ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರೈಲ್ವೆ ನಿಲ್ದಾಣ ತುಮಕೂರು ಇಲ್ಲಿರುವ ’ಭಗತ್ ಕಿಂಗ್ ರೋವರ್ ಕ್ರ್ಯೂ’ನ ಲೀಡರ್ ಸೂರ್ಯ ಕುಮಾರ್ ಎಸ್., ಪ್ರಾಂಶುಪಾಲರಾದ ತರುಣಂ ನಿಕತ್, ರೇಂಜರ್ ಲೀಡರ್ ಆದ ರೇಣುಕಾ ಡಿ ಆರ್, ರೋವರ್ ಲೀಡರ್ ಆದ ಮಲ್ಲೇಶಪ್ಪ ಟಿ.ಎಸ್ ಹಾಗೂ ಜಿಲ್ಲಾ ಸಂಘಟಕರಾದ ನವೀನ್ ಇವರುಗಳು ಜೂನ್ 9 ರಂದು ತುಮಕೂರಿನಿಂದ ಹೊರಟು ತಿಪಟೂರು, ಹಾಸನ, ಚಿಕ್ಕಮಗಳೂರು, ಬೇಲೂರು ಹಳೇಬೀಡು, ಅರಸೀಕೆರೆ ಈ ಸ್ಥಳಗಳಿಗೆ ಸೈಕಲ್ ಜಾಥಾಕ್ಕೆ ಮಾಡಿ ಮರಳಿ ಜೂನ್ 14 ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು ಇಲ್ಲಿಗೆ ವಾಪಸ್ಸು ಬಂದಿರುತ್ತಾರೆ.
ತಮ್ಮ ಜಾಥಾ ಮಾಡಿದ ಸ್ಥಳಗಳಲ್ಲಿನ ಯುವಕರು, ವಿದ್ಯಾರ್ಥಿಗಳು, ಹಾಲಿನ ಡೈರಿ, ಜಿಲ್ಲಾಧಿಕಾರಿಗಳ ಕಚೇರಿ, ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ, ವಿವಿಧ ಪೊಲೀಸ್ ಠಾಣೆಗಳು, ತಾಲ್ಲೂಕು ಕಛೇರಿಗಳು, ಸರ್ಕಾರಿ ಕಛೇರಿಗಳು, ಅಂಚೆ ಇಲಾಖೆ ಸೇರಿದಂತೆ ಶಾಲಾ ಕಾಲೇಜುಗಳಿಗೆ ಬೇಟಿ ನೀಡಿ ನಾವು ಕಟ್ಟುವ ತೆರಿಗೆ ಹಣದಿಂದ ಸರ್ಕಾರ ಹೇಗೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತದೆ, ರಸ್ತೆ ನಿರ್ಮಾಣ, ಅರಣ್ಯ ನಿರ್ಮಾಣ, ಕೃಷಿ ಚಟುವಟಿಕೆ, ನೀರಾವರಿ, ಶಿಕ್ಷಣ ಸೇರಿದಂತೆ ಜನರ ಅವಶ್ಯಕೆತೆಗಳಿಗನುಗಣವಾಗಿ ಮೂಲಭೂತ ಸೌಕರ್ಯಗಳಿಗೆ ಹಣವಿನಿಯೋಗ ಮಾಡುತ್ತದೆ. ನಾವು ಜವಾಬ್ದಾರಿತ ನಾಗರೀಕರಾಗಿ ನಮ್ಮದೇ ಹಣದಿಂದ ನಿರ್ಮಾಣ ಮಾಡಿರುವ ಇವುಗಳೆಲ್ಲವನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುವುದರ ಜೊತೆಗೆ ತೆರಿಗೆ ಹಣ ಪೋಲಾಗದಂತೆ ನೋಡಿಕೊಳ್ಳಬೇಕು. ನಮ್ಮ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವಾಗಿಟ್ಟುಕೊಳ್ಳಬೇಕು ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡಿಕೊಳ್ಳುವುದರ ಮೂಲಕ ಪರಿಸರವನ್ನು ಸಂರಕ್ಷಣೆ ಮಾಡಬೇಕೆಂದು ಅರಿವು ಮೂಡಿಸಿಕೊಂಡು ಬಂದಿರುತ್ತಾರೆ.
ಮಕ್ಕಳು ಸೈಕಲ್ ಜಾಥವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬಂದ ಪ್ರಯುಕ್ತ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗದವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಜಾಥಾದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಾದ ಲೀಡರ್ ರ್ಸೂರ್ಯಕುಮಾರ್ ಎಸ್, ತೇಜಸ್ವಿ ಸಿ, ಯಶ್ವಂತ್ ಪಿ, ಪ್ರಶಾಂತ್ ಎಂ, ಪುನೀತ್ ಟಿ.ಜಿ, ಪವನ್.ಎಸ್, ಮಣಿಕಂಠ ಎಸ್.ಜೆ, ವಿನೋದ್ ಕೊಲಕಿ, ಭಾಗವಹಿಸಿದ್ದರು.