ತಿಪಟೂರು : ಶಿಕ್ಷಕರು ಅಧಿಕಾರಕ್ಕೆ ಬಂದರೆ ಮಾತ್ರ ಶಿಕ್ಷಕರ ಅಭಿವೃದ್ಧಿ ಸಾಧ್ಯವಾಗುತ್ತದೆ ಆದ್ದರಿಂದ ಈ ಬಾರಿ ನಡೆಯುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶಿಕ್ಷಕ ವೃತ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾನು ಸ್ವರ್ಧೆ ಮಾಡಿದ್ದು, ಈ ಬಾರಿಯ ಚುನಾವಣೆಯು ಸತ್ಯ-ಅಸತ್ಯ ಮತ್ತು ಧರ್ಮ- ಅಧರ್ಮದ ಯುದ್ಧವಾಗಿದೆ ಎಂದು ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ತಿಳಿಸಿದರು.
ನಗರದ ಖಾಸಗಿ ಹೋಟೆಲ್’ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ನೆಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಮಾತನಾಡುತ್ತಾ ಈ ಬಾರಿ ನಡೆಯುವ ಚುನಾವಣೆಯು ಸತ್ಯ ಅಸತ್ಯ ಮತ್ತು ಧರ್ಮ ಅಧರ್ಮದ ಯುದ್ಧವಾಗಿದೆ. ಬಹು ತೇಕ ಶಿಕ್ಷಕರು ಬಹಳಷ್ಟು ವರ್ಷಗಳಿಂದ ನನ್ನ ಹೋರಾಟವನ್ನು ಗಮನಿಸಿ ತುಂಬು ಅಭಿ ಮಾನ ದಿಂದ ನನ್ನನ್ನು ಚುನಾವಣೆಗೆ ಸ್ಪರ್ಧಿ ಸಲು ಬೆಂಬಲಿಸಿದ್ದಾರೆ. ಈ ಬಾರಿ ರಾಜಕೀಯ ವ್ಯಕ್ತಿಯನ್ನು ಹೊರತುಪಡಿಸಿ ಒಬ್ಬ ಶಿಕ್ಷಕ ಗೆಲುವು ಸಾಧಿಸುವುದು ಖಚಿತ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯ ಣಸ್ವಾಮಿ ವಿರುದ್ಧ ಹರಿ ಹಾಯಿದ ಅವರು ಮೂರು ಬಾರಿ ಚುನಾವಣೆಯಲ್ಲಿ ಶಿಕ್ಷಕರ ಕ್ಷೇತ್ರದಿಂದ ಗೆಲುವು ಸಾಧಿಸಿದ ನಾರಾಯಣ ಸ್ವಾಮಿ ಶಿಕ್ಷಕರ ನಂಬಿಕೆಗೆ ಅರ್ಹರಾದವರಲ್ಲ. ನಾರಾಯಣಸ್ವಾಮಿಗೆ ಶಿಕ್ಷಕರು ಮತ ಹಾಕಿ ಮೋಸ ಹೋಗಿದ್ದೇವೆ. ಶಿಕ್ಷಕರ ಕುಂದು ಕೊರತೆ ಗಳನ್ನು ಮತ್ತು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಾರಾಯಣಸ್ವಾಮಿ ವಿಫಲರಾಗಿದ್ದಾರೆ. ಈ ಬಾರಿ ಆಗ್ನೆಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ವರ್ಥ ಮಾಡಿದ್ದು, ಶಿಕ್ಷಕರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಕೋವಿಡ್ ಬಂದಂ ತಹ ಸಂದರ್ಭದಲ್ಲಿ ಸರಕಾರಿ ಶಾಲಾ ಶಿಕ್ಷಕರಿಗೆ ಕಿಟ್ ನೀಡುವಂತೆ ರಾಜ್ಯ ಸರ್ಕಾರಕ್ಕೆ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಒತ್ತಾಯಿಸಿದ್ದೇನೆ.
ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿ ಯಾಗಿದ್ದ ಸಂಧರ್ಭದಲ್ಲಿ ಸರಕಾರಿ ನೌಕರರು ಹಾಗೂ ಶಿಕ್ಷಕರ ಬಗ್ಗೆ ಅಪಾರವಾದ ಕಾಳಜಿ ಯನ್ನು ಹೊಂದಿದ್ದರು. ಆದರೆ ದುರಾದೃಷ್ಟ ನಾವು ರಾಜಕೀಯ ವ್ಯಕ್ತಿಯನ್ನು ಗೆಲ್ಲಿಸಿ ಮೋಸ ಹೋದೆವು. ನಾರಾಯಣ ಸ್ವಾಮಿಗೆ ಶಿಕ್ಷಕರ ಬಗ್ಗೆ ಕೊಂಚವೂ ಆಸಕ್ತಿ ಇಲ್ಲ. ಸರಕಾರಿ ಶಾಲೆಗಳನ್ನು ಮುಚ್ಚುವಂತಹ ಪರಿಸ್ಥಿತಿಯನ್ನು ಉಂಟಾಗಿದ್ದು, ನಾನೊಬ್ಬ ಶಿಕ್ಷಕನಾಗಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕನಿಷ್ಠ ವಿದ್ಯಾರ್ಥಿಗಳು ಇರುವ ಸರಕಾರಿ ಶಾಲೆಗಳನ್ನು ಮುಚ್ಚಬಾರದು. ಪರಿಷತ್ತಿನ ಈ ಸದಸ್ಯರು ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿ ಕ ಅಭಿವೃದ್ಧಿ ಮತ್ತು ಎಲ್ಲಾ ವರ್ಗದ ಜನರನ್ನು ಒಳಗೊಳ್ಳುವ ಸುಸ್ಥಿರ ಕರ್ನಾಟಕವನ್ನು ಕಟ್ಟಿ ಕೊಡುವ ಜವಾಬ್ದಾರಿಯನ್ನು ನಿರ್ವಹಿಸ ಬೇಕಾಗಿತ್ತು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೃಷ್ಣಮೂರ್ತಿ, ಮಲ್ಲೇಶ್, ರೇಣುಕಯ್ಯ ಮತ್ತು ಲೋಕೇಶ್ ತಾಳಿ ಕಟ್ಟೆ ಬೆಂಬಲಿಗರು ಉಪಸ್ಥಿತರಿದ್ದರು.