ದಾವಣಗೆರೆ : ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಲೋಕೇಶ್ ತಾಳಿಕಟ್ಟೆ (ಲೋಕೇಶ್ವರಪ್ಪ ಎಸ್) ಆದ ನಾನು ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುತ್ತೇನೆ, ಆದರೆ ಇಂದು ಕಾಂಗ್ರೆಸ್ ಪಕ್ಷವು ನನ್ನನ್ನು ಉಚ್ಛಾಟನೆ ಮಾಡಿರುವುದಾಗಿ ಆದೇಶವನ್ನು ಹೊರಡಿಸಿದೆ, ಇದರಿಂದ ಆತ್ಮೀಯ ಶಿಕ್ಷಕರು ಯಾವುದೇ ಕಾರಣಕ್ಕೂ ದೃತಿಗೆಡಬೇಕಾಗಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನಾನು ಈ ಹಿಂದೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದು ಸತ್ಯ, ಆದರೆ ನಾನು ಶಿಕ್ಷಕರ ಸಮಸ್ಯೆಗಳನ್ನು, ಶಿಕ್ಷಣ ಇಲಾಖೆಯಲ್ಲಿ ಮಹತ್ತರವಾದ ಬದಲಾವಣೆಯನ್ನು ತರಬೇಕು, ಜೊತೆಗೆ ಸ್ವಯಂ ನಾನೂ ಸಹ ಶಿಕ್ಷಕನಾಗಿರುವ ಕಾರಣ ಶಿಕ್ಷಕರ ಸಮಸ್ಯೆ, ಶಿಕ್ಷಣ ಸಂಸ್ಥೆಗಳ ಸಂಕಷ್ಟಗಳು ಏನು ಎಂಬುದು ಆಳವಾಗಿ ಗೊತ್ತಿರುವ ಕಾರಣ ನಾನು ಒಂದು ಪಕ್ಷದ ವತಿಯಿಂದ ಸ್ಪರ್ಧೆ ಮಾಡಿದಲ್ಲಿ ಶಿಕ್ಷಕರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಲು ಅಶಕ್ತನಾಗುತ್ತೇನೆ, ಆದ ಪರಿಣಾಮ ನಾನು ಸ್ವತಂತ್ರ್ಯವಾಗಿ ಸ್ಪರ್ಧೆ ಮಾಡುವುದಾಗಿ ನನ್ನ ಹಿತೈಷಿಗಳು, ಶಿಕ್ಷಕ ಮಿತ್ರರು ಸೇರಿದಂತೆ ರೂಪ್ಸಾ ಸಂಘಟನೆಯೊಂದಿಗೆ ಸುಧೀರ್ಘ ಚರ್ಚೆ ನಡೆಸಿದ ಬಳಿಕವಷ್ಟೇ ಅಂದರೆ ಕಳೆದ 11 ತಿಂಗಳ ಹಿಂದೆಯೇ ನಾನು ಆಗ್ನೇಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೇ ಮಾಡುತ್ತಿರುವುದಾಗಿ ಶಿಕ್ಷಕ ಮಿತ್ರರಲ್ಲಿ ಹೇಳಿಕೊಂಡು ಸಂಘಟನೆಯನ್ನು ಮಾಡಿಕೊಂಡು ಬಂದಿರುತ್ತೇನೆ.
ಏತನ್ಮಧ್ಯೆ ನಾನು ಎಲ್ಲಿಯೂ ಸಹ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂತಾಗಲೀ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಂದು ಎಲ್ಲಿಯೂ ಘೋಷಣೆ ಸಹ ಮಾಡಿಕೊಂಡಿಲ್ಲ, ಹೇಳಿಕೊಂಡು ಓಡಾಡಿಲ್ಲ ಎಂದು ಈ ಮೂಲಕ ಸ್ಪಷ್ಟ ಪಡಿಸುತ್ತಿದ್ದೇನೆ, ಜೊತೆಗೆ ನಾನು ಇದೀಗ ಸ್ವತಂತ್ರವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯ ಕಣದಲ್ಲಿದ್ದು ನಾನು ನನ್ನ ಸ್ನೇಹಿತರು, ಹಿತೈಷಿಗಳು, ಶಿಕ್ಷಕ ಬಂಧುಗಳು ಸೇರಿದಂತೆ ರೂಪ್ಸಾ ಸಂಘಟನೆಯ ಸದಸ್ಯರ ಬೆಂಬಲದಿಂದ ಅಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ.
ಈ ಮೂಲಕ ಶಿಕ್ಷಕ ಮಿತ್ರರಲ್ಲಿ ಮನವಿ ಮಾಡುವುದೇನೆಂದರೆ ಕಾಂಗ್ರೆಸ್ ಪಕ್ಷವು ನನ್ನ ಉಚ್ಛಾಟನೆ ಮಾಡಿರುವುದಾಗಿ ಘೋಷಣೆ ಮಾಡಿದೆ, ಇದರಿಂದ ನನ್ನ ಚುನಾವಣೆಗೆ ಯಾವುದೇ ರೀತಿಯಾದ ತೊಂದರೆ ಮತ್ತು ಅಡ್ಡಿ ಆಗುವುದಿಲ್ಲ, ಹಾಗಾಗಿ ಶಿಕ್ಷಕ ಮಿತ್ರರು ಗೊಂದಲಕ್ಕೆ ಒಳಗಾಗದೇ ನನ್ನನ್ನು ಅದವೇ ಶಿಕ್ಷಕನನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ, ಆಯ್ಕೆ ತಮ್ಮಗಳ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಿಕೊಡಬೇಕಾಗಿ ಈ ಮೂಲಕ ಕೋರುತ್ತೇನೆಂದು ತಮ್ಮ ಅಭಿಪ್ರಾಯವನ್ನು ಸ್ಪಷ್ಠಪಡಿಸಿದ್ದಾರೆ.