ತುಮಕೂರು : ಇತ್ತೀಚಿಗೆ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಬರೆದಿದ್ದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ, ಯಾಕೆಂದರೆ ಮೆಡಿಕಲ್ ಸೀಟ್ ಪಡೆಯಲು ನೀಟ್ ಪರೀಕ್ಷೆ ಸಹ ಅತ್ಯವಶ್ಯಕವಾಗಿದ್ದು ಯಾವ ವಿದ್ಯಾರ್ಥಿ ಸಿಇಟಿ ಪೋರ್ಟಲ್‌ನಲ್ಲಿ ನೊಂದಾಯಿಸಿಕೊಳ್ಳದೇ ಏಕಾಏಕಿ ನೀಟ್ ಪರೀಕ್ಷೆಯನ್ನು ಎದುರಿಸಿರುತ್ತಾರೋ ಅವರಿಗೆ ಮೆಡಿಕಲ್ ಸೀಟ್ ಹಂಚಿಕೆಯನ್ನು ಮಾಡಲು ಆಗುವುದಿಲ್ಲ ಎಂದು ರಾಜ್ಯ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ, ಇದರಿಂದ ನೀಟ್ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆಂದು ರೂಪ್ಸಾ ಅಧ್ಯಕ್ಷರು ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ್ಯ ಅಭ್ಯರ್ಥಿಯಾಗಿರುವ ಲೋಕೇಶ್ ತಾಳಿಕಟ್ಟೆಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಸುತ್ತೋಲೆಯ ವಿರುದ್ಧ ಆಕ್ರೋಶ ಹೊರ ಹಾಕಿರುವ ಲೋಕೇಶ್ ತಾಳಿಕಟ್ಟೆಯವರು ಸರ್ಕಾರ ನೀಟ್ ಹಾಗೂ ಸಿಇಟಿ ಪರೀಕ್ಷೆಯನ್ನು ನಡೆಸುವ ಮೊದಲೇ ಈ ರೀತಿಯಾದ ಸುತ್ತೋಲೆಯನ್ನು ಹೊರಡಿಸಿದ್ದರೇ ಮಕ್ಕಳು ಸಿಇಟಿ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು ಸಿಇಟಿ ಪರೀಕ್ಷೆಯನ್ನು ಸಹ ಬರೆಯುತ್ತಿದ್ದರು, ಆದರೆ ಅವರು ಆ ರೀತಿ ಮಾಡದೇ ಇದೀಗ ಏಕಾಏಕಿ ಈ ರೀತಿಯಾದ ಸುತ್ತೋಲೆ ಹೊರಡಿಸಿರುವುದು ಅವೈಜ್ಞಾನಿಕವಾಗಿದೆ ಜೊತೆಗೆ ಸಿಇಟಿ ಬೋರ್ಡ ಮಕ್ಕಳ ಮೇಲೆ ಈ ರೀತಿಯಾದ ಚೆಲ್ಲಾಟ ಯಾಕೆ ಆಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮುಂದುವರೆದು ಈಗಗಾಲೇ ಹಲವಾರು ವಿದ್ಯಾರ್ಥಿಗಳು ಕಳೆದ ವರ್ಷ ಸರಿಯಾದ ಅಂಕ ಬಂದಿಲ್ಲ, ತಮಗೆ ಸೀಟ್ ದೊರೆಯಲಿಲ್ಲವೆಂದು ಒಂದು ವರ್ಷ ಮೆಡಿಕಲ್ ವ್ಯಾಸಂಗ ಮಾಡದೇ ಸುದೀರ್ಘ ಅಧ್ಯಯನ ಮಾಡಿ ಮತ್ತೋಮ್ಮೆ ನೀಟ್ ಪರೀಕ್ಷೆಯನ್ನು ಬರೆದು ಈ ವರ್ಷವಾದರೂ ತಮಗೆ ಸೀಟ್ ದೊರೆಯಲಿ ಎಂದು ಕಾತುರದಿಂದ ಕಾಯುತ್ತಿದ್ದಾರೆ, ಅಂತಹ ವಿದ್ಯಾರ್ಥಿಗಳಿಗೆ ಇದೀಗ ಆಘಾತವುಂಟಾಗಿದೆ, ಜೊತೆಗೆ ಸಿಇಟಿ ಪರೀಕ್ಷೆ ಸಮಯದಲ್ಲಿಯೂ ಸಹ ಅನ್ಯ ಪಠ್ಯಕ್ರಮದ ಪ್ರಶ್ನೆಗಳನ್ನು ಸಿಇಟಿ ಪರೀಕ್ಷೆಯಲ್ಲಿ ಮಕ್ಕಳಿಗೆ ಅದರಲ್ಲೂ ಗೊಂದಲವುಂಟಾ ಮಾಡಿತ್ತು, ನಂತರ ಅದೀಗ ಬಗೆ ಹರಿದಿದೆ, ಆದರೆ ಇದೀಗ ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಸುತ್ತೋಲೆ ಮಕ್ಕಳ ಭವಿಷ್ಯದ ಮೇಲೆ ಚೆಲ್ಲಾಟ ಆಡುತ್ತಿದೆ, ಆದುದರಿಂದ ಆದಷ್ಟು ಶೀಘ್ರವಾಗಿ ಈ ಕುರಿತು ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.