ಮಾರಿಯಮ್ಮ ದೇವಿ ತಾಯಿಯ ಜಾತ್ರಾ ಮಹೋತ್ಸವ

ತುಮಕೂರು ನಗರದ ಹೃದಯ ಭಾಗದಲ್ಲಿರುವ ಮಾರಿಯಮ್ಮ ನಗರ ಬಾಳನಕಟ್ಟೆ, ಮಂಡಿಪೇಟೆಯ ಮಾರಿಯಮ್ಮ ದೇವಿ ತಾಯಿಯ ಜಾತ್ರಾ ಮಹೋತ್ಸವವನ್ನು ಮಾರಿಯಮ್ಮ ಯುವಕ ಸಂಘದಿಂದ 61ನೇ ವರ್ಷದ ಜಾತ್ರಾ ಮಹೋತ್ಸವನ್ನು ದಿನಾಂಕ:25-6-2024 ಮಂಗಳವಾರ ದಿಂದ ದಿನಾಂಕ:27-6-2024 ಗುರುವಾರದರವರಗೆ ಹಮ್ಮಿಕೊಳ್ಳಲಾಗಿದೆ. ಈ ಜಾತ್ರಾ ಮಹೋತ್ಸವದ ಮೊದಲನೇ ದಿನ ಅಂದರೇ ದಿನಾಂಕ:25-6-2024 ಮಂಗಳವಾರ ಬೆಳಗ್ಗೆ 7 ಗಂಟೆಗೆ ಕರಗವನ್ನು ಅಮಾನಿಕೆರೆಯಿಂದ ಪೂಜಿಸಿ ಮೆರವಣಿಗೆಯೊಂದಿಗೆ ಅಂಬಲಿ ಸೇವೆಯನ್ನು ನಡೆಸಿ,

 

 

 

ದಿನಾಂಕ:26-6-2024 ಬುಧವಾರ ಮಧ್ಯಾಹ್ನ 1:30ಕ್ಕೆ ನಗರದ ರಾಜಬೀದಿಗಳಾದ ಮಂಡಿಪೇಟೆ, ಬಿ.ಜಿ ಪಾಳ್ಯ ಸರ್ಕಲ್, ಟೌನ್‍ಹಾಲ್ (ಬಿ.ಜಿ.ಸರ್ಕಲ್) ಎಂ.ಜಿ ರಸ್ತೆ ಮುಖಾಂತರ ಚರ್ಚ್ ಸರ್ಕಲ್ ರವರೆಗೆ ವಿವಿಧ ಸಾಂಸ್ಕøತಿಕ ಕಲಾಪ್ರಕಾರಗಳೊಂದಿಗೆ ಮಾರಿಯಮ್ಮ ದೇವಿಯ ಉತ್ಸವವನ್ನು ಆಯೋಜಿಸಲಾಗಿದೆ ಹಾಗೂ ದಿನಾಂಕ: 27-6-2024 ರಂದು ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಅನ್ನಸಂತರ್ಪಣೆಯನ್ನು ಮಾರಿಯಮ್ಮ ನಗರದಲ್ಲಿ ಏರ್ಪಡಿಸಲಾಗಿದೆ. ಈ ಜಾತ್ರಾ ಮಹೋತ್ಸವಕ್ಕೆ ಘನ ಉಪಸ್ಥಿತಿಯನ್ನು ಶ್ರೀ ಸೋಮಣ್ಣನÀವರು ಸಂಸದರು.ತುಮಕೂರು ಹಾಗೂ ರಾಜ್ಯ ಸಚಿವರು,ಜಲಶಕ್ತಿ ಮತ್ತು ರೈಲ್ವೆ ಖಾತೆ ಭಾರತ ಸರ್ಕಾರ ಹಾಗೂ ತುಮಕೂರು ನಗರ ಶಾಸಕರಾದ ಜ್ಯೋತಿಗಣೇಶ್‍ರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ಅಶ್ವಿಜರವರು, ನಗರ ಪೋಲಿಸ್ ಉಪಅಧೀಕ್ಷಕರಾದ ಶ್ರೀ ಚಂದ್ರಶೇಖರ್, ತುಮಕೂರು ಕೊಳಗೇರಿ ಸಮಿತಿ ಅಧ್ಯಕ್ಷರಾದ ಎ.ನರಸಿಂಮೂರ್ತಿ, ಮಾಜಿ ಪಾಲಿಕೆ ಸದಸ್ಯರಾದ ಎಂ.ಪಿ ಮಹೇಶ್, ಕಾಂಗ್ರೇಸ್ ಮುಖಂಡರಾದ ಜಿಯಾಉಲ್ಲಾ ತುಮಕೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯರಾದ ವಿನಯ್‍ಜೈನ್, ನಗರ ಠಾಣೆ ಪಿಎಸ್‍ಐ ದಿನೇಶ್‍ಕುಮಾರ್, 3ನೇ ವಾರ್ಡ್‍ನ ಮಾಜಿ ನಗರ ಪಾಲಿಕೆ ಸದಸ್ಯರಾದ ಲಕ್ಷ್ಮೀನರಸಿಂಹರಾಜ್, ಸ್ಲಂ ಸಮಿತಿಯ ಗೌರವಧ್ಯಕ್ಷರಾದ ದೀಪಿಕಾ ಮುಂತಾದವರು ಪಾಲ್ಗೊಳ್ಳಲಿದ್ದು 2 ಸಾವಿರಕ್ಕೂ ಅಧಿಕ ಭಕ್ತಾಧಿಗಳು ಭಾಗವಹಿಸಿ ಶ್ರೀ ಮಾರಿಯಮ್ಮ ದೇವಿಯ ಸೇವೆ ನಡೆಸಲಿದ್ದಾರೆ

Leave a Reply

Your email address will not be published. Required fields are marked *

error: Content is protected !!