ಯೋಗದಿಂದ ರೋಗಮುಕ್ತರಾಗಿ : ಶ್ರೀಮತಿ ಸುನೀತಾ ದುಗ್ಗಲ್

 

ತುಮಕೂರು : ತುಮಕೂರಿನ ಊರುಕೆರೆಯಲ್ಲಿರುವ ಜೈನ್ ಪಬ್ಲಿಕ್ ಶಾಲೆಯಲ್ಲಿ ಯೋಗ ದಿನಾಚರಣೆಯ ಅಂಗವಾಗಿ ಶಾಲಾ ಆಡಳಿತ ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

 

 

ವಿಶೇಷವೆಂದರೆ ಈ ಶಾಲೆಯಲ್ಲಿ ಮಕ್ಕಳೊಟ್ಟಿಗೆ ಅವರ ಪೋಷಕರು ಸಹ ಯೋಗ ಮಾಡಿದ್ದು ಬಹು ವಿಶೇಷವಾಗಿತ್ತು. ಇದರೊಂದಿಗೆ ಶಾಲೆಯ ಮುಖ್ಯಶಿಕ್ಷಕಿಯಾದ ಶ್ರೀಮತಿ ಸುನೀತ ದುಗ್ಗಲ್‌ರವರು ಯೋಗದ ಮಹತ್ವ ಮತ್ತು ಅದು ನಡೆದು ಬಂದ ದಾರಿ ಸೇರಿದಂತೆ ಪ್ರತಿನಿತ್ಯ ನಾವು ಯೋಗ ಮಾಡುವುದರಿಂದ ರೋಗ ಮುಕ್ತ ಜೀವನವನ್ನು ನಡೆಸಬಹುದಾಗಿದೆ ಎಂದು ತಿಳಿಸಿದರು, ಜೊತೆಗೆ ಪೋಷಕರು ಸಹ ತಮ್ಮ ಮನೆಯಲ್ಲಿ ಮಕ್ಕಳಿಗೆ ಪ್ರತಿನಿತ್ಯ ಯೋಗಭ್ಯಾಸವನ್ನು ಮಾಡಿಸುವುದನ್ನು ಪರಿಪಾಠ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

 

 

ಮುಂದುವರೆದು ಮಾತನಾಡುತ್ತಾ ನಮ್ಮ ಶಾಲೆಯಲ್ಲಿ ವಾರದಲ್ಲಿ ಒಂದು ದಿನ ಮಕ್ಕಳಿಗೆ ಯೋಗ ತರಬೇತಿಯನ್ನು ನಾವು ನೀಡುತ್ತಾ ಬರುತ್ತಿದ್ದು, ಇದರಿಂದ ಮಕ್ಕಳ ವಿದ್ಯಾಭ್ಯಾಸದಲ್ಲಿ ಚೈತನ್ಯ ಮತ್ತು ಉತ್ಸಾಹ ಬಂದಿರುವುದನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ, ಮಕ್ಕಳು ಅತ್ಯಂತ ಉಲ್ಲಾಸದಿಂದ ಯೋಗ ತರಗತಿಗಳಲ್ಲಿ ಫಾಲ್ಗೊಳ್ಳುತ್ತಿರುವುದು ನಮಗೆ ಸಂತಸಕರ ವಿಷಯವಾಗಿದೆ ಎಂದು ಹೇಳಿದರು.

 

 

ಇನ್ನು ಶಾಲೆಯಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಪೋಷಕರು ಸಹ ಬಹಳ ಆಸಕ್ತಿಯಿಂದ ಯೋಗವನ್ನು ಮಾಡಿದರು. ಇನ್ಮುಂದೆ ತಾವು ಸಹ ತಮ್ಮ ಮಕ್ಕಳೊಂದಿಗೆ ಮನೆಯಲ್ಲಿ ಯೋಗಭ್ಯಾಸವನ್ನು ಮಾಡಿಸುತ್ತೇವೆಂದು ಶಾಲಾ ಶಿಕ್ಷಕರ ಬಳಿ ಹೇಳಿಕೊಂಡರು. ಜೊತೆಗೆ ಜೈನ್ ಶಾಲೆಯು ಮಕ್ಕಳಿಗೆ ಶಿಕ್ಷಣ ಮತ್ತು ಶಿಕ್ಷಣೇತರ ಚಟುವಟಿಕೆಗಳಿಗೆ (ಯೋಗ, ಕರಾಟೆ, ಸ್ಕೇಟಿಂಗ್, ಈಜು, ಇತ್ಯಾದಿ) ಶಿಕ್ಷಣದಷ್ಟೇ ಹೆಚ್ಚಿನ ಮಹತ್ವ ನೀಡುತ್ತಿರುವುದು ಶ್ಲಾಘನೀಯ ಸಂಗತಿ ಎಂದು ಸಹ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

 

 

 

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸುನೀತ ದಗ್ಗಲ್, ಶಾಲಾ ಸಿಬ್ಬಂದಿಗಳಾದ ಬಸವರಾಜು, ಚೇತನ್ ಸೇರಿದಂತೆ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!