ತುಮಕೂರು : ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಲೋಕೇಶ್ ತಾಳಿಕಟ್ಟೆಯವರು ಇಂದು ಬೆಂಗಳೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಲೋಕೇಶ್ ತಾಳಿಕಟ್ಟೆಯವರು ನಾಮಪತ್ರ ಸಲ್ಲಿಸಿದ್ದರಿಂದ ತ್ರಿಕೋನ ಸ್ಪರ್ಧೆಗೆ ಆಗ್ನೇಯ ಶಿಕ್ಷಕರ ಕೇತ್ರ ಹಣಿಯಾಗಿದ್ದು, ಇಷ್ಟು ದಿನ ಬೆಂಗಳೂರು, ತುಮಕೂರು ಜಿಲ್ಲೆಯವರೇ ಹೆಚ್ಚಿನದಾಗಿ ಆಯ್ಕೆಯಾಗುವುದರ ಮೂಲಕ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಿಗೆ ಅನ್ಯಾವಾಗಿದ್ದು, ಈ ಬಾರಿ ದಾವಣಗೆರೆ ಜಿಲ್ಲೆಯ ಲೋಕೇಶ್ ತಾಳಿಕಟ್ಟೆ ಚುನಾವಣೆಗೆ ನಿಂತಿದ್ದು ಈ ಬಾರಿ ತುಂಬಾ ಪೈಪೋಟಿಯ ಮೇಲೆ ಚುನಾವಣೆ ನಡೆಯುತ್ತಿದೆ.
ಇಲ್ಲಿಯವರೆವಿಗೂ ಗೆದ್ದಿರುವವರು ಹಣ ಮತ್ತು ಜಾತಿ ಬಲದಿಂದ ಗೆದ್ದು ಶಿಕ್ಷಕರ ಹಲವಾರು ಬೇಡಿಕಗಳಿಗೆ ಸ್ಪಂದಿಸದೇ ಹೋದ-ಪುಟ್ಟ ಬಂದ ಪುಟ್ಟ ಎಂಬಂತೆ ನಡೆದುಕೊಂಡಿದ್ದಾರೆ. ವೈ.ಎ.ನಾರಾಯಣಸ್ವಾಮಿಯವರು ಇತ್ತಿಚಿನ ದಿನಗಳಲ್ಲಿ ಸತತವಾಗಿ ಗೆದ್ದು ಬಂದಿದ್ದರೂ ಶಿಕ್ಷಕರ ಯಾವುದೇ ಸಮಸ್ಯೆಗಳಿಗೆ ಪರಿಹಾರ ಕೊಡಿಸದೆ ವೈಟ್‍ಕಾಲರ್ ರಾಜಕಾರಣಿಯಾಗಿ ಬೆಂಗಳೂರಿನಲ್ಲಿ ಏಸಿ ಕೆಳಗೆ ಕುಳಿತುಕೊಳ್ಳುವವ ಮಹಾರಾಜರು ಎಂದು ಕರೆಸಿಕೊಳ್ಳುತ್ತಿದ್ದಾರೆ.
ಇನ್ನ ಡಿ.ಟಿ.ಶ್ರೀನಿವಾಸ್ ಅವರು ಎಂದೂ ಶಿಕ್ಷಕರಾಗಿಯಾಗಲಿ, ಅಥವಾ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದವರಲ್ಲ, ಯಾರೋ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದವನ್ನು ನಡೆಸುತ್ತಿದ್ದಾರೆ. ಆದ್ದರಿಂದ ಅವರಿಗೆ ಶಿಕ್ಷಕರ ಯಾವ ಸಮಸ್ಯೆಗಳಾಗಲಿ, ಸರ್ಕಾರದ ಮಟ್ಟದಲ್ಲಿ ಶಿಕ್ಷಕರ ಸವಲತ್ತು, ಭತ್ಯೆ, ಸಂಬಳ, ಸಾರಿಗೆ ಹೇಗೆ ಕೊಡಿಸಬೇಕು, ಇದಕ್ಕೆ ಎಂದಾದರೂ ಅವರು ಹೋರಾಟ ಮಾಡಿದ್ದಾರೆಯೇ ಎಂದು ಲೋಕೇಶ್ ತಾಳಿಕಟ್ಟೆ ಅವರು ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯು ತ್ರಿಕೋನ ಸ್ಪರ್ಧೆಗೆ ತೀವ್ರ ಹಣಾಹಣಿ ನಡೆಯುವುದು ಖಚಿತವಾಗಿದ್ದು ಈ ಬಾರಿ ಶಿಕ್ಷಕರ ಸಮಸ್ಯೆಗಳಿಗೆ ಹೋರಾಟ ನಡೆಸಿದವರು, ನಡೆಸುತ್ತಿರುವವರನ್ನು ಆಯ್ಕೆ ಮಾಡುವ ಸಂಭವ ಹೆಚ್ಚಿದೆ ಎಂದು ಶಿಕ್ಷಕರ ವಲಯದಿಂದ ಕೇಳಿ ಬರುತಾ ಇದೆ.
ಈ ಬಾರಿ ಹಣ, ಜಾತಿ, ಬ್ಲಾಕ್‍ಮೇಲ್, ಶಿಕ್ಷಕರಿಗೆ ಉಡುಗೋರೆಯಂತಹ ಛೂಮಂತ್ರ ನಡೆಯುವುದಿಲ್ಲ, ನಾವು ಶಿಕ್ಷಕರು, ನಮಗೂ ಸರ್ಕಾರದ ಸವಲತ್ತು, ನಮಗೆ ನ್ಯಾಯ ದೊರಕಿಸಿ ಕೊಟ್ಟು ನಮ್ಮ ಪರವಾಗಿ ವಿಧಾನಸಭೆಯಲ್ಲಿ ಹೋರಾಟ ಮಾಡಿ, ಮಾತನಾಡುವಂತಹವರನ್ನು ಆಯ್ಕೆ ಮಾಡುತ್ತೇವೆ ಅನ್ನುತ್ತಾರೆ.