ರೋಗಿಗಳ ಮನೋಭಾವನೆಗೆ ತಕ್ಕಂತೆ ಕಾರ್ಯಕ್ಷಮತೆಯನ್ನು ಮಾಡಬೇಕಾಗಿದೆ ; ಎನ್.ವಿ.ಚಂದ್ರಶೇಖರ್

ಟಿ.ಬೇಗೂರಿನ ಶ್ರೀ ಸಿದ್ಧಾರ್ಥ ಶುಶ್ರೂಷಕರ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಫ್ಲಾರೆನ್ಸ್ ನೇಟಿಂಗೆಲ್ ಜನ್ಮದಿನೋತ್ಸವವನ್ನು ಆದರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎನ್.ವಿ.ಚಂದ್ರಶೇಖರ್ ಮಾತನಾಡಿ ರೋಗಿಗಳ ಮನೋಭಾವನೆಗೆ ತಕ್ಕಂತೆ ಕಾರ್ಯಕ್ಷಮತೆಯನ್ನು ಮಾಡಬೇಕಾಗಿದೆ ಎಂದರು.

 

 

 

ಕೋವಿಡ್ ಸಂದರ್ಭದಲ್ಲಿ ದಾದಿಯರು ತಮ್ಮ ಪ್ರಾಣದ ಹಂಗನ್ನು ತೊರೆದು ಸೇವೆ ಸಲ್ಲಿಸಿರುವುದು ಅವಿಸ್ಮರಣಿಯ, ರೋಗಿಗಳ ಲಾಲನೆ, ಪಾಲನೆ, ಎಲ್ಲಾ ಮೂಲ ಸೌಕರ್ಯಗಳ ಸಮೇತ ಹಾರೈಕೆ ಮಾಡಿರುವುದು ಇಂದಿಗೂ ಸಹ ನಮ್ಮ ಕಣ್ಣ ಮುಂದೆ ಇದೆ, ಫ್ಲಾರೆನ್ಸ್ ನೇಟಿಂಗೆಲ್‌ರವರ ಆದರ್ಶ ಗುಣಗಳನ್ನು ಶುಶ್ರೂಷಕ ವಿದ್ಯಾರ್ಥಿಗಳು ಅಳವಡಿಸಿಕೊಂಡು ಕೆಲಸ ನಿರ್ವಹಿಸುತ್ತಿರುವುದು ಸಂತೋಷಕರ ಸಂಗತಿ, ಅಂತಹ ಮಹಾನ್ ವ್ಯಕ್ತಿಗಳ ಜನ್ಮದಿನಾಚರಣೆಯನ್ನು ನಮ್ಮ ಸಂಸ್ಥೆಯಲ್ಲಿ ಹಮ್ಮಿಕೊಂಡಿರುವುದು ನಮಗೆ ಹೆಮ್ಮೆದಾಯಕವಾಗಿದೆ ಎಂದರು.

 

 

 

ಈ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಯ ಎಸ್.ಎನ್.ಸಿ.ಯು. ವಿಭಾಗದಲ್ಲಿ ನರ್ಸಿಂಗ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್.ಕೆ.ರಮೇಶ್‌ರವರು ಜಿಲ್ಲಾ ಆಸ್ಪತ್ರೆಯಲ್ಲಿ ಸಲ್ಲಿಸುತ್ತಿರುವ ಅಮೋಘ ಸೇವೆಯನ್ನು ಗುರ್ತಿಸಿ ಅವರಿಗೆ ಸನ್ಮಾನವನ್ನು ನೆರವೇರಿಸಲಾಯಿತು.

 

 

 

ಫ್ಲಾರೆನ್ಸ್ ನೈಟಿಂಗೇಲ್ ಜನ್ಮದಿನಾಚರಣೆಯ ಪ್ರಯುಕ್ತ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಾಂಶುಪಾಲೆ ಶರ್ಲಿ ಲೋಟೋ, ಪ್ರಾಧ್ಯಾಪಕರಾದ ದಿಲೀಪ್ ಕುಮಾರ್, ಪ್ರದೀಪ್ ಕಾಳೆ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!