ನ್ಯಾಯ ಕೇಳಲು ಬಂದ ಪೋಷಕರ ಮೇಲೆ ಧರ್ಪಮೆರೆದ ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಲಾ

ತುಮಕೂರು ತಾಲ್ಲೂಕು ಬೆಳಧರ ಸರ್ಕಾರಿ ಶಾಲೆ ಕಾಂಪೌಂಡ್ ನಿರ್ಮಾಣಕ್ಕೆ ಆಗ್ರಹಿಸಿ ಶಾಲಾ ಮಕ್ಕಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಲಾ ಪೋಷಕರ ಮೇಲೆ ದರ್ಫ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ.

 

ಸರ್ಕಾರಿ ಶಾಲೆ ಕಾಂಪೌಂಡ್ ನಿರ್ಮಾಣಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳೇ ಮುಂದಾಗುತ್ತಿಲ್ಲ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದರೆ ಇದೇ ರೀತಿ ಕ್ರಮ ಜರುಗಿಸುತ್ತೀರ ಎಂದು ಪೋಷಕರೊಬ್ಬರು ಆಕ್ರೋಷ ವ್ಯಕ್ತಪಡಿಸಿದಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹನೆಯಿಂದ ಉತ್ತರಿಸುವ ಬದಲು ಪೋಷಕರ ಮೇಲೆ ಕೋಪಗೊಂಡು ‘ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡುತ್ತೀರ ಪೋಲೀಸ್ ಬರಹೇಳಿ ಇವರ ವಿರುದ್ದ ಕ್ರಮ ಜರುಗಿಸಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು,ಕ್ಷೇತ್ರ ಶಿಕ್ಷಣಾಧಿಕಾರಿ ವರ್ತನೆಗೆ ಸ್ತಳದಲ್ಲಿದ್ದ ಪೋಷಕರು,ಗ್ರಾಮಸ್ತರು,ಹಾಗೂ ವಕೀಲರು ಕಿಡಿಕಾರಿದರು.

Leave a Reply

Your email address will not be published. Required fields are marked *

error: Content is protected !!