ಶ್ರೀ ಶಾಂತಿನಿಕೇತನ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಶ್ರೀ ಮರಿಬಸಪ್ಪ ನಿವೃತ್ತ ಪ್ರಾಂಶುಪಾಲರು ಗೋಕುಲ ಬಡಡಾವಣೆ ತುಮಕೂರು ಇವರು ನೋಟ್ ಬುಕ್ ಗಳನ್ನು ತಂದೆ ತಾಯಿ ಸೇವಾಸಮಿತಿ ಹೆಸರಲ್ಲಿ ಕೊಡಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಶ್ರೀ ಮರಿಬಸಪ್ಪ ರವರು ಮಾತನಾಡುತ್ತಾ ಜ್ಞಾನಾರ್ಜನೆಯಿಂದ ಇಂದಿನ ಸಮಾಜ ಸುಧಾರಣೆಯಾಗಲು
ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಕೃತಿ ಮಾದರಿ ನೀತಿ ಶಿಕ್ಷಣ ಜೊತೆಯಲ್ಲಿ ಕಲೆ ಸಾಹಿತ್ಯ ರೂಢಿಸಿದಾಗ ಮಾತ್ರ ಇಂದಿನ ಯುವ ಪೀಳಿಗೆಯ ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಹಾಗೂ ಅತ್ಯ ಆಧುನಿಕ ತಂತ್ರಜ್ಞಾನದ ಮೂಲಕ ಕನ್ನಡದ ಅಕ್ಷರ ದಾಸೋಹ ದ ಜೊತೆಯಲ್ಲಿ ರಾಷ್ಟ್ರೀಯ ಭಾಷೆ ಹಾಗೂ ಆಂಗ್ಲ ಭಾಷೆಗಳ ನಡುವೆ ಸೌಹಾರ್ದ ಸಂಬಂಧ ಹೊಂದಿದರೆ ಮಕ್ಕಳಿಗೆ ಅಂತರ್ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ. ಸ್ವಾಮಿ ವಿವೇಕಾನಂದರು ಮಹಾತ್ಮ ಗಾಂಧಿ ಅಂಬೇಡ್ಕರ್ ಬಸವಣ್ಣನವರು ಸಾವಿತ್ರಿಬಾಯಿ ಪೂಲೆ ಹೀಗೆ ಮಹಾನುಚೇತನರ ಆದರ್ಶ ತತ್ವಗಳನ್ನು ಇಂದಿನ ಶಿಕ್ಷಣ ವಿದ್ಯಾರ್ಥಿಗಳಿಗೆ ಜ್ಞಾನ ಸಾಗರವಾಗಿ ಹರಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಂದರ್ಭದಲ್ಲಿ ಟೂಡಾಮೂರ್ತಿ, ಬಿ ಜೆ ಪಿ ಮೂರ್ತಿ. ಟೂಡಾ ಸಿದ್ದಲಿಂಗಪ್ಪ, ಶಿಕ್ಷಕರು. ಟಿ.ಎಮ್.ರುದ್ರಪ್ಪ. ಟೈಲರ್ ನಾಗರಾಜ್, ರುದ್ರೇಶ್. ಮುಂತಾದ ಗಣ್ಯರು ಭಾಗವಹಿಸಿದ್ದರು