ಶ್ರೀ ಸತ್ಯ ಕೀರ್ತಿ ಕಲಾಸಂಘದಿಂದ ಕುರುಕ್ಷೇತ್ರ ನಾಟಕ ಆಯೋಜನೆ

ಕಲೆಯ ತವರೂರು ಕಲ್ಪತರನಾಡು ಎಂದು ಪ್ರಖ್ಯಾತಿ ಪಡೆದಿರುವ ನಡೆದಾಡುವ ದೇವರು ಪರಮಪೂಜ್ಯಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಕ್ಷೇತ್ರವಾದ ಹಾಗೂ ರಂಗಭೂಮಿಯ ತವರೂರಾದ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ದಿನಾಂಕ 05.05.2024ರ ಭಾನುವಾರದಂದು ಶ್ರೀ ಸತ್ಯ ಕೀರ್ತಿ ಕಲಾ ಸಂಘದ ವತಿಯಿಂದ ಹಾರ್ಮೋನಿಯಂ ಮಾಸ್ಟರ್ ಶ್ರೀ ರುದ್ರೇಶ್ ಹೈ.ವಿ ರವರ ನಿರ್ದೇಶನದಲ್ಲಿ ಕುರುಕ್ಷೇತ್ರ ಅಥವಾ ಭಗವದ್ಗೀತೆ ಎಂಬ ಸುಂದರ ಪೌರಾಣಿಕ ನಾಟಕವನ್ನು ಹಿರಿಯ ಹಾಗೂ ಕಿರಿಯ ಕಲಾವಿದರು ಸೇರಿಕೊಂಡು ತುಮಕೂರು ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕವನ್ನು ಪ್ರದರ್ಶನ ಮಾಡುತ್ತಿದ್ದು ರಾಜ್ಯದ ಎಲ್ಲಾ ಕಲಾವಿದರು ಕಲಾಪ್ರೊತ್ಸಾಹಕರು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸಬೇಕೆಂದು ಸತ್ಯ ಕೀರ್ಥಿ ಕಲಾ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿಯವರು ಮನವಿ ಮಾಡಿದ್ದಾರೆ.

 

ಇದೇ ದಿನದಂದು ಕುರುಕ್ಷೇತ್ರ ನಾಟಕದ ಪ್ರಯುಕ್ತ ಸರಳ ಸಜ್ಜನಿಕಿಯ ವ್ಯಕ್ತಿತ್ವ ಹೊಂದಿರುವ ಹಾಗೂ ಕಲಾ ಸರಸ್ವತಿಯನ್ನು ಹೋಲಿಸಿಕೊಂಡು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಹಲವಾರು ಪಾತ್ರಗಳಲ್ಲಿ ಅಭಿನಯಿಸಿ ತನ್ನದೇ ಆದ ಚಾಪು ಮೂಡಿಸಿಕೊಂಡಿರುವಂತಹ ತುಮಕೂರು ತಾಲೂಕಿನ ನರಸಾಪುರ ಗ್ರಾಮದ ಕಲಾವಿದರಾದ ಶ್ರೀ ಕೃಷ್ಣಪ್ಪನವರಿಗೆ ರಜತ ಕಿರೀಟ ದಾರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಈ ರಜತ ಕಿರೀಟ ಧಾರಣ ಕಾರ್ಯಕ್ರಮಕ್ಕೆ ಪರಮಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮವನ್ನು ನಡೆಸಲಾಗುವುದು ಮತ್ತು ರಜತ ಕಿರೀಟ ಧಾರಣೆಗೆ ಭಾಜನರಾಗಿರುವ ಶ್ರೀ ಕೃಷ್ಣಪ್ಪನವರು ಮತ್ತು ಅವರ ಮಾತೃಶ್ರೀ ಕೆಂಪಸಿದ್ದಮ್ಮನವರನ್ನು ತುಮಕೂರು ನಗರದ ಪ್ರಶಾಂತ್ ಚಿತ್ರಮಂದಿರದ ಮುಂಭಾಗದಿಂದ ಬೆಳ್ಳಿರಥದಲ್ಲಿ ಹಲವಾರು ಜಾನಪದ ಕಾರ್ಯಕ್ರಮಗಳೊಂದಿಗೆ ವಿಶೇಷವಾಗಿ ಮೆರವಣಿಗೆ ಮೂಲಕ ಶ್ರೀ ಗುಬ್ಬಿ ವೀರಣ್ಣ ಕಲಾಕ್ಷೇತ್ರಕ್ಕೆ ಕರೆತರಲಾಗುವುದು ಹಾಗಾಗಿ ಈ ಒಂದು ಸುಂದರ ಕಾರ್ಯಕ್ರಮಕ್ಕೆ ರಾಜ್ಯದ ಹಾಗೂ ತುಮಕೂರು ಜಿಲ್ಲೆಯ ಎಲ್ಲಾ ಕಲಾಪೋತ್ಸಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಲಾವಿದರನ್ನು ಆಶೀರ್ವದಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಯಪೂರ್ವಕವಾಗಿ ಸತ್ಯ ಕೀರ್ತಿ ಕಲಾಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸಂಘದ ಸರ್ವ ಸದಸ್ಯರು ವಿನಂತಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!