬಂದಿರುವುದು ಸರಿಯಷ್ಟೆ , ಅವರ ನಂತರ ಭಾಗವತರು ಕೆಲವು ವರ್ಷ ಗಳ ಕಾಲ ಪೂಜೆಯನ್ನು ನಡೆಸಿಕೊಂಡು ಬಂದಿರುತ್ತಾರೆ. ಅವರ ನಂತರ ಒಂದು ವರ್ಷಕಾಲ ಕೌಂಡಿನ್ಯಸಗೋತ್ರೋದ್ಭ ವರಾದ ದಿ. ವೇ.ಬ್ರ.ಶ್ರೀ ಸುಂದರೇಶ ಶಾಸ್ತ್ರಿ ಗಳವರು ನಡೆಸಿಕೊಂಡು ಬಂದಿರುತ್ತಾರೆ. ತದನಂತರ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಂತಹ ಉಪಾಧ್ಯಾಯರಾದ ನಂಜನಗೂಡು ನಿವಾಸಿಗಳಾದ ವೇ.ಬ್ರ.ಶ್ರೀ ಕೃಷ್ಣಪ್ಪನವರು ಮತ್ತು ಜಂಗಮಕೋಟೆ ಹೊಬಳಿ ಅನುಪಹಳ್ಳಿ ಗ್ರಾಮಸ್ಥರಾದ ವೇ.ಬ್ರ.ಶ್ರೀ ನಾಗರಾಜ ರವರು ಉಪಾಧ್ಯಾ ಯರಾಗಿದ್ದು ಒಂದು ವರ್ಷಕಾಲ ಪೂಜೆ ೧೯೬೮ ರಿಂದ ಗೌತಮಸ ಗೋತ್ರೋದ್ಭ ವರಾದ ವೇ.ಬ್ರ.ಶ್ರೀ ಜಿ.ಎಸ್. ಸುಬ್ಬಣ್ಣಾಚಾ ರ್ಯರು ಮತ್ತು ವಂಶದವರು ಲಕ್ಷ್ಮೀನೃಸಿಂ ಹಸ್ವಾಮಿ ದೇವಸ್ಥಾನದ ಅರ್ಚಕರಾಗಿದ್ದು ಚಂದ್ರಮೌಳೀಶ್ವರ ದೇವಾಲಯದ ಪೂಜೆ ನಿಂತಿದ್ದ ಕಾರಣ ಅದೇ ಊರಿನ ಗ್ರಾಮಸ್ಥರು ನ್ಯಾಯವನ್ನು ಮಾಡಿ ಆಗಿನ ಕಾಲದ ಭಜನಾ ಮಂಡಳಿ ಅಧ್ಯಕ್ಷರಾಗಿದ್ದ ದಿ.ಶ್ರೀಯುತ ಪಾಪರೆಡ್ಡಿಯವರ ಕಾಲದಲ್ಲಿ ಊರಿನ ಪ್ರಮುಖರೆಲ್ಲಾ ಸೇರಿ ದಿ.ವೇ.ಬ್ರ.ಶ್ರೀ ಜಿ.ಎಸ್. ಸುಬ್ಬಣ್ಣಾಚಾರ್ಯರಿಗೆ ಪೂಜೆ ಯನ್ನು ಮಾಡಲು ಅವಕಾಶವನ್ನು ಮಾಡ ಲಾಯಿತು. ಆದರೆ ಅವರು ಕಾರಣಾಂತ ರದಿಂದ ಜೀವನ ನಡೆಯದೇ ಬೆಂಗಳೂರಿಗೆ ಹೋದರು. ಅವರ ನಂತರ ಅವರ ತಮ್ಮ ಂದಿರಾದ ದಿ.ವೇ.ಬ್ರ.ಶ್ರೀ ಜಿ.ಎಸ್.ರಾಘವೇ ಂದ್ರಾಚಾರ್‌ರವರಿಗೆ ಪೂಜೆಯನ್ನು ಮಾಡಲು ಊರಿನ ಪ್ರಮುಖರೆಲ್ಲಾ ಸೇರಿ ನವಗ್ರಹ ಪ್ರತಿಷ್ಠೆಯನ್ನು ಮಾಡಿಸಿ ಪೂಜೆಗೆ ಭಕ್ತಾದಿಗಳಿಂದ ಏರ್ಪಾಟುಮಾಡಿ ಸೇವೆಯ ನ್ನು ಕಲ್ಪಿಸಲಾಯಿತು. ಅವರ ನಂತರ ಅವರ ಮಗನಾದ ದಿ.ವೇ.ಬ್ರ.ಶ್ರೀ. ಶ್ರೀನಿವಾಸ ಮೂರ್ತಿ ಯವರು ೧೯೮೫-೨೦೨೧ ನೇ ಇಸವಿವರೆಗೂ ಚಂದ್ರಮೌಳೀಶ್ವರ ಸೇವಾ-ಪೂಜಾಂಕೈಂಕರ್ಯವನ್ನು ನಡೆಸಿಕೊಂಡು ಬಂದಿರುತ್ತಾರೆ. ಈ ಸಂದರ್ಭದಲ್ಲಿ ದೇವಾ ಲಯವನ್ನು ನೂತನವಾಗಿ ಜೀರ್ಣೋ ದ್ಧಾರ ಪ್ರತಿಷ್ಠೆಯನ್ನು ಮಾಡಿಸಿರುತ್ತಾರೆ, ಭಕ್ತಾದಿಗಳಿಂದ ದೇವರ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದು ಈ ದೇವಸ್ಥಾ ನವು ಸುಂದರ ಹಾಗೂ ಆಕರ್ಷಣೀ ಯವಾಗಿದ್ದು ಜನಾದರಣೆಗೆ ಒಳಪಟ್ಟು ಭಕ್ತರ ಸಮೂಹದದಿಂದ ಶ್ರೀ ಚಂದ್ರ ಮೌಳೀಶ್ವರ ದೇವರ ಸೇವಾ ಕೈಂಕ ರ್ಯಗಳನ್ನು ನಡೆಸಿಕೊಂಡು ಬಂದಿರು ತ್ತಾರೆ, ನಂತರ 2021 ರಿಂದ ಶ್ರೀನಿವಾಸ ಮೂರ್ತಿರವರ ಮಕ್ಕಳಾದ ಡಾ.ಸುಧಾಕರ ಜಿ.ಎಸ್ ಮತ್ತು ಡಾ.ಅನಂತಕೃಷ್ಣ.ಜಿ.ಎಸ್ ರವರಿಗೆ ಗಂಜಿಗುಂಟೆಯ ವಿಪ್ರೋತ್ತಮರು ಮತ್ತು ಊರಿನ ಸಜ್ಜನ ಪ್ರಮುಖರೆಲ್ಲಾ ಸೇರಿ ಪೂಜಾಕೈಂಕರ್ಯವನ್ನು ನಿರ್ವಹಿಸಲು ಒಮ್ಮತದಿಂದ ತೀರ್ಮಾನಿಸಿ, ಸಹಕಾರ ವನ್ನು ನೀಡುತ್ತಿದ್ದಾರೆ. ಸದರಿ ದೇವಾಲ ಯವು ಮುಜರಾಯಿ ಇಲಾಖೆಗೆ ಒಳಪಟ್ಟಿ ರುತ್ತದೆ.
1999 ರಿಂದ ಇಂದಿನವರೆಗೂ ಕಾರ್ತೀಕಮಾಸ ಸೇವೆಯು ಒಂದು ತಿಂಗಳ ಕಾಲ ವಿಶೇಷ ಪೂಜೆಯು ನಡೆಯುತ್ತಿದೆ. ಸುಮಾರು ಐದು ವರ್ಷದಿಂದ ಭಕ್ತಾದಿಗ ಳಿಂದ ಲಕ್ಷದೀಪೋತ್ಸವವನ್ನು ಆಚರಿಸಿಕೊ ಂಡು ಬರಲಾಗುತ್ತಿದೆ. ಕಾರ್ತೀಕಮಾಸದ ಹುಣ್ಣಿಮೆಯಂದು ಕೃತ್ತಿಕೋತ್ಸವ ನಡೆಯು ತ್ತದೆ. ಮಹಾಶಿವರಾತ್ರಿಯಂದು ಮಹನ್ಯಾಸ ಪೂರ್ವಕ ಹಗಲು ಮತ್ತು ರಾತ್ರಿ ಸೇರಿ ಎಂಟು ಯಾಮಗಳೂ ರುದ್ರಾಭಿಷೇಕವು ನಡೆಯುತ್ತದೆ. ಹಬ್ಬ-ಹರಿದಿನಗಳಲ್ಲಿ ಉತ್ಸ ವವು ನಡೆಯುತ್ತದೆ. ಅನೇಕ ಹೋಮ-ಹವನಗಳೂ ನಡೆಯುತ್ತದೆ. ಮಳೆಯಿಲ್ಲದೆ ಕ್ಷಾಮ-ಭೀಕರ ತೋರಿದಾಗ ವಿಶೇಷವಾಗಿ ಪೂಜೆ ನಡೆಸಿದರೆ ಚಂದ್ರಮೌಳೀಶ್ವರನ ಅನುಗ್ರಹದಿಂದ ಗ್ರಾಮದಲ್ಲಿ ಕೆರೆ-ಕುಂಟೆ ಗಳು ತುಂಬುತ್ತದೆ. ಪ್ರತಿನಿತ್ಯ ಪೂಜಾದಿಗಳು ತಂತ್ರಸಾರೋಕ್ತ ಆಗಮದಲ್ಲಿ ನಡೆಯುತ್ತಿದೆ.
ದೇವಾಲಯದ ವಾಸ್ತುಶಿಲ್ಪ ಮತ್ತು ದೇವರುಗಳ ಮಾಹಿತಿ:
ಸುಮಾರು 500 ವರ್ಷಗಳ ಇತಿಹಾಸವಿರುವ ಚೋಳರಕಾಲದ ಸುಂದರ ಶ್ರೀಪ್ರಸನ್ನ ಪಾರ್ವತಾಂಬಾ ಸಮೇತ ಚಂದ್ರಮೌಳೀಶ್ವರ ದೇವಾಲಯವು ಪೂರ್ವಾಭಿಮುಖವಾಗಿದ್ದು, ದೇವಾಲಯ ವನ್ನು ಮಹಾದ್ವಾರದ ಮೂಲಕ ಪ್ರವೇಶಿಸು ತ್ತಿದ್ದಂತೆ ಜ್ಯೋತಿರ್ಗಂಭ ಮತ್ತು ಬಲಿ ಪೀಠವಿದೆ. ಬಲಿಪೀಠದ ಮುಂದೆ ತುಳಸಿ ಕುಂಡವಿದೆ. ಪ್ರಧಾನ ಗರ್ಭಗೃಹವು ಸಿಂಹಾಯದಲ್ಲಿದ್ದು, ಚಂದ್ರಮೌಳೀಶ್ವರ ದೇವರು ವಿರಾಜಮಾನರಾಗಿದ್ದಾರೆ, ಚಂದ್ರ ಮೌಳೀಶ್ವರ ದೇವರ ಸಾನ್ನಿಧ್ಯವು ಭದ್ರ ಪೀಠ, ಭದ್ರ ಪೀಠದ ಮೇಲೆ ಪಾಣಿಪೀಠ ದಲ್ಲಿ ಸ್ವಾಮಿಯ ಲಿಂಗವಿದೆ. ಎಡಭಾಗದ ಗರ್ಭಗೃಹದಲ್ಲಿ ಪಾರ್ವತಿ ದೇವಿ, ಬಲಭಾಗದ ಗರ್ಭಗೃಹದಲ್ಲಿ ಆಂಜನೇಯ, ಗಣಪತಿ, ಸುಬ್ರಹ್ಮಣ್ಯ, ವೀರಭದ್ರ, ಚಂದ್ರ ಮೌಳೀಶ್ವರರ ಎದುರಿಗೆ ನಂದಿ. ದ್ವಾರದಲ್ಲಿ ಚಂಡ ಮತ್ತು ಪ್ರಚಂಡರೆಂಬ ದ್ವಾರಪಾಲ ಕರಿದ್ದಾರೆ. ಚಂದ್ರಮೌಳೀಶ್ವರರ ಉತ್ತರ ದಿಕ್ಕಿಗೆ ಚಂಡಿಕೇಶ್ವರರಿದ್ದಾರೆ. ಚಂದ್ರಮೌ ಳೀಶ್ವರರ ಈಶಾನ್ಯಕ್ಕೆ ಆದಿತ್ಯಾದಿ ನವಗ್ರಹ ಗಳಿವೆ. (ಪೂರ್ವದಲ್ಲಿ ನವಗ್ರಹಗಳಿದ್ದ ಜಾಗ ದಲ್ಲಿ ಪವಿತ್ರ (ಬಾವಿ) ಜಲಮೂಲವಿತ್ತು). ನವಗ್ರಹಗಳ ಪಕ್ಕದಲ್ಲಿ ಬಿಲ್ವಪತ್ರ ಮರದ ಕೆಳಗೆ ಗೋಪಾಲಕೃಷ್ಣ, ಅಶ್ವತ್ಥನಾರಾಯಣ ದೇವತಾಮೂರ್ತಿಗಳಿವೆ. ದೇವಾಲಯದ ಕಂಬಗಳಲ್ಲಿ ಶಿವಗಣಗಳಾದ ಬಾಣರಾವಣ, ಚಂಡೀಶ, ನಂದಿ, ಬೃಂಗಿ, ರಿಟಾದಯಃ, ವೀರಭದ್ರ ಮೂರ್ತಿಗಳ ಸುಂದರ ಮೂರ್ತಿಯನ್ನು ಕಾಣಬಹುದು. ದೇವಾಲ ಯದ ಮೇಲ್ಛಾವಣಿ ಮತ್ತು (ಒಳ) ಗೋಡೆ ಗಳು ಅನೇಕ ಶಾಸನಗಳನ್ನು ಒಳಗೊಂಡು, ಮತ್ಯ್ಸ, ನಾಗ, ಶಿವನ ಡಮರುಗ, ಈಟಿ ಕೆತ್ತನೆಗಳಿಂದ ರಾರಾಜಿಸುತ್ತಿದೆ. ದೇವಾಲ ಯದಲ್ಲಿ ಶಿವಲಿಂಗದ ಮೇಲ್ಗಡೆ ರಾಜಗೋ ಪುರವಿದೆ. ದೇವಾಲಯದ ಹೊರ ಪ್ರಾಂಗಣದಲ್ಲಿ ಗೋ, ಗಜ, ಅಶ್ವ, ಸಿಂಹದ ಕೆತ್ತನೆಗಳನ್ನು ಕಾಣಬಹುದಾಗಿದೆ. ದೇವಾಲ ಯದ ಪ್ರಾಂಗಣದಲ್ಲಿ ಸುಂದರ ಕಲ್ಲಿನ ಗಣಪತಿಯನ್ನು ಕಾಣಬಹುದಾಗಿದೆ. ದೇವಾಲಯವು ತುಂಬಾ ವಿಶಿಷ್ಠ ಮತ್ತು ವಿಶೇಷವಾಗಿದೆ.
ದೇವಾಲಯದಲ್ಲಿ ನಡೆಯುವ ನಿತ್ಯ, ಮಾಸಿಕ, ವಾರ್ಷಿಕ ಸೇವೆಗಳು
ನಿತ್ಯ ದೀಪಾರಾಧನ ಸೇವಾ, ಷೋಡಷೋಪಚಾರ ಪೂಜಾ ಸೇವಾ, ಪಂಚಾಮೃತ ಸೇವಾ, ಏಕವಾರ ರುದ್ರಾಭಿಷೇಕ ಸೇವಾ, ಏಕಾದಶವಾರ ರುದ್ರಾಭಿಷೇಕ ಸೇವಾ,ಶತವಾರ, ರುದ್ರಾಭಿಷೇಕ ಸೇವಾ, ಅಷ್ಟೋತ್ತರ ಸೇವಾ, ಅಷ್ಟಾವಧಾನ ಸೇವಾ, ,ಮಾಸಿಕ ದೀಪಾರಾಧನ ಸೇವಾ, ವಾರ್ಷಿಕ ದೀಪಾರಾಧನ ಸೇವಾ, ಸಂಕ್ರಾಂತಿ ಸೇವಾ, ಯುಗಾದಿ ಸೇವಾ, ಶರನ್ನವರಾತ್ರಿ ಸೇವಾ, , ಕಾರ್ತೀಕಮಾಸ ಸೇವಾ, ಕೃತ್ತಿಕೋತ್ಸವ ಸೇವಾ, ಮಹಾಶಿವರಾತ್ರಿ ಸೇವಾ, ನವಗ್ರಹ ಪೂಜಾ ಸೇವಾ, ಗಣಪತಿ, ನವಗ್ರಹ, ಮೃತ್ಯುಂಜಯ, ರುದ್ರ ಹೋಮ ಸೇವಾ, ಲಕ್ಷ ದೀಪೋತ್ಸವ ಸೇವಾ, ಪ್ರಾಕಾರೋತ್ಸವ ಸೇವಾ,
ದೇವಾಲಯವನ್ನು ಸಂದರ್ಶಿಸಿದ ಮಹನೀಯರುಗಳು:
ಶ್ರೀ ಶಂಕರಾಚಾರ್ಯ ಆದೋನಿ ದತ್ತಾತ್ರೇಯ ಪೀಠಾಧಿಪತಿಗಳಾದ ಶ್ರೀ.ಶ್ರೀ.ಶ್ರೀ ವಿದ್ಯಾಭಿನವ ಸುಬ್ರಮಣ್ಯ ಭಾರತೀ ಮಹಾಸ್ವಾಮಿಗಳವರು.
ಕೋಲಾರ, ಶಿಢ್ಲಘಟ್ಟ, ಚಿಕ್ಕಬಳ್ಳಾ ಪುರ, ಬೆಂಗಳೂರಿನ ಅನೇಕ ಜನಪ್ರತಿನಿಧಿಗಳು.
ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತಮ ಸಾಹಿತ್ಯ ಕೃತಿಗಳನ್ನು ನೀಡಿದಂತಹ ಶ್ರೀ.ಪ್ರೋ.ಎಮ್.ಎನ್.ಸುಂದರ್ ರಾಜ್ ರವರು.
ಕರ್ನಾಟಕದ ಅನೇಕ ಕೆ.ಎ.ಎಸ್ ಮತ್ತು ಐ.ಎ.ಎಸ್ ಅಧಿಕಾರಿಗಳು.
ನಾಡಿನ ಅನೇಕ ಹೆಸರಾಂತ ಶಿಕ್ಷಕರು, ಸಂಗೀತ ವಿದ್ವಾಂಸರು, ವೇದ ವಿದ್ವಾಂ ಸರು ಮತ್ತು ಸಂಸ್ಕೃತ ವಿದ್ವಾಂಸರುಗಳು.
ನಾಡಿನ ಹೆಸರಾಂತ ವೀಣಾ, ತಬಲ ಮತ್ತು ನಾಗಸ್ವರ ವಾದಕರುಗಳು.
ನಾಡಿನ ಹೆಸರಾಂತ ಕೃಷಿಕರು, ಶಿಕ್ಷಕರು, ಕೈಗಾರಿಕೋದ್ಯಮಿ ಗಳು, ಪತ್ರಿಕೋದ್ಯಮಿಗಳು, ಬ್ಯಾಂಕ್ ಸಿಬ್ಬಂದಿ, ಇಂಜಿನಿಯರ್ ಮತ್ತು ವೈದ್ಯ ವೃಂದದವರು.
ಭಕ್ತಾದಿಗಳಿಂದ ದೇವಾಲಯದಲ್ಲಿ ಆಗಬೇಕಾದ ಮಹತ್ತರ ಕಾರ್ಯಗಳು:
ದೇವಾಲಯ ಪ್ರಾಂಗಣದಲ್ಲಿ ಉದ್ಯಾನವನಕ್ಕೆ ಹಾಸುಗಲ್ಲು.
ದೇವರ ರಥೋತ್ಸವಕ್ಕೆ ರಥ ನಿರ್ಮಾಣ ಮತ್ತು ರಥಕ್ಕೆ ಶೆಡ್ ನಿರ್ಮಾಣ
ದೇವಾಲಯಕ್ಕೆ ಯು.ಪಿ.ಎಸ್ ವ್ಯವಸ್ಥೆ
ದೇವರ ಪ್ರಾಕಾರೋತ್ಸವ ಮೂರ್ತಿ ಜೀರ್ಣೋದ್ಧಾರ
ದೇವಾಲಯದ ಪ್ರಾಂಗಣದಲ್ಲಿ ಭಕ್ತರ ಅನುಕೂಲಕ್ಕೆ ಕೈ-ಕಾಲು ತೊಳೆಯಲು ಕೊಠಡಿ.
ದೇವಾಲಯದ ಸುತ್ತಲೂ ಮೇಲ್ಛಾವಣಿಗೆ ಶೀಟ್ ವ್ಯವಸ್ಥೆ.
ದೇವಾಲಯದ ಸುರಕ್ಷತೆಗಾಗಿ ಮತ್ತು ಶುಭ್ರತೆಗಾಗಿ ಸಿ.ಸಿ. ಕ್ಯಾಮೆರಾ ವ್ಯವಸ್ಥೆ.
ಭಕ್ತರ ಅನುಕೂಲಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ.
-ಡಾ. ಜಿ.ಎಸ್.ಸುಧಾಕರ ಶರ್ಮ