ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಸ್ ಐ ಟಿ, ಎಸ್ ಎಸ್ ಪುರಂ ಕಡೆಯಿಂದ ಶೆಟ್ಟಿಹಳ್ಳಿ ಕಡೆ ಹೋಗುವ ಶೆಟ್ಟಿಹಳ್ಳಿ ಅಂಡರ್ ಪಾಸ್ ಮೇಲಭಾಗದಲ್ಲಿ ಬಿರುಕು ಬಿಟ್ಟು ಕುಸಿತವಾಗಿದೆ ಇದರ ಪರಿಣಾಮ ಜನರಲ್ಲಿ ಆತಂಕ ವ್ಯಕ್ತವಾಗಿದೆ

ತುಮಕೂರು ನಗರದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಸಾಕಷ್ಟು ರಸ್ತೆಗಳು ಬಿರುಕು ಬಿಟ್ಟಿರುವುದು ರಸ್ತೆಯಲ್ಲಿಯೇ ನೀರು ನಿಂತು ಹೊಂಡದಂತೆ ಆಗಿರುವುದು ಒಂದು ಕಡೆ ಆದರೆ ತುಮಕೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕಾಮಗಾರಿ ಹಂತದಲ್ಲಿವೆ ಜೊತೆಗೆ ನಗರದಲ್ಲಿ ಸ್ವಲ್ಪ ಮಳೆ ಬಂದರೆ ಸಾಕು ಮುಖ್ಯ ರಸ್ತೆಗಳು ಹೊಂಡ ಮತ್ತು ಕೆರೆ ರೂಪ ತಾಳುತ್ತವೆ ಇದರ ನಡುವೆ ಇದೀಗ ಶೆಟ್ಟಿಹಳ್ಳಿ ಅಂಡರ್ ಪಾಸ್ ಮೇಲಸೇತುವೆ ಮೇಲೆ ಕುಸಿತ ಪರಿಣಾಮದಿಂದ ಈ ಭಾಗದಲ್ಲಿ ಓದಾಡುವ ಜನರು ತಮ್ಮ ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಓದಾಡುವ ಪರಿಸ್ಥಿತಿ ಬಂದಿದೆ

ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ಗಮನ ಹರಿಸಿದರೆ ಜನರು ನಿಟ್ಟುಸಿರು ಬಿಡಬಹುದು