ತುಮಕೂರು : ಮುಂಬರುವ ಜೂನ್ 3 ರಂದು ನಡೆಯಲಿರುವ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಲೋಕೇಶ್ ತಾಳಿಕಟ್ಟೆರವರು ಪಕ್ಷೇತರ (ಸ್ವತಂತ್ರ) ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ, ಲೋಕೇಶ್ ತಾಳಿಕಟ್ಟೆಯವರು ತಮ್ಮ ಸ್ವಾರ್ಥ ಸಾಧನೆಗಾಗಿ ನಿಲ್ಲದೇ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲೆಂದೇ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ಎಂದು ಭೂತರಾಜು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಭೂತರಾಜು ಅವರು ಮಾತನಾಡುತ್ತಾ ಲೋಕೇಶ್ ತಾಳೆಕಟ್ಟೆರವರು ರೂಪ್ಸಾ ಸಂಘಟನೆಯ ಮೂಲಕ ಶಿಕ್ಷಕರ ಹಲವಾರು ಸಮಸ್ಯೆಗಳನ್ನು ನಿರಾಯಾಸಮಾನವಾಗಿ ಬಗೆಹರಿಸುತ್ತಾ ಬರುತ್ತಿದ್ದಾರೆ, ಜೊತೆಗೆ ಅವರು ತಮ್ಮ ವೈಯುಕ್ತಿಕವಾಗಿಯೂ ಸಹ ಶಿಕ್ಷಕರ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದಂತಹ ವ್ಯಕ್ತಿ, ಇಂತಹ ವ್ಯಕ್ತಿ ಈ ಚುನಾವಣೆಯಲ್ಲಿ ಗೆದ್ದು ಬಂದರೇ 100ಕ್ಕೆ 100 ಶಿಕ್ಷಕರ ಸಮಸ್ಯೆಗಳನ್ನು ಈಡೇರಿಸುತ್ತಾರೆಂಬ ಭರವಸೆಯನ್ನು ಹೊರ ಹಾಕಿದರು.
ಕಳೆದ 18 ವರ್ಷಗಳಿಂದ ಈ ಕ್ಷೇತ್ರದಿಂದ ಪ್ರತಿನಿಧಿಸುತ್ತಿರುವವರು ಶಿಕ್ಷಕರಿಗಾಗಿ ಏನು ಮಾಡಿದ್ದಾರೆ? ಅವರು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇ ಆಗಿದ್ದರೇ ಶಿಕ್ಷಕರು ತಮ್ಮ ಸಮಸ್ಯೆಗಳನ್ನು ಬೀದಿಯಲ್ಲಿ ನಿಂತು ಮಾತನಾಡುವ ಪ್ರಮೇಯವೇ ಬರುತ್ತಿರಲಿಲ್ಲ, ಅಂತಹದರಲ್ಲಿ ತಾನು ಶಿಕ್ಷಕರಿಗೇ ಹಾಗೇ ಮಾಡಿದ್ದೇನೇ, ಹೀಗೆ ಮಾಡಿದ್ದೇನೆಂದು ಸುಮ್ಮನೆ ಮಾತನಾಡಿಕೊಂಡು ಓಡಾಡುತ್ತಿದ್ದಾರೆ ವಿನಃ, ಅವರ ಸಾಧನೆ ಶೂನ್ಯ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮುಂದುವರೆದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿರುವ ಡಿ.ಟಿ.ಶ್ರೀನಿವಾಸ್ ಅವರಿಗೆ ಶಿಕ್ಷಕರ ಸಮಸ್ಯೆಗಳು ಏನು ಎಂಬುದೇ ಅರಿವಿಲ್ಲ, ಅವರು ಹೇಗೆ ತಾನೇ ಶಿಕ್ಷಕರ ಸಮಸ್ಯೆಗಳನ್ನು ನಿವಾರಿಸಬಲ್ಲರು ಎಂಬ ಬಹುದೊಡ್ಡ ಪ್ರಶ್ನೆ ನಮ್ಮದಾಗಿದೆ, ಜೊತೆಗೆ ಅವರ ಕುಟುಂಬದ ಒಡೆತನದಲ್ಲಿರುವ ಶಿಕ್ಷಣ ಸಂಸ್ಥೆಗಳನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳಸಿಕೊಳ್ಳಬೇಕು ಎಂಬ ದುರುದ್ದೇಶವನ್ನು ಇಟ್ಟುಕೊಂಡೇ ಚುನಾವಣೆಗೆ ನಿಂತಿರಬಹುದು ಎಂಬ ಸಂಶಯ ನಮ್ಮಲ್ಲಿ ಕಾಡುತ್ತಿದೆ ಎಂದು ಹೇಳಿದರು.
ಲೋಕೇಶ್ ತಾಳಿಕಟ್ಟೆಯವರು ಸ್ವಯಂ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ, ಶಿಕ್ಷಕರ ನೋವು ನಲಿವುಗಳಿಗೆ ಸ್ಪಂದಿಸುತ್ತಾ, ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಶಿಕ್ಷಕರ ಬೆನ್ನೆಲುಬಾಗಿ ನಿಂತಿರುವ ಏಕೈಕ ನಾಯಕನಾಗಿದ್ದಾರೆ, ಇಂತಹವರಿಗೆ ಶಿಕ್ಷಕರಾದ ನಾವುಗಳು ಮೊದಲ ಪ್ರಶಾಸ್ತ್ಯ ಮತವನ್ನು ಈ ಚುನಾವಣೆಯಲ್ಲಿ ನೀಡುವುದರ ಮೂಲಕ ಅವರ ಬೆಂಬಲಕ್ಕೆ ನಿಲ್ಲಬೇಕಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.