ತುಮಕೂರು : ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಿಂದ ಟೌನ್ ಹಾಲ್ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ ವತಿಯಿಂದ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು.
ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳಾದ ಶುಭಾ ಕಲ್ಯಾಣ್, ಮಹಾನಗರ ಪಾಲಿಕೆ ಆಯುಕ್ತರಾದ ಬಿ.ವಿ.ಆಶ್ವಿಜ, ತುಮುಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀನಿವಾಸನ್ ಜಿ ಹಸಿರು ಬಾವುಟವನ್ನು ಹಾರಿಸುವುದರ ಮೂಲಕ ಚಾಲನೆಯನ್ನು ನೀಡಿದರು.
ಈ ಕುರಿತು ಜಿಲ್ಲಾಧಿಕಾರಿಗಳು ಶುಭಾ ಕಲ್ಯಾಣ್ರವರು ಮಾತನಾಡಿ ಮತಪತ್ರವನ್ನು ಹೊಂದಿರುವ ಪ್ರತಿಯೊಬ್ಬ ನಾಗರೀಕರು ಈ ಭಾರಿಯ ಚುನಾವಣೆಯಲ್ಲಿ ಮತದಾನವನ್ನು ಮಾಡುವುದರ ಮೂಲಕ ನಮ್ಮ ಹಕ್ಕನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕು ಎಂದು ಹೇಳಿದರು.
ತುಮುಲ್ ಎಂ.ಡಿ. ಶ್ರೀನಿವಾಸನ್ ರವರು ಮಾತನಾಡಿ ಈ ಭಾರಿ ವಿಶೇಷವಾಗಿ ನಮ್ಮ ತುಮುಲ್ ನೌಕರರ ವತಿಯಿಂದ ಕಾಲ್ನಡಿಗೆಯಲ್ಲಿ ಮತದಾರರ ಜಾಗೃತಿ ಅಭಿಯಾನವನ್ನು ಮಾಡಿ ಪ್ರತಿಯೊಬ್ಬ ಪೌರರು ತಮ್ಮ ಹಕ್ಕನ್ನು ಚಲಾಯಿಸುವುದರ ಮೂಲಕ ನಮ್ಮ ಉತ್ತಮ ನಾಗರೀಕರಾಗಬೇಕಾಗಿದೆ ಇದರ ಸಲುವಾಗಿ ನಾವು ಇಂದು ಜಾಗೃತಿ ಅಭಿಯಾನವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.