ತುಮಕೂರು : ತುಮಕೂರು ಗ್ರಾಮಾಂತರದ ಭೈರಸಂದ್ರ ಗ್ರಾಮದಲ್ಲಿ ಬಡ ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿ ಮತ್ತು ಅವರು ಸ್ವಾಲಂಭಿಗಳಾಗಿ ಜೀವನ ನಡೆಸಲು ಪ್ರಾರಂಭಿಸಿರುವ ಕಾರ್ಖಾನೆಯೇ ಪ್ರಿಯಾ ಗಾರ್ಮೆಂಟ್ಸ್ ಎಂದು ಹೇಳಿದ ಮಾಲೀಕರಾದ ಜಿ.ಪಾಲನೇತ್ರಯ್ಯ.
ಅವರು ಇಂದು ತಮ್ಮ ಕಾರ್ಖಾನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ನಾನು ಶ್ರೀ ಸಿದ್ಧಗಂಗಾ ಪುಣ್ಯಕ್ಷೇತ್ರದಲ್ಲಿ ಓದಿ ಬೆಳೆದಂತಹವನಾಗಿದ್ದು, ನಾನು ತುಂಬಾ ಬಡತನದ ಮನೆಯಲ್ಲಿ ಹುಟ್ಟಿ ಬೆಳೆದು ಶಿವಕುಮಾರ ಮಹಾಸ್ವಾಮಿಗಳ ಆಶೀರ್ವಾದದಿಂದ ಇಂದು ಗಾರ್ಮೆಂಟ್ಸ್ ಕಾರ್ಖಾನೆಯನ್ನು ಪ್ರಾರಂಭಿಸಿದ್ದೇನೆ, ಈ ಕಾರ್ಖಾನೆಯಲ್ಲಿ ನಾವು ಈ ಭಾಗದ ಬಡ ಹೆಣ್ಣು ಮಕ್ಕಳಿಗೆ ಉದ್ಯೋಗ ಕಲ್ಪಿಸಿಕೊಡಬೇಕು ಎಂಬ ನನ್ನ ಬಹು ವರ್ಷಗಳ ಆಸೆ ಇಂದು ಈಡೇರಿರುವುದು ನನ್ನ ಸೌಭಾಗ್ಯವೆಂದು ಹೇಳಿದರು.
ಮುಂದುವರೆದು ಮಾತನಾಡಿ ಇಂದು ಬೆಳಿಗ್ಗೆ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ, ಹರಳೂರು ಶ್ರೀ ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿಗಳಾದ ಚನ್ನಬಸವ ಸ್ವಾಮೀಜಿಗಳು, ತುಮಕೂರು ಗ್ರಾಮಾಂತರ ಮಾಜಿ ಶಾಸಕರಾದ ಡಿ.ಸಿ.ಗೌರಿಶಂಕರ್ ಸೇರಿದಂತೆ ಅಪಾರ ಗಣ್ಯವ್ಯಕ್ತಿಗಳು ಇಂದು ಆಗಮಿಸಿ ಕಾರ್ಖಾನೆಯನ್ನು ಲೋಕಾರ್ಪಣೆ ಮಾಡಿರುವುದು ನನಗೆ ಅತೀವ ಸಂತಸ ತಂದಿದ್ದು, ಈ ಭಾಗದ ಹೆಣ್ಣು ಮಕ್ಕಳನ್ನು ಈಗಾಗಲೇ ಗಾರ್ಮೆಂಟ್ಸ್ ಕೆಲಸಕ್ಕೆ ನೇಮಕಾತಿ ಮಾಡಿಕೊಂಡಿದ್ದೇವೆ, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನೇಮಕಾತಿ ಮಾಡಿಕೊಳ್ಳಲಾಗುವುದೆಂದು ತಿಳಿಸಿದರು.
ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ಸಾವಿರಾರು ಹೆಣ್ಣು ಮಕ್ಕಳಿಗೆ ಉದ್ಯೋಗ ಕಲ್ಪಿಸುವ ಸೌಭಾಗ್ಯ ನನ್ನದಾಗಿದೆಂದರೆ ತಪ್ಪಾಗಲಾರದು, ಗಾರ್ಮೆಂಟ್ಸ್ ಕೆಲಸಕ್ಕೆ ಆಗಮಿಸುವ ಹೆಣ್ಣು ಮಕ್ಕಳಿಗೆ ಸಾರಿಗೆ, ಪಿ.ಎಫ್, ವಿಮೆ, ಸೇರಿದಂತೆ ಉತ್ತಮ ಗುಣಮಟ್ಟದ ಕ್ಯಾಂಟೀನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಗ್ರಾಮೀಣ ಭಾಗದ ಬಡ ಹೆಣ್ಣು ಮಕ್ಕಳು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ಹೇಳಿದರು.