ತುಮಕೂರು ಜಿಲ್ಲಾ ಆಸ್ಪತ್ರೆಗಳಲ್ಲಿ ಎಬಿಎಆರ್ ಕೆ ಯೋಜನೆ ಸಂಪೂರ್ಣ ವಿಫಲ ; ಹಂದ್ರಾಳ್ ನಾಗಭೂಷಣ್ ಆರೋಪ

ತುಮಕೂರು ಸರ್ಕಾರಿ ಆಸ್ಪತ್ರೆಗಳು ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆಗಳನ್ನ ಎದುರಿಸುತ್ತಲೇ ಇವೆ ಬಡ ರೋಗಿಗಳು ಸಾರ್ವಜನಿಕರು ಸೌಲಭ್ಯಗಳ ಕೊರತೆಯಿಂದಾಗಿ ಆರೋಗ್ಯದಿಂದ ದೂರ ಉಳಿದಿದ್ದಾರೆ ಇದಕ್ಕೆ ಪೂರಕವೆಂಬಂತೆ ತುಮಕೂರು ಜಿಲ್ಲಾಸ್ಪತ್ರೆಯೂ ಕೂಡ ಒಂದಾಗಿದ್ದು ರೋಗಿಗಳು, ಚಿಕಿತ್ಸೆ, ವೈದ್ಯರು, ಸಿಬ್ಬಂದಿ ಸೇರಿದಂತೆ ಇತರೆ ಸಮಸ್ಯೆಗಳಿಂದಾಗಿ ಜಿಲ್ಲಾಸ್ಪತ್ರೆ ಸದಾ ಸುದ್ದಿಯಲ್ಲಿದೆ ಸ್ವಚ್ಛತೆ, ಔಷಧಿ, ವಿತರಣೆ, ವೈದ್ಯರ ನಿರ್ಲಕ್ಷ್ಯದಿಂದ ಆಗುವ ಸಾವು ನೋವುಗಳು ಸೇರಿದಂತೆ ಅನೇಕ ಆರೋಪಗಳು ಈಗಾಗಲೇ ಜಿಲ್ಲಾಸ್ಪತ್ರೆಯ ಮೇಲಿದ್ದು, ಸರ್ಕಾರಗಳು ಬಡವರಿಗಾಗಿ ಉಚಿತ ಆರೋಗ್ಯ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ಈ ಯೋಜನೆಗಳ ಅಡಿಯಲ್ಲಿ ಚಿಕಿತ್ಸೆ ನೀಡುವಂತೆ ಆದೇಶವೂ ನೀಡಿದೆ ಆದರೆ ಕೆಲ ಆಸ್ಪತ್ರೆಗಳಲ್ಲಿ ಬಡವರಿಗಾಗಿ ಇರುವ ಯೋಜನೆಗಳು ಶೂನ್ಯವಾಗಿದ್ದು ಸರಿಯಾಗಿ ಸದ್ಬಳಕೆಯಾಗದೆ ದುರುಪಯೋಗ ಮಾಡಿಕೊಂಡಿರುವ ಘಟನೆಯು ಜರುಗಿದೆ ಈ ಯೋಜನೆಗಳು ಇದ್ದರೂ ಕೂಡ ಇಲ್ಲದಂತಾಗಿದೆ ಇದಕ್ಕೆ ಪೂರಕವಾಗುವಂತೆ ಜಿಲ್ಲಾ ಆಸ್ಪತ್ರೆಯಲ್ಲಿ ಘಟನೆ ಜರುಗಿದ್ದು ಈ ಘಟನೆಯ ಸಂಪೂರ್ಣ ವಿವರವನ್ನು ಸಾಮಾಜಿಕ ಕಾರ್ಯಕರ್ತ ಹಂದ್ರಾಳ್ ನಾಗಭೂಷಣ್ ಅವರು ಮಾದ್ಯಮ ಮಿತ್ರರೊಂದಿಗೆ ಮಾಹಿತಿ
ಹಂಚಿಕೊಂಡಿದ್ದಾರೆ.

 

 

 

ತುಮಕೂರು ಜಿಲ್ಲೆಯು ರಾಜ್ಯದಲ್ಲಿ ಅತಿದೊಡ್ಡ ಎರಡನೇ ಜಿಲ್ಲೆಯಾಗಿದ್ದು, ಈ ಜಿಲ್ಲಾಸ್ಪತ್ರೆಗೆ ಪ್ರತಿದಿನ ನೂರಾರು ಹೊರ ರೋಗಿಗಳು ಬರುತ್ತಾರೆ ಒಳರೋಗಿಗಳಾಗಿ ದಾಖಲಾಗುತ್ತಾರೆ. ಅದರಂತೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಎ.ಬಿ.ಎ.ಆರ್.ಕೆ ಯೋಜನೆಯೊಂದಿಗೆ ಯಾವುದೇ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ಬಿಪಿಎಲ್ ಹೊಂದಿರುವಂತಹ ರೋಗಿಗಳಿಂದ ಯಾವುದೇ ರೀತಿಯ ಹಣ ಪಡೆಯದೆ ಉಚಿತ ಚಿಕಿತ್ಸೆ ನೀಡಬೇಕಾಗಿ ಸ್ಪಷ್ಟವಾದ ಸುತ್ತೋಲೆ/ಆದೇಶ ಹೊರಡಿಸಿರುತ್ತದೆ.

 

 

ಇತ್ತೀಚಿಗೆ ತುಮಕೂರು ಜಿಲ್ಲಾಸ್ಪತ್ರೆಗೆ ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ,ಹೊಳವನಹಳ್ಳಿ ಗ್ರಾಮದ ಓಬಳನರಸಯ್ಯ ಎಂಬುವರು ಸುಮಾರು ಇಪ್ಪತ್ತು ದಿನಗಳ ಹಿಂದೆ ಮುಳೆ ಮುರಿತ ಚಿಕಿತ್ಸೆಗೆ ದಾಖಲಾಗುತ್ತಾರೆ ಮೂಳೆ ಮುರಿತದ ಆಪರೇಷನ್ ಮಾಡಿಸಲು ಮೂಳೆ ವೈದ್ಯರಾದ ಡಾ:ಚಂದನ್ ಎಂಬುವರು ನಿಯಮಬಾಹಿರವಾಗಿ ಖಾಸಗಿ ವ್ಯಕ್ತಿಯೊಬ್ಬನಿಂದ ಸಾಮಗ್ರಿ ತರಿಸಿ ಬಡ ರೋಗಿಗೆ 10500/- ಸಾವಿರ ಹಣ ನೀಡಲು ಒತ್ತಾಯಿಸಿ ಈಗಾಗಲೇ ಎರಡು ಸಾವಿರ ರೂಪಾಯಿಗಳನ್ನು ಫೋನ್ ಪೇ ಮೂಲಕ ಪಡೆದಿರುವುದು ಆರೋಗ್ಯ ಇಲಾಖೆ, ಆರೋಗ್ಯ ಸಚಿವರ ಆದೇಶಗಳನ್ನು ಉಲ್ಲಂಘಿಸಿದಂತಾಗಿದೆ.

 

ಈ ವಿಷಯದಲ್ಲಿ ಖಾಸಗಿ ವ್ಯಕ್ತಿಯಿಂದ ಉಪಕರಣ ಸಾಮಗ್ರಿ ತರಿಸಿಕೊಂಡಿರುವುದನ್ನು ತುಮಕೂರಿನ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರವರೊಂದಿಗೆ ಸಾಮಾಜಿಕ ಹೋರಾಟಗಾರನಾದ ಹಂದ್ರಾಳ್ ನಾಗಭೂಷಣ್ ರವರು ದೂರವಾಣಿಯೊಂದಿಗೆ ಮಾತನಾಡಿದಾಗ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ Implant ನ ಟೆಂಡರ್ ಮುಗಿದಿದ್ದು ಮುಂದಿನ ದಿನಗಳಲ್ಲಿ ಟೆಂಡರ್ ಕರೆಯಲಾಗುತ್ತಿದೆ ಆದ ಕಾರಣ ಈ ಹಿಂದೆ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸುತ್ತಿದ್ದ ವ್ಯಕ್ತಿಯಿಂದಲೇ ಈಗ ನಾವು ತರಿಸಿಕೊಳ್ಳುತ್ತಿದ್ದೇವೆ ಈ ವ್ಯಕ್ತಿಯೇ ಎಲ್ಲಾ ಏಜೆನ್ಸಿಗಳಿಗಿಂತ ಕಡಿಮೆ ಧರದಲ್ಲಿ ನೀಡುವುದು ಎಂದು ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕರಾದ ಅಸ್ಗರ್ ಬೇಗ್ ರವರು ಸಮರ್ಥನೆ ಮಾಡಿಕೊಂಡಿರುವುದು ಮೂಳೆ ವೈದ್ಯರ, ಜಿಲ್ಲಾ ಶಸ್ತ್ರ ಚಿಕಿತ್ಸಕರ ದುರ್ನಡತೆ, ಕರ್ತವ್ಯಲೋಪದ ಜೊತೆಗೆ ABARK ಯೋಜನೆಯನ್ನು ತುಮಕೂರು ಜಿಲ್ಲಾಸ್ಪತ್ರೆ ಸಂಪೂರ್ಣ ಉಲ್ಲಂಘನೆ ಮಾಡಿದಂತಾಗಿದೆ ಎಂದು ತುಮಕೂರು ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಹಂದ್ರಾಳ್ ನಾಗಭೂಷಣ್ ಅವರು ಆರೋಪ ಮಾಡಿದ್ದಾರೆ.

 

 

 

ಪ್ರಸ್ತುತ ಸದರಿ ರೋಗಿಯು ಆಸ್ಪತ್ರೆಯಲ್ಲೇ ಒಳರೋಗಿಯಾಗಿದ್ದು ರೋಗಿ ಕಡೆಯವರಿಗೆ ವಾರ್ಡ್ ನ ಸಿಬ್ಬಂದಿಗಳು ಉಳಿದ ರೂ. 8500 ಹಣ ಕಟ್ಟಿ ಡಿಸ್ಛಾರ್ಜ್ ಮಾಡಿಸಿಕೊಂಡು ಹೋಗಿ ಈ ಬಗ್ಗೆ ಮೂಳೆ ವೈದ್ಯರಾದ ಚಂದನ್ ರವರ ಜೊತೆ ಮಾತನಾಡಿ ಎಂದು ಹೇಳುತ್ತಿದ್ದಾರೆ.ರೋಗಿಯ ಕಡೆಯವರು ಕಡುಬಡವರಾಗಿದ್ದು ಬಿಪಿಎಲ್ ವರ್ಗಕ್ಕೆ ಸೇರಿದವರಾಗಿದ್ದು ಉಳಿಕೆ ಹಣ ಕಟ್ಟಲು ಆಗದೆ ಜಿಲ್ಲಾಸ್ಪತ್ರೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಎಲ್ಲವುಗಳನ್ನು ಗಮನಿಸಿದರೆ ಸರ್ಕಾರಗಳು ಬಡ ಜನತೆಗೆ ಕೇವಲ ನೆಪ ಮಾತ್ರಕ್ಕೆ ಆರೋಗ್ಯ ಸೇವೆ ಸಂಪೂರ್ಣ ಉಚಿತ ಎಂದು ಹೇಳಿರುವಂತೆ ಕಾಣುತ್ತಿದೆ

 

 

 

ಯೋಜನೆ ಬಗ್ಗೆ ಆರೋಗ್ಯ ಸಚಿವ ಸ್ಪಷ್ಟನೆ

 

 

AB – ark ಅನುದಾನದಿಂದ ಸ್ವಂತ ಬಲದಲ್ಲಿಯೇ ಸರ್ಕಾರಿ ಆಸ್ಪತ್ರೆಗಳು ಕಾರ್ಯನಿರ್ವಹಿಸುವತ್ತ ಹೆಚ್ಚಿನ ಗಮನ ಹರಿಸಬೇಕು – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಆಯುಷ್ಮಾನ್ ಆರೋಗ್ಯ ಕರ್ನಾಟಕದಡಿ ಅನುದಾನ ನೀಡುವ ಉದ್ದೇಶವೇ ಸರ್ಕಾರಿ ಆಸ್ಪತ್ರೆಗಳನ್ನ ಸದೃಢಗೊಳಿಸುವುದು. ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಒದಗಿಸುವ ಆರೋಗ್ಯ ಸೇವೆಗಳಿಗೂ ಸರ್ಕಾರ ಅನುದಾನ ನೀಡುತ್ತಿದೆ. ಸರ್ಕಾರಿ ಆಸ್ಪತ್ರೆಗಳು ಉತ್ತಮ ಚಿಕಿತ್ಸೆ ನೀಡುವ ಮೂಲಕ ಈ ಅನುದಾನವನ್ನ ಹೆಚ್ಚಿನ ರೀತಿಯಲ್ಲಿ ಸೃಜಿಸಿಕೊಳ್ಳುವ ಮೂಲಕ ತಮಗೆ ಸಿಗುವ ಅನುದಾನದಲ್ಲೇ ಆಸ್ಪತ್ರೆ ನಡೆಸಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.

 

ABARKಅನುದಾನವನ್ನ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮುಂದಾಗಬೇಕು ಎಂದು ಸೂಚಿಸಿದರು. ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಿಗೆ ಅನುದಾನ ನೀಡುವ ರೀತಿಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗು ಅನುದಾನ ನೀಡುತ್ತಿದ್ದೇವೆ. ನೀವು ಉತ್ತಮ ಚಿಕಿತ್ಸೆ ನೀಡಿದರೆ ಖಾಸಗಿ ಆಸ್ಪತ್ರೆಯ ರೀತಿಯಲ್ಲಿಯೇ ಸರ್ಕಾರಿ ಆಸ್ಪತ್ರೆಗಳು ಸ್ವಂತ ಬಲದಲ್ಲಿ ಆರೋಗ್ಯ ಸೇವೆ ಒದಗಿಸಬಹುದು. ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಂದು ಸಿಜರಿನ್ ಮಾಡುತ್ತಿವೆ. ಸರ್ಜರಿಗಳನ್ನ ನಡೆಸುತ್ತಿವೆ. ಇದು ಇತರ ಸರ್ಕಾರಿ ಆಸ್ಪತ್ರೆಗಳಿಗೆ ಮಾದರಿಯಾಗಬೇಕು, ಸರ್ಕಾರಿ ಆಸ್ಪತ್ರೆಗಳಿಗೆ ನಾವು ಚಿbಚಿಡಿಞ ಅನುದಾನ ನೀಡವುದೇ ನಿಮ್ಮ ಸ್ವಂತ ಬಲದಲ್ಲಿ ಆಸ್ಪತ್ರೆ ನಡೆಸುವಂತಾಗಲಿ ಎಂಬ ಉದ್ದೇಶದಿಂದ.. ಇಲ್ಲವಾದರೆ ಸರ್ಕಾರಿ ಆಸ್ಪತ್ರೆಗಳಿಗೆ ನಾವು ಏಕೆ ಆಯುಷ್ಮಾನ್ ಯೋಜನೆಯಡಿ ಹಣ ನೀಡಬೇಕು. ಸರ್ಕಾರಿ ಆಸ್ಪತ್ರೆಗಳು ಚಿbಚಿಡಿಞ ಅನುದಾನವನ್ನ ಸಮರ್ಪಕವಾಗಿ ಬಳಸದಿದ್ದರೆ ಸದನ್ನ ಇಲಾಖೆ ತನ್ನ ಬಳಿಯೇ ಇಟ್ಟುಕೊಳ್ಳಬೇಕಾಗುತ್ತದೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಬಗ್ಗೆ ಪ್ರಗತಿಪರಿಶೀಲನಾ ಸಭೆಯಲ್ಲಿ ಹೆಚ್ಚಿನ ಚರ್ಚೆ ನಡೆಸಬೇಕು. ಗುಣಮಟ್ಟದ ಆರೋಗ್ಯ ಸೇವೆ ಜನರಿಗೆ ತಲುಪುವಂತಾಗಬೇಕು ಎಂದು ಸಚಿವರು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!